ಠಾಕರೆ ಹಾಗೂ ಶಿವಸೇನೆ ವಿರುದ್ಧಕ್ರಮ ಕೈಗೊಳ್ಳಿ: ದತ್ತ ಭಾಸಗಿ

0
16

ಕಲಬುರಗಿ: ಬೆಳಗಾವಿಯಲ್ಲಿ ರಾಜಾರೋಷವಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹೇಳಿಕೆ ಆಧಾರದ ಮೇಲೆ ಕನ್ನಡದಧ್ವಜವನ್ನು ಸುಟ್ಟು ಹಾಕಿರುವ ಮುಖ್ಯಮಂತ್ರಿಉದ್ಭವಠಾಕರೆ ಹಾಗೂ ಶಿವಸೇನೆ ಕಾರ್ಯಕರ್ತರ ವಿರುದ್ದ ಸೂಕ್ತ ಕಾನೂನಿನ ಕ್ರಮಕೈಗೊಳ್ಳಬೇಕೆಂದು ಜೈಕನ್ನಡಿಗರ ಸೇನೆ ಅದ್ಯಕ್ಷದತ್ತು ಭಾಸಗಿ ಆಗ್ರಹಿಸಿದ್ದಾರೆ.

ಅವರು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಎದುರಿಗೆ ಮಹಾ ಮುಖ್ಯಮಂತ್ರಿಉದ್ಭವಠಾಕರೇ ಭಾವಚಿತ್ರ ದಹಿಸಿ, ಜಿಲ್ಲಾಧಿಕಾರಿಗಳ ಮುಖಾಂತರರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿ, ಕನ್ನಡ ಬಾವುಟವನ್ನು ಧ್ವಂಸಗೊಳಿಸಿ, ಸುಟ್ಟು ಹಾಕಿರುವುದುಖಂಡನೀಯ.ಅಲ್ಲದೆಅದನ್ನು ವಿರೋಧಿಸಲು ಹೋಗಿದ್ದಇಬ್ಬರುಕಾರ್ಯಕರ್ತರನ್ನು ಪೋಲಿಸರು ಬಂಧಿಸಿದ್ದು ತುಂಬಾ ಅವಹೇಳಕಾರಿಯಾಗಿರುವ ಸಂಗತಿಯಾಗಿದೆಎಂದರು.

Contact Your\'s Advertisement; 9902492681

ಶೀಘ್ರವೇ ಇಬ್ಬರುಕಾರ್ಯಕರ್ತರನ್ನು ಬಿಡುಗಡೆಗೊಳಿಸಿ, ಕನ್ನಡದ ಬಾವುಡಟವನ್ನು ಸುಟ್ಟು ಧ್ವಂಸಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ, ಅವರ ವಿರುದ್ದ ಸೂಕ್ತ ಕಾನೂನಿನ ಕ್ರಮವನ್ನುಜರುಗಿಸಬೇಕೆಂದುಆಗ್ರಹಿಸುತ್ತೇವೆ. ಒಂದು ವೇಳೆ ಎರಡು ದಿನಗಳಲ್ಲಿ ಕ್ರಮಕೈಗೊಳ್ಳದೇ ಇದ್ದಲ್ಲಿ, ನಮ್ಮ ಸಂಘಟನೆಯಿಂದ ಮತ್ತುಕಲ್ಯಾಣಕರ್ನಾಟಕದ ಭಾಗದಕನ್ನಡ ಪರ ಸಂಘಟನೆಗಳಿಂದ ಉಗ್ರವಾದ ಹೋರಾಟ ಮಾಡಲಾಗುವುದುಎಂದುಎಚ್ಚರಿಕೆ ನೀಡಿದರು.

ಈ ಹೋರಾಟದಲ್ಲಿಏನಾದರೂ ಹೆಚ್ಚು ಕಡಿಮೆ, ಅನಾಹುತ ನಡೆದರೂ, ಅದಕ್ಕೆ ಸರಕಾರವೇ ಹೊಣೆಎಂದು ಹೇಳಿದರು.ಈ ಸಂದರ್ಭದಲ್ಲಿರಾಮಾ ಪೂಜಾರಿ, ಶಿವು ಮಡಕಿ, ಹುಸೆನ, ವಿಠ್ಠಲ ಪೂಜಾರಿ, ಸುರೇಶಕುಂಬಾರ, ಆಕಾಶ ಚವ್ಹಾಣ, ಶರಣುಕಡಗಂಚಿ, ಆನಂದ, ಪಪ್ಪು ಕುಮಸಿ, ಆಕಾಶ ಚಿಂಚೋಳಿ, ಚೇತನ ಸೇರಿದಂತೆ ಹಲವಾರುಕಾರ್ಯಕರ್ತರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here