ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಹುಣ್ಣಿಮೆ ಅಂಗವಾಗಿ ಪಂಚಶೀಲ ಪಠಣ ಕಾರ್ಯಕ್ರಮ ನಡೆಸಲಾಯಿತು.ಭಾನುವಾರ ಬೆಳಿಗ್ಗೆ ಬುದ್ಧ ವಿಹಾರದಲ್ಲಿ ಭಾಗವಹಿಸಿದ ಅನೇಕ ಜನ ಬೌದ್ಧ ಉಪಾಸಕರು ಬುದ್ಧನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮೇಣದ ಬತ್ತಿಯನ್ನು ಬೆಳಗಿ ಧಮ್ಮ ವಂದನೆ ಸಲ್ಲಿಸಿದರು.
ನಂತರ ಎಲ್ಲರು ಪಂಚಶೀಲ ಪಠಣವನ್ನು ಮಾಡಿದರು.ಈ ಸಂದರ್ಭದಲ್ಲಿ ಅನೇಕ ಉಪಾಸಕರು ಮಾತನಾಡಿ,ಜಗತ್ತಿನ ಪ್ರಾಚೀನ ಧರ್ಮಗಳಲ್ಲಿ ಒಂದಾಗಿರುವ ಬೌಧ್ಧ ಧರ್ಮವು ಜಗತ್ತಿಗೆ ಶಾಂತಿಯನ್ನು ಬೋಧಿಸಿದ ಮಹಾತ್ಮ ಗೌತಮ್ ಬುದ್ಧರಿಂದ ಜನಸಿದೆ.ಇದರ ಉಪಾಸಕರಾದ ನಾವೆಲ್ಲರು ಬುದ್ಧನ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮತ್ತು ನಿತ್ಯವು ಪಂಚಶೀಲ ಪಠಣ ಮಾಡುವ ಮೂಲಕ ಧರ್ಮವನ್ನು ಬೆಳೆಸುವ ನಿಟ್ಟಿನಲ್ಲಿ ಹೀಗೆ ಸೇರುವ ಜೊತೆಗೆ ಗ್ರಾಮೀಣ ಭಾಗದಲ್ಲೂ ಧರ್ಮ ಜಾಗೃತಿಗೆ ನಾವೆಲ್ಲರು ಮುಂದಾಗಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಿದ್ದ ಮುಖಂಡ ಮಾಳಪ್ಪ ಕಿರದಹಳ್ಳಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಉಪಾಸಕರಾದ ವೆಂಕಟೇಶ ಹೊಸ್ಮನಿ,ಭೀಮರಾಯ ಸಿಂದಗೇರಿ,ಶಿವರಾಜ ಪಾಣೆಗಾಂವ್,ರಮೇಶ ಅರಕೇರಿ,ಜಿ.ಆರ್.ಬನ್ನಾಳ,ಶ್ರೀಮಂತ ಚಲುವಾದಿ,ಮರೆಪ್ಪ ತೇಲ್ಕರ್, ಮಲ್ಲು ಮುಷ್ಠಳ್ಳಿ,ಹಣಮಂತ ತೇಲ್ಕರ್ ಸೇರಿದಂತೆ ಅನೇಕ ಜನ ಉಪಾಸಕ ಉಪಾಸಕಿಯರು ಭಾಗವಹಿಸಿದ್ದರು.