ಕಲಬುರಗಿ: ಶ್ರೀ ದತ್ತ ಜಯಂತಿ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಚೌಡೇಶ್ವರಿ ಕಾಲೋನಿ ಮಾತಾ ಮಾಣಿಕೇಶ್ವರಿ ದೇವಸ್ಥಾನ ದಿಂದ ಸುಕ್ಷೇತ್ರ ಯಾನಗುಂದಿಗೆ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.
ಪ್ರತಿವರ್ಷ ನಮ್ಮ ಬಡಾವಣೆಯಿಂದ ಸಾಕಷ್ಟು ಜನರು ಪಾದಯಾತ್ರೆ ಮೂಲಕ ಪವಿತ್ರವಾದ ಯಾನಾಗುಂದಿಗೆ ಪುನಿತರಾಗುತ್ತೇವೆ ಎಂದು ಪಾದಯಾತ್ರೆ ಮಂಡಳಿಯ ರೂವಾರಿ ರಾಜು ಸೊನ್ನ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಶಿವರಾಜ ಕಿರಸಾವಳಗಿ , ದಿಲೀಫ ಕಿರಸಾವಳಗಿ, ಶರಣು ಕಲ್ಬುರ್ಗಿ, ಜಗನ್ನಾಥ ಬಿದನೂರ, ಆಕಾಶ ಜೋಗಿ, ಗುರುಶರಣ ಜಮಾದಾರ, ರಾಹುಲ್ ಹಾದಿಮನಿ, ಆಕಾಶ ಜೋಗಿ, ಸಂಗಮೇಶ ಸರಡಗಿ, ಮಹೇಶ ಫರಹತಾಬಾದ, ದತ್ತು, ಲಕ್ಷ್ಮೀಕಾಂತ, ವಿಶಾಲ, ಶರಣು ಪೂಜಾರಿ, ವಿದ್ಯಾ ಸಾಗರ ಕೂಡಿ ಸೇರಿದಂತೆ ಹಲವರಿದ್ದರು .