ಹವಾಮಾನ ವೈಪರಿತ್ಯ : ಪ್ರಚಲಿತ ಕೃಷಿ ಕುರಿತು ಕಾರ್ಯಗಾರ

0
11

ಕಲಬುರಗಿ: ವಲಯ ಕೃಷಿ ಸಂಶೋಧನಾ ಕೇಂದ್ರ ಕಲಬುರಗಿಯಲ್ಲಿ ಪ್ರಚಲಿತ ಕೃಷಿ ಚಟುವಟಿಕೆ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾದ ಸಮದ್ ಪಟೇಲ್, ಉಪ ಕೃಷಿ ನಿರ್ದೇಶಕರು ಇವರು ಮಾತನಾಡುತ್ತಾ ಕಾರ್ಯಗಾರದ ಪ್ರಾಮುಖ್ಯತೆ ವಿವರಿಸಿದರು. ಎಲ್ಲಾ ಕೃಷಿ ಅಧಿಕಾರಿಗಳು ವಿಜ್ಞಾನಿಗಳೊಂದಿಗೆ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಗಾರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.

ರೈತರು ತೊಗರಿ & ಕಡಲೆ ಬೆಳೆಗಳಲ್ಲಿ ಹವಾಮಾನ ವೈಪರಿತ್ಯ ಹಾಗೂ ವಿವಿಧ ರೋಗಗಳಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ ಅದಕ್ಕೆ ಕಾರಣಗಳನ್ನು ತಿಳಿದುಕೊಂಡು ರೈತರು ಮುಂಜಾಗ್ರತೆ ವಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಕೆ.ವಿ,ಕೆ ಮುಖ್ಯಸ್ಥರಾದ ಡಾ. ರಾಜು ತೆಗ್ಗಳ್ಳಿಯವರು ಮಾತನಾಡುತ್ತಾ ಕೃಷಿ ಸಂಶೋಧನಾ ಕೇಂದ್ರದಲ್ಲಿನ ಹೊಸ ತಾಂತ್ರಿಕತೆಗಳ ಮಾಹಿತಿ ಪಡೆದು ಅದನ್ನು ರೈತರಿಗೆ ಪ್ರಚಾರಪಡಿಸಬೇಕೆಂದು ತಿಳಿಸಿದರು.

Contact Your\'s Advertisement; 9902492681

ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ.ಎಂ.ಧನೋಜಿ ರವರು ಅಧ್ಯಕ್ಷಿಯ ಭಾಷಣ ಮಾಡುತ್ತಾ, ಈ ಹಿಂದೆ ತೊಗರಿಗೆ ಒಂದು ಅಥವಾ ಎರಡು ರೋಗ ಮತ್ತು ಕೀಟಗಳಿದ್ದು ಇತ್ತೀಚೆಗೆ ಸಾಕಷ್ಟು ಸಮಸ್ಯೆಗಳು ಕಂಡುಬರುತ್ತಿವೆ. ಈ ಸವಾಲಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು.

ಜಂಟಿ ಕೃಷಿ ನಿರ್ದೇಶಕರಾದ ರತೇಂದ್ರನಾಥ ಸೂಗೂರು ಸಹ ಕಾರ್ಯಗಾರದಲ್ಲಿ ಭಾಗವಹಿಸಿ ತಮ್ಮ ಇಲಾಖೆ ಸಿಬ್ಬಂದಿಗಳೊಂದಿಗೆ ವಿವಿಧ ಕೃಷಿ ಪ್ರಚಲಿತ ವಿಷಯಗಳ ಕುರಿತು ಚರ್ಚೆ ನಡೆಸಿದರು ಹಾಗು ಕಾರ್ಯಗಾರದ ಸದುಪಯೋಗ ಪಡಿಸಕೊಳ್ಳಬೇಕೆಂದು ಅಭಿಪ್ರಾಯ ಪಟ್ಟರು. ಡಾ. ಅನುಸುಯಾ ಹೂಗಾರ ಉಪ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಕಲಬುರಗಿ-೧ ಇವರು ಸಹ ಈ ಕಾರ್ಯಗಾರ ಅಯೋಜಿಸಲು ಕಾರಣಿ ಭೂತರಾಗಿದ್ದು ಪ್ರಚಲಿತ ಕೃಷಿ ವಿದ್ಯಾಮಾನಗಳ ಕುರಿತು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳಾದ ಡಾ.ರಾಚಪ್ಪ ವ್ಹಿ. ಹಾವೇರಿ, ಕ್ಷೀಪ್ರ ಸಂಚಾರ ಸಮೀಕ್ಷಾ ವರದಿ ಸಾರಾಂಶ ಮಂಡಿಸಿದರು ಹಾಗು ತೊಗರಿ ಖಂಡಾಗಲು ಕಾರಣ ಮತ್ತು ನಿರ್ವಹಣೆ ಮಾಹಿತಿ ನೀಡಿದರು. ಡಾ. ಮಲ್ಲಿಕಾರ್ಜುನ ಕೆಂಗನಾಳ ಇವರು ದ್ವಿದಳ ದಾನ್ಯಗಳಲ್ಲಿ ಕಂಡು ಬರುತ್ತಿರುವ ಹೊಸ ರೋಗಗಳ ಪರಿಚಯ, ಉಲ್ಬಣಕ್ಕೆ ಕಾರಣಗಳು ಮತ್ತು ನಿರ್ವಹಣೆ ಮಾಹಿತಿ ನೀಡಿದರು. ಡಾ.ಮುನಿಸ್ವಾಮಿ ಎಸ್. ಇತ್ತೀಚೆಗೆ ಬಿಡುಗಡೆಯಾದ ತೊಗರಿ ತಳಿಗಳ ಗುಣಲಕ್ಷಣಗಳು ಕುರಿತು ಮಾಹಿತಿ ಮಾಡಿಕೊಟ್ಟರು.

ಕಾರ್ಯಗಾರ ನಂತರ ಕ್ಷೇತ್ರ ಬೇಟಿ ಅಯೋಜಿಸಲಾಗಿದ್ದು ಡಾ. ಲಕ್ಷುಮಣ, ಸೇರಿದಂತೆ ವಲಯ ಕೃಷಿ ಸಂಶೋಧನಾ ಕೇಂದ್ರ ಹಾಗು ಕೆ,ವಿ.ಕೆ ಕಲಬುರಗಿಯ ಎಲ್ಲಾ ವಿಜ್ಞಾನಿಗಳು ಕ್ಷೇತ್ರ ಭೇಟಿಯಲ್ಲಿ ಭಾಗವಹಿಸಿ ನೂತನ ತಾಂತ್ರಿಕತೆಗಳ ಕುರಿತು ಕೃಷಿ ಇಲಾಖೆ ಅಧಿಕಾರಿಗಳಗೆ ಮಾಹಿತಿ ಮಾಡಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಸುಮಾರು ೧೦೩ ಜನ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here