ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವವರ ವಿರುದ್ಧ ಕ್ರಮ

0
15

ಕಲಬುರಗಿ: ಭೀಮಳ್ಳಿ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಮದ್ಯಪಾನ ಮಾಡುತ್ತಿದ್ದು, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕನಾ೯ಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸಂದೀಪ ಭರಣಿ ಆಗ್ರಹಿಸಿದರು.
ಆವರು ಕಲಬುರಗಿ ಅಬಕಾರಿ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿ, ಭೀಮಳ್ಳಿ ಗ್ರಾಮದ ಪ್ರತಿ ಮನೆಮನೆಯಲ್ಲಿ ಹಾಗೂ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯಪಾನ ಮಾಡುತ್ತಿದ್ದಾರೆ ಎಂದರು.

ಅಲ್ಲಿಯ ಸ್ಥಳೀಯರು ಮಾರಾಟ ಮಾಡುವ ಮಾಲೀಕರಿಗೆ ಕೇಳಿದರೆ, ನಾವು ಅಬಕಾರಿ ಇಲಾಖೆಗೆ ಪ್ರತಿ ತಿಂಗಳು ಮಾಮೂಲಿ ನೀಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು. ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿರುವದರಿಂದ ಸದರಿ ಗ್ರಾಮಸ್ಥರ ಆರೋಗ್ಯ ದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಕೂಡಲೇ ಈ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಒಂದು ವೇಳೆ ತಾವು ಸದರಿ ಗ್ರಾಮಕ್ಕೆ ಹೋಗಿ ಕ್ರಮ ಕೈಗೊಳ್ಳದಿದ್ದರೆ, ನಾವೇ ಖುದ್ದಾಗಿ ಹೋಗಿ ಮರಾಟ ಮಾಡುತ್ತಿರುವ ಅಕ್ರಮವನ್ನು ಬಯಲು ಮಾಡುತ್ತೇವೆ ಎಂದು ಎಚ್ಚರಿಸಿದರು. ಅದರಂತೆ ಕೂಡಲೇ, ಭೀಮಳ್ಳಿ ಗ್ರಾಮಕ್ಕೆ ಸಂಬಂಧ ಪಡುವ ಅಬಕಾರಿ ಇಲಾಖೆಯ ಅಧಿಕಾರಿಯನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಚಿನ ಫದಿ೯, ಉದಯಕುಮಾರ್, ಗೌತಮ ಗಣಜಲಖೇಡ, ಪ್ರಮೋದ ಕುಮಾರ್, ಸತೀಶ ಕುಮಾರ್, ಮುರಳಿ ದಗಿ೯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here