ಕಲಬರುಗಿ: ತಡವಾಗಿ ತಲುಪಿದ ರೈಲ್ವೆ, ಸ್ಪರ್ಧಾತ್ಮಕ ಪರೀಕ್ಷೆ ಮಿಸ್ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವಂತೆ ಸರ್ಕಾರಕ್ಕೆ, ಶಾಸಕರಾದ ಪ್ರಿಯಾಂಕ್ ಖರ್ಗೆ ಆಗ್ರಹ.
ಈ ಕುರಿತು ಮುಖ್ಯಮಂತ್ರಿಗಳಿಗೆ ಲೋಕೋಪಯೋಗಿ ಸಚಿವರು ಹಾಗೂ ಕೆಪಿಎಸ್ ಸಿ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಕರ್ನಾಟಕ ಲೋಕಸೇವಾ ಆಯೋಗ ದಿನಾಂಕ 14-12-2021 ರಂದು ನಡೆಸಿದ್ದ ಸಹಾಯಕ ಅಭಿಯಂತರರು ವಿಭಾಗ 1 ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜಿರಾಗಲು ಕಲಬುರಗಿ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ವಿಭಾಗದಿಂದ ಹೊರಟಿದ್ದ ಸುಮಾರು 500 ಕ್ಕೂ ಅಧಿಕ ಅಭ್ಯರ್ಥಿಗಳು ಪ್ರಯಾಣಿಸುತ್ತಿದ್ದ ರೈಲು ಬೆಂಗಳೂರಿಗೆ ತಡವಾಗಿ ತಲುಪಿದ ಕಾರಣ ಪರೀಕ್ಷೆಗೆ ಹಾಜಿರಾಗಲು ಸಾಧ್ಯವಾಗಿಲ್ಲ.
ಆದರೆ, ಅದೇ ದಿನ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಹೊರಟಿದ್ದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ರೈಲ್ವೆ ಕಲಬುರಗಿಗೆ ತಡವಾಗಿ ತಲುಪಿದ ಕಾರಣ ಅವರೂ ಕೂಡಾ ಸದರಿ ಪರೀಕ್ಷೆಗೆ ಹಾಜಿರಾಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ, ಅಂತಹ ವಿದ್ಯಾರ್ಥಿಗಳಿಗಾಗಿ ಕೆಪಿಎಸ್ ಸಿ ದಿನಾಂಕ 29-12-2021 ರಂದು ಬೆಂಗಳೂರಿನಲ್ಲಿ ಸಾಮಾನ್ಯ ಪತ್ರಿಕೆ 1 ಕ್ಕೆ ಪರೀಕ್ಷೆ ನಡೆಸಲು ನಿರ್ಧರಿಸಿ ಆ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಿದೆ.
ಆದರೆ, ಕಲ್ಯಾಣ ಕರ್ನಾಟಕದಿಂದ ಬೆಂಗಳೂರಿಗೆ ಹೊರಟಿದ್ದ ವಿದ್ಯಾರ್ಥಿಗಳು ಸೋಲಾಪುರ- ಯಶವಂತಪುರ, ಬೀದರ್- ಯಶವಂತಪುರ ಹಾಗೂ ಮುಂಬೈ ಬೆಂಗಳೂರು ( ಉದ್ಯಾನ ಎಕ್ಸಪ್ರೆಸ್ ) ರೈಲುಗಳು ಸರಿಯಾದ ಸಮಯಕ್ಕೆ ತಲುಪದೆ ಇರುವುದಿಂದ ಪರೀಕ್ಷೆಗೆ ಹಾಜಿರಾಗದ ವಿದ್ಯಾರ್ಥಿಗಳಿಗೆ ಕೂಡಾ ಅವಕಾಶ ನೀಡಬೇಕು ಇಲ್ಲದಿದ್ದರೆ ಅಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ.
ಹಾಗಾಗಿ, ಕೆಪಿಎಸ್ ಸಿ ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮತ್ತೊಂದು ಅವಕಾಶ ಮಾಡಿಕೊಡಬೇಕು ಎಂದು ಪ್ರಿಯಾಂಕ್ ಖರ್ಗೆ ಸರ್ಕಾರ, ಪಿಡಬ್ಲುಡಿ ಇಲಾಖೆಯ ಸಚಿವರಿಗೆ ಹಾಗೂ ಕೆಪಿಎಸ್ ಸಿ ಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.