ಬಾಗಲಕೋಟೆ: ವಿದ್ಯಾರ್ಥಿನಿ ಪ್ರಿಯಾಂಕಾ ಮೇತ್ರಿ ಸಾವು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿ ಎಸ್ಪಿ ಕಚೇರಿ ಮುಂದೆ ಸುಕ್ತ ತನಿಖೆಗೆ ಆಗ್ರಹಿಸಿ ವಿದ್ಯಾರ್ಥಿನಿ ಪೋಷಕರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಜಮಖಂಡಿ ನಗರದ ರಾಯಲ್ ಪ್ಯಾಲೇಸ್ ಕಾಲೇಜು ವಸತಿ ನಿಲಯದಲ್ಲಿ ಜುಲೈ ೧೦ ರಂದು ಕಾಲೇಜು ವಿದ್ಯಾರ್ಥಿನಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಗೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯ ಪೋಷಕರು ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳಲ್ಲ, ಎನೋ ಪಿತ್ತುರಿ ನಡೆಸಿ ಅವಳ ಕೊಲೆ ಮಾಡಲಾಗಿದೆ. ನಮ್ಮ ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ಎಸ್ಪಿ ಅವರ ಮುಂದೆ ಪೋಷಕರು ಅಳಲು ತೊಡಿಕೊಂಡು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ದಲಿತ ಪರ ಸಂಘಟನೆ ಸೇರಿದಂತೆ ವಿದ್ಯಾರ್ಥಿ ಒಕ್ಕೂಟಗಳು ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿ ಪ್ರಿಯಾಂಕಾ ಮೇತ್ರಿ ಸಾವಿಗೆ ನ್ಯಾಯಕ್ಕಾಗಿ ವಿದ್ಯಾರ್ಥಿನಿ ಪೋಷಕರ ನೇತೃತ್ವದಲ್ಲಿ ಒತ್ತಾಯಿಸಿ ಮನವಿ ಸಲ್ಲಿಸಿದರು.
ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಒಡೆತನದ ಕಾಲೇಜು ಪಿಯುಸಿ ಓದುತ್ತಿದ ದಲಿತ ವಿದ್ಯಾರ್ಥಿನಿ ಜು.10 ರಂದು ಸ್ನೇಹಿತಿರೊಂದಗೆ ಮಾತು ಕತೆ ನಡೆಸಿ ಮಲಗುವುದಾಗಿ ಹೇಳಿ ಹೋಗಿದ ಮೇತ್ರಿ ಮೇಲಿಂದ ಬಿದ್ದು, ಸಾವನಪ್ಪಿರುವ ಘಟನೆ ವರದಿಯಾಗಿತ್ತು.