ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಅರಿವು

0
46

ಅಫಜಲಪೂ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರಬಿವ್ಯಾಪ್ತಿಯಲ್ಲಿ ಬರುವ ಬಿದನುರ  ಉಪ ಕೇಂದ್ರದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನ ಅರಿವು ಮೂಡಿಸುವ ಕಾರ್ಯಕ್ರಮವನ್ನುಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳಿಗೆ ಕ್ಷಯ ರೋಗ ಕುರಿತು ಮಾಹಿತಿಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರಬಳೆ ಕ್ಷಯರೋಗ ಅಂದರೇನು?ಅದು ಹೇಗೆ ಹರಡುತ್ತದೆ?ಅದರ ಲಕ್ಷಣಗಳೇನು?ಬಂದಾಗ ಕಫ ಪರೀಕ್ಷೆ ಮಾಡಿಸುವ ಬಗ್ಗೆ ಹಾಗೂ ಪಕ್ಕಾ ಚಿಕಿತ್ಸೆ ದೊರೆಯುವ ಬಗ್ಗೆ ಸವಿಸ್ತಾರವಾಗಿ.ತದನಂತರ ನಮ್ಮ ಕೂದಲು ಮತ್ತು ಉಗುರು ಇವುಗಳನ್ನು ಬಿಟ್ಟು ಕ್ಷಯರೋಗ ಎಲ್ಲಾ ಕಡೆ ಹರಡುತ್ತದೆ ಎಂಬುದನ್ನು ತಿಳಿಸಿದರು.

ಅದರಲ್ಲಿ ಮುಖ್ಯವಾಗಿ ವಿಧಗಳ ಬಗ್ಗೆ ವಿವರಿಸಿ ಶ್ವಾಸಕೋಶ ಕ್ಷಯ ಹಾಗೂ ಶ್ವಾಸಕೋಶ ತರ ಕ್ಷಯರೋಗ ಎಂಬ ಎರಡು ವಿಧಾನಗಳ ಬಗ್ಗೆ ತಿಳಿಸಿ ಹೆಚ್ಚಾಗಿ ಗ್ರಾಮೀಣ ಪ್ರದೇಶದಲ್ಲಿ ಶ್ವಾಸಕೋಶ ತರ ರೋಗಿಗಳು ನೂರಕ್ಕೆ 80ರಷ್ಟು ಅದರ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಅದನ್ನು ತಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಯ ಮೂಲಕ ದೃಡ ಪಡಿಸಬಹುದಾಗಿದೆ ಅದಕ್ಕಾಗಿ ತಾವೆಲ್ಲರೂ ಇದರ ಸೌಲಭ್ಯವನ್ನು ಎಂದು ತಿಳಿಸುತ್ತಾ ಸರಕಾರವು ಉಚಿತವಾಗಿ ಚಿಕಿತ್ಸೆಯನ್ನುಪಕ್ಕ ನೀಡಿ ಕ್ಷಯವನ್ನು 2025 ರೊಳಗೆ ಕೊನೆಗಾಣಿಸಬೇಕಾಗಿದೆ ಅದಕ್ಕಾಗಿ ತಾವೆಲ್ಲರೂ ಈ ರೋಗದ ಬಗ್ಗೆ ಮಾಹಿತಿ ಪಡೆದು ತಮ್ಮ ಕುಟುಂಬಕ್ಕೆ ಹಾಗೂ ನೆರಹೊರೆಯವರಿಗೆ ಸಹಕರಿಸಿ ಕ್ಷಯ ಮುಕ್ತ ಗ್ರಾಮವನ್ನು ಮಾಡಲು ಸಂಘದ ಸದಸ್ಯರು ಇಂದು ಪಣತೊಡಿ ಎಂದು ತಿಳಿಸಿದರು.

Contact Your\'s Advertisement; 9902492681

ನಂತರ ಕ್ಷಯ ರೋಗಿಗಳಿಗೆ ಕ್ಷಯ ಎಂದು ದೃಢಪಟ್ಟರೆ ಚಿಕಿತ್ಸೆ ಮುಗಿಯುವವರೆಗೂ ತಿಂಗಳಿಗೆ ಐದು ನೂರು ರೂಪಾಯಿಯನ್ನು ಪೌಷ್ಟಿಕ ಆಹಾರ ಸೇವನೆಗಾಗಿ ನೀಡಲಾಗುತ್ತದೆ ತಾವೆಲ್ಲರೂ ಅದರ ಪ್ರಯೋಜನ ಪಡೆದು ಕ್ಷಯದಿಂದಬಳಲದೇ ತಮ್ಮ ಆರ್ಥಿಕ ಸ್ಥಿತಿಯನ್ನು ಕುಂಠಿತಗೊಳಿಸದೇ ಸರಕಾರದ ಈ ಸೌಲಭ್ಯವನ್ನು ಪಡೆಯಿರಿ ಎಂದುಪದೇಪದೇ ಹೇಳುವುದರ ಮುಖಾಂತರ ರೋಗದ ಜಾಗೃತಿಯನ್ನು ಮೂಡುವಂತೆ ಮಾಹಿತಿಯನ್ನು ನೀಡಿದರು.

ಈಗಾಗಲೇ ದೌರ್ಜನ್ಯ ಮುಕ್ತಿ ಯಾಗಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಸಾಕಷ್ಟು ಮಾಹಿತಿಯನ್ನು ಆಲಿಸ್ ಇದ್ದೀರಿಇದೇ ಕಾರ್ಯಕ್ರಮದ ಮುಖಾಂತರ ಕ್ಷಯರೋಗ ಮುಕ್ತ ಗ್ರಾಮವನ್ನಾಗಿ ಮಾಡಿ ಎಂದು ಹೇಳಿ ತಮ್ಮ ಮಾತುಗಳನ್ನು ಮುಗಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅರುಣ್ ಕುಮಾರ್, ಅಭಿವೃದ್ಧಿ ಅಧಿಕಾರಿಗಳಾದ ಅಂಬಾರಾಯ ಕಟ್ಟಿಮನಿ, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು ಅಂಗನವಾಡಿ ವಲಯ ಮೇಲ್ವಿಚಾರಕರಾದ ಶಾರದಾ ಆವಂಟಿ ಹಾಗೂ ಉಪಕೇಂದ್ರದ  ಸಮುದಾಯ ಸಂರಕ್ಷಣಾ ಕಾಳಜಿ ಅಧಿಕಾರಿಗಳಾದ ಸುನಿತಾ  ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತರು‌ , ಆಶಾ ಕಾರ್ಯಕರ್ತರುಸ್ವಸಹಾಯ ಸಂಘದ ಅಬ್ಜಲ್ಪುರ್ ವಲಯದ ಮೇಲ್ವಿಚಾರಕರಾದ ಅಶೋಕ್ ಗ್ರಾಮ ಪಂಚಾಯತ್   ಸಿಬ್ಬಂದಿಗಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here