‘ಅತಿವೃಷ್ಟಿಯಿಂದ ಬದುಕೇ ಬರ್ಬಾದ್ ಆಗಿರೋ ಉ- ಕ ರೈತರಿಗೆ ಪರಿಹಾರ ಯಾವಾಗ ಕೊಡ್ತೀರಿ’

0
35

ಕಲಬುರಗಿ.: ಖಳೆದ 5 ವರ್ಷಗಳಲ್ಲೇ ಕರ್ನಾಟಕ ಕಂಡಂತಹ ಅತಿವೃಷ್ಟಿಗೆ ರೈತರ ಬದುಕೇ ಬರ್ಬಾದ್ ಆಗಿದೆ. ಅವರೆಲ್ಲರೂ ಸರಕಾರದಿಂದ ಬರಬೇಕಾದಂತಹ ಇನ್‍ಪುಟ್ ಸಬ್ಸೀಡಿ ಮೊತ್ತಕ್ಕಾಗಿ ಕಾಯುಪತ್ತಿದ್ದಾರೆ. ಆದರೆ ಸರಕಾರ ಹಾನಿಗೊಳಗಾದ ರೈತರಿಗೆ ಯಾವುದೇ ರೀತಿಯ ಪರಿಹಾರ ಧನ ವಿತರಿಸದೆ ಕಾಲಹರಣ ಮಾಡುತ್ತಿದೆ ಎಂದು ವಿಧಾನಸಬೆ ವಿರೋಧ ಪಕ್ಷದ ಮುಕ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಸರಕಾರದ ರೈತ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸಿದ್ದಾರೆ.

ಬೆಳಗಾವಿ ಸುವರ್ಣ ಔಧದ ಚಳಿಗಾಲದ ಅಧಿವೇಶನದಲ್ಲಿ ಅವರು ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿ, ಪರಿಹಾರದ ವಿಚಾರಗಳನ್ನೆಲ್ಲ ಕಲಾಪದಲ್ಲಿ ಗಂಭೀರವಾಗಿ ಪ್ರಸ್ತಾಪಿಸುತ್ತ ರೈತರ ಬೆಳೆಹಾನಿಗೆ ಇಂದಿಗೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ ಎಂದು ದೂರಿದ್ದಾರೆ.

Contact Your\'s Advertisement; 9902492681

ಕೃಷಿ ಇಲಾಖೆಯ ಪ್ರಾಥಮಿಕ ವರದಿಗಳ ಪ್ರಕಾರ ಜುಲೈನಿಂದ ನವ್ಹೆಂಬರ್‍ವರೆಗೂ 7. 31 ಲಕ್ಷಕ್ಕೂ ಅದಿಕ ಹೆಕ್ಟರ್‍ನಲ್ಲಿ ಬೆಳೆದಂತಹ ವಿವಿಧ ಬೆಳೆಗಳು ಅತಿವೃಷ್ಟಿಗೆ ಹಾಳಾಗಿವೆ. ಈ ಪೈಕಿ 7. 31 ಲಕ್ಷ ಹೆಕ್ಟರ್ ರಾಜ್ಯಾದ್ಯಂತ ಹಾನಿ ಸಂಭವಿಸಿದರೆ, ಇದರಲ್ಲಿ ಉತ್ತರ ಕರ್ನಾಟಕದ ಪ್ರಮುಖ 3 ಜಿಲ್ಲೆಗಳಾದ ಕಲಬುರಗಿ (2. 44 ಲಕ್ಷ ಹೆ), ಬೀದರ್ (1. 84 ಲಕ್ಷ ಹೆ) ಹಾಗೂ ಬೆಳಗಾವಿ (1. 15 ಲಕ್ಷ ಹೆ) ಯಲ್ಲಾಗಿರುವ ಬೆಳೆಹಾನಿ ಎಲ್ಲವೂ ಸೇರಿಸಿ 5. 43 ಕೋಟಿ ರು ಆಗುತ್ತದೆ. ಈ ಪರಿಯಲ್ಲಿ ಬಿತ್ತನೆಯಾದ ಬೆಳೆಗಳು ಹಾಳಾಗಿ ರೈತರು ಬವಣೆ ಪಡುತ್ತಿರುವಾಗ ತಕ್ಷಣ ಅವರಿಗೆ ನೆರವು ನೀಡಬೇಕಿದ್ದ ಸರಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಡಾ. ಅಜಯ್ ಸಿಂಗ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಹೀಗಾಗಿ ಡಬ್ಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುವ ಆಡಲಿತಾರೂಢ ನೀವು ರೈತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಯಾಕೆ ಲಕ್ಷ ವಹಿಸುತ್ತಿಲ್ಲ. ಇದು ಡಬ್ಬಲ್ ಇಂಜಿನ್ ಸರಕಾರವಲ್ಲ, ಹಾನಿಗೊಳಗಾದರೂ ನೆರವಿನ ಹಸ್ತ ಚಾಚದ ಡಬ್ಬಲ್ ಧೋಕಾ ಸರ್ಕಾರ. ರಾಜ್ಯಕ್ಕೆ ಅತಿವೃಷ್ಟಿ ಪರಿಹಾರ ಇಂದಿಗೂ ಬಿಡುಗಡೆ ಮಾಡದೆ ಅಮಾನವೀಯತೆ ತೋರಲಾಗುತ್ತಿದೆ. ಕೇಂದ್ರಕ್ಕಂತೂ ಕರ್ನಾಟಕ ರಾಜ್ಯವೇ ಬೇಡವಾದಂತಾಗಿದೆ ಎಂದು ಡಾ. ಅಜಯ್ ಸಿಂಗ್ ಸನದಲ್ಲಿ ಟೀಕಿಸಿ ಗಮನ ಸೆಳೆದಿದ್ದಾರೆ.

ಕೋವಿಡ್ ನಂತರದಲ್ಲಿ ಹೆಚ್ಚಿನ ಜನ ಬೇಸಾಯಕ್ಕೆ ಮರಳಿದ್ದು ವಾಡಿಕೆಗಿಂತ 8 ಲಕ್ಷ ಹೆಕ್ಟರ್ ಅಧಿಕ ಬಿತ್ತನೆಯಾಗುತ್ತಿದೆ. ಮುಂಚೆ 70 ಲಕ್ಷ ಹೆ ಬಿತ್ತನೆಯಾಗುತ್ತಿತ್ತು, ಈ ಪ್ರಮಾಣ ಈಗ 78 ಲಕ್ಷ ಹೆಕ್ಟರ್ ತಲುಪಿದೆ. ಈ ಬಿತ್ತನೆ ಪ್ರಮಾಣದಂತೆ ಹಾನಿಯ ಪ್ರಮಾಣವೂ ಹೆಚ್ಚಿದೆ. ತೊಗರಿ, ಭತ್ತ, ಹೆಸರು, ಉದ್ದು, ಅಲಸಂದೆ ಬೆಳೆಗಳು ಹಾನಿಗೀಡಾಗಿ ರೈತರು ಸಮಸ್ಯೆ ಎದುರಿಸುತ್ತಿದ್ದಾರೆಂದು ಡಾ. ಅಜಯ್ ಸಿಂಗ್ ಸದನದಲ್ಲಿ ರೈತರ ಕುಟುಂಬಗಳವರ ತೊಂದರೆಗಳನ್ನೆಲ್ಲ ಪಟ್ಟಿ ಮಾಡಿ ತಕ್ಷಣ ನೆರವಿನ ಹಸ್ತ ಚಾಚುವಂತೆ ಸರ್ಕಾರಗ ಗಮನ ಸೆಳೆದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here