ಸುರಪುರ:ಪಾದಾಯಾತ್ರೆ ಮಾಡುವುದರಿಂದ ಮನುಷ್ಯನಲ್ಲಿ ವಿಶೇಷವಾದ ಶಕ್ತಿ ವೃಧ್ಧಿಸುತ್ತೆ.ಅಲ್ಲದೆ ಪಾದಯಾತ್ರೆಯಲ್ಲಿ ಅಗಾಧವಾದ ದೈವಿಕ ಶಕ್ತಿಯಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ:ಚನ್ನಸಿದ್ಧರಾಮ ಪಂಡೀತಾರಾಧ್ಯ ಶಿವಾಆಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶ್ರೀಶೈಲ ಜಗದ್ಗುರು ಡಾ:ಚನ್ನಸಿದ್ಧರಾಮ ಪಂಡೀತಾರಾಧ್ಯ ಶಿವಾಚಾರ್ಯರು ಲೋಕಕಲ್ಯಾಣಾರ್ಥವಾಗಿ ಮುಂಬರುವ ೨೦೨೨ರ ಅಕ್ಟೋಬರ್ ೨೯ ರಂದು ಯಡೂರದಿಂದ ಶ್ರೀಶೈಲದ ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಅಂಗವಾಗಿ ತಾಲೂಕು ವೀರಶೈವ ಲಿಂಗಾಯತ ಸಮಿತಿ,ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ,ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಯುವ ಘಟಕ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಜಗದ್ಗುರುಗಳು ಮಾತನಾಡಿ,ಯಡೂರಿನಿಂದ ಅನೇಕ ಸದುದ್ಧೇಶಗಳನ್ನಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಮಾಜದ ಒಗ್ಗಟ್ಟು,ಪಾದಯಾತ್ರೆಯಲ್ಲಿ ಭಾಗವಹಿಸುವವರ ಆರೋಗ್ಯ ವೃಧ್ಧಿ,ರಸ್ತೆಯುದ್ದಕ್ಕೂ ಸಸಿಗಳನ್ನು ನೆಟ್ಟು ಬೆಳೆಸುವುದು,ವೀರಶೈವ ಲಿಂಗಾಯತರು ನಾವೆಲ್ಲ ಒಂದು ವೀಶ್ವವೇ ನಮ್ಮ ಬಂಧು ಎಂಬ ಭಾವನೆ ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ.ತಾವೆಲ್ಲರು ತನು ಮನ ಧನದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಜೊತೆಗೆ ಎಲ್ಲರು ಸೇವೆಯನ್ನು ಮಾಡುವಂತೆ ಮಾರ್ಗದರ್ಶನ ಮಾಡಿದರು.
ಲಕ್ಷ್ಮೀಪುರ ಶ್ರೀಗಿರಿ ಮಠದ ಪೂಜ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರು ಪ್ರತಿ ವರ್ಷ ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಾರೆ ಆದರೆ ನಮ್ಮ ಜಗದ್ಗುರುಗಳೆ ಈಗ ಪಾದಯಾತ್ರೆಗೆ ಮುಂದಾಗುವ ಮೂಲಕ ನಮ್ಮೆಲ್ಲರಲ್ಲಿ ಪಾದಯಾತ್ರೆಯ ಜಾಗೃತಿಯನ್ನು ಮೂಡಿಸುತ್ತಿದ್ದಾರೆ,ನಾವೆಲ್ಲರು ಇದರಲ್ಲಿ ಭಾಗವಹಿಸುವ ಜೊತೆಗೆ ಪಾದಯಾತ್ರೆಯ ಯಶಸ್ಸಿಗೆ ಧನ ಸಹಕಾರ ನೀಡಿ ಮನೆಯಲ್ಲಿದ್ದರೆ ಸಾಲದು ಎಲ್ಲರು ಇದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳೋಣ ಎಂದರು.
ಅಧ್ಯಕ್ಷತೆವಹಿಸಿದ್ದ ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ಶ್ರೀಗಳು ನಮ್ಮೆಲ್ಲರ ಏಳಿಗೆಗಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳುವ ಮೂಲಕ ಲೋಕದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ.ಆದ್ದರಿಂದ ನಾವುಗಳು ಕೂಡ ಎಲ್ಲರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.ಅಲ್ಲದೆ ಇದೇ ಸಂದರ್ಭದಲ್ಲಿ ಪಾದಯಾತ್ರೆಯ ಕಾರ್ಯಕ್ರಮಕ್ಕೆ ೨ ಲಕ್ಷ ರೂಪಾಯಿಗಳ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದರು.ನಂತರ ಮುಖಂಡ ಹೆಚ್.ಸಿ ಪಾಟೀಲ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಹಾಪುರ ಹಿರೇಮಠದ ಶ್ರೀ ಸೂಗುರೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ,ಪಾದಯಾತ್ರೆಯ ಉದ್ದೇಶ ಹಾಗು ಜಗದ್ಗುರುಗಳು ಶ್ರೀಶೈಲ ಕ್ಷೇತ್ರದಲ್ಲಿ ಮಾಡಲಿರುವ ಅಭೀವೃಧ್ಧಿ ಕಾರ್ಯಗಳ ಕುರಿತು ವಿವರಣೆ ನೀಡಿದರು.ಇದೇ ಸಂದರ್ಭದಲ್ಲಿ ಅನೇಕ ಜನರು ಪಾದಯಾತ್ರೆ ಕಾರ್ಯಕ್ರಮಕ್ಕೆ ದೇಣಿಗೆಯನ್ನು ಘೋಷಿಸಿದರು.
ಸಭೆಯಲ್ಲಿ ಕೆಂಭಾವಿಯ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ,ಗುಂಡಾಪುರ ಸ್ವಾಮೀಜಿ,ಕುಂಬಾರಪೇಟೆಯ ಸ್ವಾಮೀಜಿ,ಕನ್ನೆಳ್ಳಿ ಸ್ವಾಮೀಜಿ,ಕುಂಬಳಾಪುರ ಸ್ವಾಮೀಜಿ,ಜೈನಾಪುರ ಸ್ವಾಮೀಜಿ ಹಾಗು ಮುಖಂಡರಾದ ಬಸವಲಿಂಗಪ್ಪ ಪಾಟೀಲ್,ರಾಜಶೇಖರ ಪಾಟೀಲ್ ವಜ್ಜಲ್,ಎಸ್.ಎಮ್ ಕನಕರಡ್ಡಿ,ಜಿ.ಎಸ್ ಪಾಟೀಲ್,ಬಸವಲಿಂಗಪ್ಪ ಪಾಟೀಲ್,ಬಸವರಾಜ ಜಮದ್ರಖಾನಿ,ಚಂದ್ರಶೇಖರ ದಂಡಿನ್,ಸೂಗುರೇಶ ವಾರದ್,ಸೋಮಶೇಖರ ಶಾಬಾದಿ,ಮನೋಹರ ಜಾಲಹಳ್ಳಿ,ಮಹೇಶ ಪಾಟೀಲ್,ಮಂಜುನಾಥ ಜಾಲಹಳ್ಳಿ,ಶಿವರಾಜ ಕಲಕೇರಿ,ಚಂದ್ರು ಡೊಣೂರ ಸೇರಿದಂತೆ ಅನೇಕರಿದ್ದರು.ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಪ್ರಾರ್ಥನೆ ಮಾಡಿದರು, ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿ ವಂದಿಸಿದರು.