ಕಲಬುರಗಿ: ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

0
11

ಕಲಬುರಗಿ: ಕೇಂದ್ರ ಸರ್ಕಾರದ ದೇಶದಲ್ಲಿ ‘ ಸಾರ್ವಜನಿಕ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುತ್ತಿರುವುದನ್ನು ಖಂಡಿಸಿ’ ವಿವಿಧ ಸಂಘಟನೆಗಳಿಂದ ಕೂಡಿದ ಯುನೈಟೆಡ್ ಫೆÇೀರ್‍ಂ ಆಫ್ ಬ್ಯಾಂಕ್ ಯೂನಿಯನ್ ವತಿಯಿಂದ ನಗರದ ಜಗತ್ ವೃತ್ತದಲ್ಲಿ ಇಂದು ಸಿಬ್ಬಂದಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಬ್ಯಾಂಕ್‍ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಚಳಿಗಾಲ ಅಧಿವೇಶನದಲ್ಲಿ ಖಾಸಗೀಕರಣ ಮಸೂದೆ ಮಂಡಿಸಲು ಸಜ್ಜುಗೊಂಡಿದೆ, ಈ ಕಾಯ್ದೆಯಿಂದಾಗಿ ಇಡೀ ದೇಶವೇ ಬಂಡವಾಳಶಾಹಿಗಳಿಗೆ ವಹಿಸುವ ಕೃತ್ಯ ನಡೆಯುತ್ತಿದೆ. ಕೂಡಲೇ ಈ ನಿರ್ಧಾರ ಕೈ ಬಿಡಬೇಕು ಇಲ್ಲದಿದ್ದರೇ ನಾವು ಪ್ರತಿಭಟನೆ ಹಿಂಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿ ಕೇಂದ್ರಕ್ಕೆ ಎಚ್ಚರಿಸಿದ್ದಾರೆ.

Contact Your\'s Advertisement; 9902492681

ಖಾಸಗೀಕರಣ ವಿರೋಧಿಸಿ ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿಗಳು ಎರಡು ದಿನಗಳ ಕಾಲ ನಿರಂತರ ಮುಷ್ಕರದಲ್ಲಿ ತೊಡಗಿಕೊಳ್ಳಲಿದ್ದು, ಎರಡು ದಿನದಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ದೇಶದ ಉಳಿವಿಗಾಗಿ ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆಗೆ ಸಿದ್ಧರಿದ್ದೇವೆಂದು ಪ್ರತಿಭಟನಾ ನಿರತರು ಈ ಸಂದರ್ಭದಲ್ಲಿ ತಿಳಿಸಿದರು.

ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕುಗಳ ಖಾಸಗೀಕರಣ ಸೇರಿದಂತೆ ವಿವಿಧ ರೀತಿಯ ನಿಬಂಧನೆಗಳನ್ನು ಜಾರಿಗೊಳಿಸಿ ಸಂಪೂರ್ಣವಾಗಿ ಬ್ಯಾಂಕುಗಳನ್ನು ಸರ್ವನಾಶ ಮಾಡುವಂತಹ ಹುನ್ನಾರ ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ. ಹೀಗಾಗಿ ಕಾಯ್ದೆ ಮಾಡುವಂತಹ ಕ್ರಮವನ್ನು ಈಗಲೇ ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.

ಸಾರ್ವಜನಿಕ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡಿಕೊಂಡು ಉದ್ಯಮಿಗಳಿಗೆ ಮಾರಾಟ ಮಾಡುವಂತಹ ಹುನ್ನಾರ ಕೇಂದ್ರ ಬಿಜೆಪಿ ಸರ್ಕಾರ ಮಾಡುತ್ತಿದೆ , ಅಲ್ಲದೇ ಬ್ಯಾಂಕುಗಳನ್ನು ಖಾಸಗೀಯವರಿಗೆ ವಹಿಸಿ ಜನಸಾಮಾನ್ಯರಿಗೆ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಸಾಧ್ಯತೆ ಹೆಚ್ಚಳ ಎಂದು ಪ್ರತಿಭಟನಾಕಾರರಾದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಚಂದ್ರಮೋಹನ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಖಾಸಗೀಕರಣ ಮಾಡಿದರೆ ಮಧ್ಯಮವರ್ಗದ ಜನರು ಸೇರಿದಂತೆ ಬಡವರ್ಗದವರಿಗೆ ಬ್ಯಾಂಕ್‍ಗಳಲ್ಲಿ ಅವಕಾಶಗಳಿಂದ ವಂಚಿತರಾಗುತ್ತಾರೆ, ಕೇವಲ ಉದ್ಯಮೀಕರಣಗೊಳಿಸುವಂತಹ ಪ್ರಕ್ರಿಯೆಯು ಕೇಂದ್ರದ ಹಣಕಾಸು ಇಲಾಖೆ ಮಾಡುತ್ತಿದೆ. ಈ ತರಹದ ನಡೆ ಖಂಡನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಜಯಲಕ್ಷ್ಮೀ ಮುಕ್ಕಾ , ರವಿಶಂಕರ್ ಹೊನಗುಂಡಿ, ನಾರಾಯಣ್ ರೂಗಿ, ರವಿಗೌಡ, ಶ್ರೀಧರ್, ಸತೀಶ್ ಜೋಶಿ, ಸಂತೋಷ ಪಾಟೀಲ, ಗಂಗಾರಮ,ರಾಮ ಧರ್ಗಿ, ವಿದ್ಯಾ ಮೋಸಲಗಿ ಸೇರಿದಂತೆ 300ಕ್ಕೂ ಹೆಚ್ಚಿನ ಬ್ಯಾಂಕ್ ಸಿಬ್ಬಂದಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here