ಸುರಪುರ: ನಗರದಲ್ಲಿ ಹಲವು ಐತಿಹಾಸಿಕ ಭಾವಿಗಳಿವೆ ಅವುಗಳು ನಗರಸಭೆ ನಿರ್ಲಕ್ಷಕ್ಕೆ ಒಳಗಾಗಿ ಸಂಪೂರ್ಣ ಅವನತಿ ಅಂಚಿನಲ್ಲಿವೆ ಈಗಲಾದರು ಅಧಿಕಾರಿಗಳು ಎಚ್ಚೆತ್ತು ಭಾವಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿಸೇನೆಯ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಒತ್ತಾಯಿಸಿದರು.
ನಗರದ ಸರ್ದಾರ ವಲ್ಲಭಾವಿ ಪಟೇಲ ವೃತ್ತದಲ್ಲಿ ಮಂಗಳವಾರ ಹೆಚ್.ಡಿ.ಕುಮಾರಸ್ವಾಮಿಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯೆ ರಸ್ತೆಬಂದ ಮತ್ತು ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಯಲ್ಲಪ್ಪನ ಭಾವಿ, ಹೊಸಭಾವಿ, ದೇವರಭಾವಿ, ದೇವರಕೆರ, ನಾಯಕನ ಭಾವಿ ಸೇರಿದಂತೆ ನಗರದಲ್ಲಿ ನಮ್ಮ ಹಿರಿಯರು ಭಾವಿಗಳನ್ನು ನಿರ್ಮಿಸಿ ಜನರಿಗೆ ನೀರನ ತೊಂದರೆಯಾಗದಂತೆ ಭಾವಿಗಳನ್ನು ನಿರ್ಮಿಸಿದ್ದರು ಸಧ್ಯ ಎಲ್ಲಾಭಾವಿಗಳು ಹೋಳಿನಿಂದ ಮುಚ್ಚುವ ಪರಿಸ್ಥಿತಿಯಲ್ಲಿವೆ ಮೂದಲೆ ನಗರಕ್ಕೆ ನೀರಿನ ತೊಂದರೆ ಸಾಕಷ್ಟಿದೆ ಈ ಭಾವಿಗಳನ್ನು ಸ್ವಚ್ಛಗೊಳಿಸುವುದರಿಂದ ನೀರಿನ ಸಮಸ್ಯೆಯನ್ನು ತೊಗಿಸಬಹುದು ಇದನ್ನು ಬಿಟ್ಟು ಜನಪ್ರತಿನಿಧಿಗಳು ತಮ್ಮ ಲಾಭಕ್ಕಾಗಿ ಬಡಿದಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿ ಶಾಸಕರು ಜನರ ಸಂಕಷ್ಟದಲ್ಲಿ ಭಾಗಿಯಾಗುವುದನ್ನು ಬಿಟ್ಟು ರೇಸಾರ್ಟನಲ್ಲಿ ಮೂಜು ಮಾಡುತ್ತಿದ್ದಾರೆ ಅವರು ಈ ಹಿಂದೆ ಚುನಾವಣಾ ಸಮಯದಲ್ಲಿ ನಗರದ ಜನರಿಗೆ ಆಶ್ವಾಸನೆ ನೀಡಿದ್ದರು ಆಯ್ಕೆಯಾದ ಏರಡು ತಿಂಗಳಲ್ಲಿ ನಗರಕ್ಕೆ ದಿನದ ೨೪ ಗಂಟೆ ನೀರು ಪೊರೈಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು ಅವರು ಆಯ್ಕೆಯಾದಾಗಿನಿಂದಲು ನಗರದಲ್ಲಿ ಇರುವುದಕ್ಕಿಂತ ಹೆಚ್ಚು ಬೆಂಗಳೂರಿನಲ್ಲೆ ಇರುತ್ತಾರೆ ಹೀಗಿರುವಾಗ ಅಧಿಕಾರಿಗಳು ಇಲ್ಲಿ ಯಾರ ಮಾತನ್ನು ಕೇಳುತ್ತಿಲ್ಲ ಇತಂಹ ದುಸ್ಥಿತಿಯಲ್ಲಿ ನಗರದ ಜನರು ಬದುಕುತ್ತಿದ್ದಾರೆ ಈಗಲಾದರು ಎಚ್ಚೆತ್ತುಕೊಂಡು ಒಂದು ಐದುದಿನದೊಳಗೆ ಜನರ ನೀರಿನ ಸಮಸ್ಯಗೆ ಸ್ಪಂದಿಸಿ ಇಲ್ಲವಾದರೆ ಬರುವ ೨೨ ರಂದು ಸುರಪುರ ಬಂದಮಾಡಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ಪಿಡ್ಡನಾಯಕ ಪ್ಯಾಪ್ಲಿ, ಗೋಪಾಲ ಬಾಗಲಕೋಟ, ಮಾನಯ್ಯ ದೊರೆ, ಕೃಷ್ಣ ದಿವಾಕರ, ವೆಂಕಟೇಶ ನಾಯಕ, ಕೇಶಣ್ಣ ದೊರೆ, ಬಸವರಾಜ ಕೌಡಿಮಟ್ಟಿ, ದೇವಪ್ಪ ದೇವರಮನಿ, ಗುರುನಾಥ ರೆಡ್ಡಿ ಸೇರಿದಂತೆ ಇನ್ನಿತರರಿದ್ದರು.