ಸುರಪುರ: ತಾಲೂಕಿನ ಗ್ರಾಮೀಣ ಭಾಗಕ್ಕೆ ಹೆಚ್ಚಿನ ಬಸ್‌ಗಳನ್ನು ಓಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ)ದ ಮುಖಂಡರು ನಗರದ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ಗ್ರಾಮೀಣ ಭಾಗಕ್ಕೆ ಹೆಚ್ಚಿನ ಬಸ್‌ಗಳಿಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯುಂಟಾಗುತ್ತಿದೆ,ಈ ಮುಂಚೆ ಕವಡಿಮಟ್ಟಿ ಮಂಗಿಹಾಳ ಮಾರ್ಗವಾಗಿ ಚಿಕ್ಕನಹಳ್ಳಿ ತಳ್ಳಳ್ಳಿ ಗ್ರಾಮಗಳಿಗೆ ಹೋಗುತ್ತಿದ್ದ ಬಸ್‌ಗಳನ್ನು ಈಗ ರದ್ದು ಮಾಡಿದ್ದರಿಂದ ಈ ಭಾಗದ ವಿದ್ಯಾರ್ಥಿಗಳು ನಿತ್ಯವು ಶಾಲಾ ಕಾಲೇಜಿಗೆ ಬರಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ,ಆದ್ದರಿಂದ ಕೂಡಲೇ ಯಥಾಪ್ರಕಾರ ಬಸ್‌ಗಳನ್ನು ಓಡಿಸುವಂತೆ ಒತ್ತಾಯಿಸಿದರು.
ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಸಂಚಾಲಕ ವೀರಭದ್ರಪ್ಪ ತಳವಾರಗೇರಾ,ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಬಡಿಗೇರ,ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಶೇಖರ ಬಡಿಗೇರ,ಮರಲಿಂಗ ಗುಡಿಮನಿ,ಖಾಜಾ ಅಜ್ಮೀರ್ ಖುರೇಶಿ,ಮಾನಪ್ಪ ಶೆಳ್ಳಗಿ,ಎಮ್.ಪಟೇಲ್,ಚನ್ನಪ್ಪ ದೇವಪುರ,ಆಕಾಶ ಕಟ್ಟಿಮನಿ,ಮಲ್ಲೆಶಿ ಶೆಳ್ಳಗಿ ಗೋವರ್ಧನ ತೇಲ್ಕರ್ ಸೇರಿದಂತೆ ಅನೇಕರಿದ್ದರು.