8ನೇ ಜಿಲ್ಲಾ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮ್ಮೇಳನ

0
85

ಕಲಬುರಗಿ: ಗ್ರಾಮೀಣ ಪ್ರದೇಶ, ಆಳಂದ ಚಿತ್ತಾಪುರ, ಅಫ್ಜಲಪುರ ತಾಲ್ಲೂಕುಗಳಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 8ನೇ ಜಿಲ್ಲಾ ಸಮ್ಮೇಳನವು ತಾಜ ಸುಲ್ತಾನಪೂರ ಗ್ರಾಮದಲ್ಲಿ ನಡೆಯಿತು.

ಸಮ್ಮೇಳನದ ಸಭಾಂಗಣದಲ್ಲಿ ಜನವಾದಿ ಮಹಿಳಾ ಸಂಘಟನೆಯ ಧ್ವಜಾರೋಹಣವನ್ನು ಹಿರಿಯ ಮಹಿಳಾ ಸಂಗಾತಿ ಅಮೀನಾ ಬೇಗಂ ನೆರವೇರಿಸಿದರು. ಸಮ್ಮೇಳನದ ಉದ್ಘಾಟನೆಯು ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿಮಲ ಕೆ ಎಸ್‌ ಇವರು ಮಾಡಿದರು. ನಂತರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರೇ ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆ ನಮ್ಮ ಮುಂದಾಗಿದೆ, ಸಮಸ್ಯೆಗಳಿಗೆ ಕುರುಡಾಗಿ, ಕಿವುಡಾಗಿತನ್ನನ್ನೇತಾನು ಮಾರಾಟ ಮಾಡಿಕೊಳ್ಳುತ್ತಿರುವ ಶಾಸಕರು, ಇಂಥ ಬೇಜವಾಬ್ದಾರಿ ಮತ್ತು ಹೊಣೆಗೇಡಿಯಾಗಿರುವವರನ್ನು ಖರೀದಿಸಿ ದೇಶದ ಪ್ರಜಾಪ್ರಭುತ್ವವನ್ನು ನಾಶಗೊಳಿಸೆಲು ಹೋರಟಿರುವ ಬಿಜೆಪಿಯ ಅಪರೇಷನ್ ದುಷ್ಟಾಟವು ಅತ್ಯಂತ ಅಪಾಯಕಾರಿಯಾದದ್ದು. ಇತ್ತ ಬರಗಾಲದಲ್ಲಿ ಜನತೆಯು ಹೈರಾಣಾಗುತ್ತಿದ್ದಾರೆ, ಮಹಿಳೆಯರ ಮೇಲೆ ಅತ್ಯಾಚಾರ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಸಂಘಟನೆಯ ರಾಜ್ಯಉಪಾಧ್ಯಕ್ಷೆ ವಿಮಲ ಕೆ ಎಸ್‌ ಕಳವಳ ವ್ಯಕ್ತ ಪಡಿಸಿದರು.

Contact Your\'s Advertisement; 9902492681

ಇಂತಹಜ್ವಲಂತ ಸಮಸ್ಯೆಗಳನ್ನು ನೇಪಥ್ಯಕ್ಕೆದೂಡುತ್ತಿರುವರಾಜಕೀಯಕ್ರೌರ್ಯವನ್ನುಜನವಾದಿ ಮಹಿಳಾ ಸಂಘಟನೆಯುತೀವ್ರವಾಗಿಖಂಡಿಸುತದೆ.ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ, ಸ್ವಾವಲಂಬಿ ಬದುಕಿಗಾಗಿ, ಮಹಿಳಾ ಸಮಾನತೆಗಾಗಿ ಹೋರಾಟದ ಮೂಲಕ ಮಹಿಳೆಯರು ಎತ್ತರದಕಂಠದಿಂದ ಮಾತಾಡಬೇಕಿದೆ.ಆದ್ದರಿಂದಲೇ ಅಖಿಲ ಭರತಜ ನವಾದಿ ಮಹಿಳಾ ಸಂಘಟನೆಯು ಹಿಂಸೆ ಮತ್ತು ದೌರ್ಜನ್ಯ ಮುಕ್ತ ಮತ್ತು ಸೌಹಾರ್ದ ಬದುಕಿಗಾಗಿ ಸಮ್ಮೇಳನ ನಡೆಸುತಿದೆ ಎಂದು ಕರೆ ನೀಡಿದರು.

ಇಡೀದೇಶವನ್ನೇ ಫ್ಯಾಸಿಜಂ ಕ್ರೌರ್ಯಕ್ಕೆದೂಡಲು ಹೊರಟಿರುವ ಕಾರ್ಪೋರೇಟ್ ಸ್ನೇಹಿ ಪ್ರಭುತ್ವವು ಕೋಮುವಾದವನ್ನು ಹರಡುತಿದೆ. ಮತ್ತು ಅಲ್ಪಸಂಖ್ಯಾತ, ದಲಿತರ ಬದುಕನ್ನು ಭಯದ ಕೂಪಕ್ಕೆ ತಳ್ಳುತ್ತಿದೆ. ಜನವಾದಿ ಮಹಿಳಾ ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸುತದೆ, ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸಲು ನಿರಂತರ ಶ್ರಮಿಸುತಿದೆ. ಇದರ ಭಾಗವಾಗಿಯೇ ಸಂವಿಧಾನ ಉಳಿಸಿ ಅಭಿಯಾನದಲ್ಲಿ ತೊಡಗಿಸಿಕೊಂಡಿದೆ. ಮನುಸ್ಮೃತಿಯನ್ನು ಕಿತ್ತೆಸೆದು ಸಂವಿಧಾನವನ್ನು ಜನಮಾನಸದ ಹೃದಯಕ್ಕೆ ತಲುಪಿಸಬೇಕಿದೆ. ಮತ್ತು ಸರಕಾರಗಳು ಸಂವಿಧಾನದ ಪ್ರಕಾರವೇ ನಡೆದುಕೊಳ್ಳುವಂತೆ ಆಗ್ರಹಿಸಬೇಕಿದೆ. ಎಂದು ಹೇಳಿದರು.

ಡಾ.ಮೀನಾಕ್ಷಿ ಬಾಳಿ, ರಾಜ್ಯಉಪಾಧ್ಯಕ್ಷೆ, ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಚಳುವಳಿ ಹಿಂದಿಗಿಂತಲೂ ಇಂದು ಅಗತ್ಯವಾಗಿದೆ. ಅದರಲ್ಲಿಯೂ ದುಡಿಯುವ ವರ್ಗದಜನತೆಯು ಬುದ್ಧ ಬಸವ ಅಂಬೇಡ್ಕರ ಸಾವಿತ್ರಿ ಬಾಯಿ ಫುಲೆ ತತ್ವಗಳನ್ನು ಜಾರಿಗೊಳಿಸಬೇಕಿದೆ. ಸ್ವಾತಂತ್ರ್ಯ ಸಮಾನತೆ ಮಹಿಳಾ ವಿಮೋಚನೆಗಾಗಿ ದೇಶದಾದ್ಯಂತ ಅಖಿಲ ಭಾರತಜನವಾದಿ ಮಹಿಳಾ ಸಂಘಟನೆಯು ಶ್ರಮಿಸುತಿದೆ. ಸಮಸ್ತ ಮಹಿಳೆಯರು ವ್ಯವಸ್ಥಿತವಾಗಿ ಸಂಘಟಿತರಾಗಬೇಕಿದೆ. ಈ ದಿಕ್ಕಿನಲ್ಲಿಜಿಲ್ಲೆಯ 8ನೇ ಸಮ್ಮೇಳನವು ನಡೆಯುತಿದೆ. ರಾಜ್ಯ ಸಮ್ಮೇಳನದ ಯಶಸ್ಸಿಗಾಗಿ ಮುನ್ನಡೆಯೋಣ ಎಂದು ಕರೆಕೊಟ್ಟರು.

ರಾಜ್ಯಉಪಾಧ್ಯಕ್ಷೆ ಕೆ ನೀಲಾ ಮಾತನಾಡಿ, ’ಲಿಂಗ ಅಸಮಾನತೆಯಲ್ಲಿ, ಬಾಣಂತಿ ಸಾವಿನಲ್ಲಿ, ಗುಜ್ಜರ್ ಮದುವೆಯಲ್ಲಿ, ಬಾಲ್ಯ ವಿವಾಹದಲ್ಲಿ ಕಲಬುರಗಿಜಿಲ್ಲೆಯು ರಾಜ್ಯದಲ್ಲಿ ಒಂದನೆ ಸ್ಥಾನದಲ್ಲಿದೆ. ಜನತೆ ಬರಗಾಲದಲ್ಲಿ ಬವಣೆ ಪಡುತ್ತಿದ್ದಾರೆ. ಉದ್ಯೋಗ ಖಾತ್ರಿ ಕಾಯ್ದೆಯು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ವಲಸೆ ಹೆಚ್ಚುತ್ತಿದೆ. ಆದಾಗ್ಯೂ ಇಲ್ಲಿನ ಶಾಸಕರುಗಳಿಗೆ, ಸಂಸದರಿಗೆ ನಾಚಿಕೆ ಬರುತ್ತಿಲ್ಲ. ಕಿಂಚಿತ್ತೂ ಕಾಳಜಿ ಇಲ್ಲವಾಗಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು. ಜನತೆಗೆಎಲ್ಲ ಹಂತದ ಚುನಾಯಿತ ಸದಸ್ಯರುಗಳು ಉತ್ತರಿಸಬೇಕಿದೆ ಎಂದರು.

ಜನರನ್ನು ಇಂತಹ ನರಕದಲ್ಲಿ ದೂಡಿ ಮೋಜು ಮೇಜುವಾನಿಯಲ್ಲಿ, ಅಧಿಕಾರದ ಭೇಟೆಯಲ್ಲಿ ತೊಡಗಿದ್ದಾರೆ. ಹಾಗೆ ನೋಡಿದರೆ ಪಕ್ಷಾಂತರ ಶುರುವಾಗಿದ್ದು ಕಲಬುರಗಿ ಜಿಲ್ಲೆಯಿಂದಲೇ. ದೇಶದಲ್ಲಿ ಪ್ರತಿಪಕ್ಷಗಳನ್ನು ನಾಶಗೊಳಿಸಿ ಏಕಪಕ್ಷವನ್ನು ಹೊರೆಸಲು ಹೊರಟಿರುವ ಕೇಂದ್ರ ಸರಕಾರ ಮತ್ತು ಬಿಜೆಪಿ ಪಕ್ಷದ ಕ್ರಮವು ಆಳದಲ್ಲಿ ಫ್ಯಾಸಿಸ್ಟ್ ಧೋರಣೆ ಹೊಂದಿದೆ. ಕಾರ್ಪೋರೇಟ್ ಕಳ್ಳರೊಂದಿಗೆ ಕೈಜೋಡಿಸಿದ್ದರ ಫಲ ಇದಾಗಿದೆ. ಈ ಹೊತ್ತಿನಲ್ಲಿ ಮಹಿಳೆಯರು ಅತ್ಯಂತ ಹಿಮ್ಮತ್ತಿನಿಂದ ಸಂಘಟಿತರಾಗಿ ಹೋರಾಟದಂಗಳಕ್ಕೆ ಬರಬೇಕಿದೆ.ಆಳುವ ವರ್ಗವುದೇಶದ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ. ಎಲ್ಲ ಪ್ರಜ್ಞಾವಂತರು ಮೌನ ಮುರಿಯಬೇಕಿದೆ ಎಂದು ಹೇಳಿದರು.

ಅತಿಥಿಯಾಗಿ  ಡಾ. ಪ್ರಭುಖಾನಾಪುರೆ ಶುಭಕೋರಿ ಮಾತನಾಡಿದರು. ಅಶ್ವಿನಿ ಮದನಕರ್‌ ನಿರ್ವಹಿಸಿದರು ನಂದಾದೇವಿ ಮಂಗೊಂಡಿ ಇವರು ಸ್ವಾಗತ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here