ಸುರಪುರ: ಬೆಳಗಾವಿ ಜಿಲ್ಲೆಯ ಅನಗೋಳದಲ್ಲಿ ಎಮ್‌ಇಎಸ್ ಮತ್ತು ಶಿವಸೇನೆಯ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ್ದಾರೆ,ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕರ್ನಾಟಕ ಮತ್ತು ವಿಷ್ಣು ಸೇನಾ ಸಮಿತಿ ತಾಲೂಕು ಘಟಕದಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿದೆ.
ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕರು ಮಾತನಾಡಿ,ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನೆಗಳು ಪದೆ ಪದೆ ಕನ್ನಡ ದ್ರೋಹದ ಕೆಲಸ ಮಾಡುತ್ತಿವೆ.ಈಗ ಕನ್ನಡದ ಧ್ವಜವನ್ನು ಸುಟ್ಟಿರುವುದು ಮತ್ತು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿ ಮತ್ತು ಬಸವಣ್ಣನವರ ನಾಮಫಲಕಕ್ಕೆ ಅವಮಾನಿಸಿದ್ದಾರೆ.
ಇಂತಹ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಮತ್ತು ಎಮ್‌ಇಎಸ್ ಗೂಂಡಾಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಸಿದರು.
ಈ ಸಂದರ್ಭದಲ್ಲಿ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮಲ್ಲು ಹೊಸ್ಮನಿ,ವಿಷ್ಣುಸೇನಾ ಸಮಿತಿ ತಾಲೂಕು ಅಧ್ಯಕ್ಷ ಮಲ್ಲು ವಿಷ್ಣುಸೇನಾ ಹಾಗು ಮುಖಂಡರಾದ ದವಲಸಾಬ ಜಾಲಿಬೆಂಚಿ,ರಾಮಕೃಷ್ಣ ನಾಯಕ,ಪರಮಣ್ಣ ಶೆಳ್ಳಗಿ,ದೇವು ನಾಯಕ,ಶಿವಕುಮಾರ,ರಾಮಕೃಷ್ಣ ಡೊಣ್ಣಿಗೇರಾ,ಸಂದೀಪ ಪಾಟೀಲ್ ಸೇರಿದಂತೆ ಅನೇಕರಿದ್ದರು.