ರಾಜ್ಯದ ರೈತರ ಹಿತ ಕಾಪಾಡುವ ನಾಯಕ ಕುಮಾರಣ್ಣ: ರಾಜಾ

0
15

ಶಹಾಬಾದ:ಈ ರಾಜ್ಯದ ರೈತರ ಹಿತ ಕಾಪಾಡುವ ಏಕೈಕ ನಾಯಕ ಎಂದರೆ ಕುಮಾರಣ ಒಬ್ಬರೇ ಎಂದು ಜೆಡಿಎಸ್ ಅಧ್ಯಕ್ಷ ರಾಜಮಹ್ಮದ್ ರಾಜಾ ಹೇಳಿದರು.

ಅವರು ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ೬೫ನೇ ಜನ್ಮದಿನಾಚರಣೆ ನಿಮಿತ್ತ ನಗರದ ಎನ್.ಸಿ. ಇಂಗಿನಶೆಟ್ಟಿ ಶಾಲೆಯ ಮಕ್ಕಳಿಗೆ ಜೆಡಿಎಸ್ ಪಕ್ಷದ ವತಿಯಿಂದ ನೋಟ್ ಬುಕ್, ಪೆನ್, ಸಿಹಿ ತಿಂಡಿ ವಿತರಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಮುಖ್ಯಮಂತ್ರಿ ಕುಮಾರಸ್ವಾಮಿ ಅವರದ್ದು ಸರಳ ವ್ಯಕ್ತಿತ್ವ.ಜನರಿಗೆ ಅದರಲ್ಲೂ ರೈತಾಪಿ ವರ್ಗದವರಿಗೆ ಸಹಾಯ ಮಾಡುವ ಮೂಲಕ ಜನನಾಯಕರಾಗಿ ಪ್ರೀತಿ ಗಳಿಸಿದ್ದಾರೆ.ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರ ಹಲವಾರು ಒಳ್ಳೆಯ ಯೋಜನೆಗಳನ್ನು ತಂದು ಉತ್ತಮ ಕೆಲಸ ಮಾಡುವ ಮೂಲಕ ರಾಜ್ಯದ ಜನತೆಯ ಹೃದಯದಲ್ಲಿ ಸ್ಥಾನಗಿಟ್ಟಿಸಿಗೊಂಡಿದ್ದರು. ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಬೇಕಾದರೆ ಕೆಲವು ಒತ್ತಡಗಳು ಬುರುವುದು ಸಹಜ.ಅದನ್ನೆಲ್ಲಾ ನಿಭಾಯಿಸಿಕೊಂಡು ಹೋಗುವ ಮೂಲಕ ಮತ್ತೆ ಒಳ್ಳೆಯ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರಕ್ಕೆ ಇಂದು ಉನ್ನತವಾದ ವಿಚಾರಗಳನ್ನು ಮತ್ತು ಉದ್ದೇಶಗಳನ್ನು ಹೊಂದಿರುವ ರಾಜಕಾರಣಿಗಳ ಅವಶ್ಯಕತೆಯಿದೆ.ಅಂತಹ ವಿಚಾಧಾರೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅತೀ ಕಿರಿಯ ವಯಸ್ಸಿನಲ್ಲಿಯೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿ ರಾಜ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.ಹಲವಾರು ಜನಪ್ರೀಯ ಕಾರ್ಯಕ್ರಮಗಳ ಮೂಲಕ ಇಂದಿಗೂ ಕೂಡ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.

ಮಕ್ಕಳು ಕಷ್ಟಪಟ್ಟು ಅಭ್ಯಸಿಸುವ ಮೂಲಕ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪೈಪೋಟಿ ಎದುರಾಗಿದೆ.ಆದ್ದರಿಂದ ಮಕ್ಕಳು ಆಟದೊಂದಿಗೆ ಪಾಠಕ್ಕೂ ಮಹತ್ವ ಕೊಡಬೇಕು. ಪ್ರತಿಯೊಂದು ವಿಷಯಗಳ್ಲೂ ಹೆಚ್ಚಿನ ಅಂಕಗಳನ್ನು ಪಡೆದುಕೊಂಡು ಕಲಿಸಿದ ಗುರುಗಳಿಗೂ, ಕಲಿತ ಶಾಲೆಗೂ ಕೀರ್ತಿ ತರಬೇಕೆಂದು ಸಲಹೆ ನೀಡಿದರು.ಅಲ್ಲದೇ ಕೊರೊನಾ ಹಾಗೂ ಒಮಿಕ್ರಾನ್ ಆತಂಕವಿರುವುದರಿಂದ ಕೇವಲ ಸರಳವಾಗಿ ಕಾರ್ಯಕ್ರಮ ಆಚರಣೆ ಮಾಡಿದ್ದೆವೆ ಎಂದರು.

ನಗರಸಭೆ ಸದಸ್ಯ ಮಹ್ಮದ ಅಮ್ಜದ ಹುಸೇನ, ಹೀರಾಲಾಲ ಪವಾರ, ಬಸವರಾಜ ಮಯೂರ, ಬಸವರಾಜ ದಂಡಗುಲಕರ್, ಅಬ್ದುಲ್ ರಶೀದ, ಮಹ್ಮದ ಅಜರ್, ಸುನೀಲ ಚವ್ಹಾಣ್, ಚಾಂದ ಪಾಶಾ, ಸುಭಾಷ ಸಾಕ್ರೆ, ಮಹ್ಮದ ಉಬೇದುಲ್ಲಾ,ಮಹೇಬೂಬ ಗೋಗಿ, ಶ್ರೀಧರ ಕೊಲ್ಲೂರ, ಸುನೀನ ಸೂರ್ಯವಂಶಿ, ವಿಶ್ವರಾಜ ಫಿರೋಜಾಬಾದ, ರಮೇಶ ಕುಮಾರ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here