ಜೇವರ್ಗಿ: ಕೆಟ್ಟು ನಿಂತ 17 ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿಗೆ ಕ್ರಮ: ಸದನದಲ್ಲಿ ಸಚಿವ ಈಶ್ವರಪ್ಪ ಭರವಸೆ

0
13

ಬೆಳಗಾವಿ ಸದನ ಕಲಾಪದಲ್ಲಿ ಜೇವರ್ಗಿ ಕುಡಿಯುವ ನೀರಿನ ಘಟಕಗಳ ಬಗ್ಗೆ ಪ್ರಸ್ತಾಪಿಸಿ ಸರಕಾರದ ಗಮನ ಸೆಳೆದ ಸಾಸಕ ಡಾ. ಅಜಯ್ ಸಿಂಗ್, ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆ ಮಾಡಿ ಅನುದಾನ ಮಂಜೂರು ಮಾಡುವಂತೆ ಆರ್ಡಿಪಿಆರ್ ಸಚಿವ ಈಶ್ವರಪ್ಪಗೆ ಆಗ್ರಹ.

ಕಲಬುರಗಿ: ಜಲಾನಯನ ಇಲಾಖೆಯವರು ನಿರ್ಮಾಣ ಮಾಡಿ ನಂತರದಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಹಸ್ತಾಂತರಿಸುವ ಶುದ್ಧ ಕುಡಿಯುವ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಸ್ಥಗಿತಗೊಳ್ಳುತ್ತಿವೆ, ಇದರಿಂದ ಹಳ್ಳಿಗಾಡಲ್ಲಿ ಬಡವರು ಶುದ್ಧ ನೀರಿನಿಂದಲೂ ವಂಚಿತರಾಗುತ್ತಿದ್ದಾರೆದು ದೂರಿರುವ ವಿದಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಸಾಕರಾಗಿರುವ ಡಾ. ಅಜಯ್ ಸಿಂಗ್ ಸದರಿ ಘಟಕಗಳ ನಿರ್ವಹಣೆಗೆ ಪ್ರತ್ಯೇಕ ಲೆಕ್ಕ ಶೀರ್ಷಿಕೆಯಡಿ 10 ಸಾವಿರ ರು ನಷ್ಟು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸರಕಾರದ ಗಮನ ಸೆಳೆದಿದ್ದಾರೆ.

Contact Your\'s Advertisement; 9902492681

ಬೆಳಗಾವಿ ಸುವರ್ಣ ಸೌಧದ ಚಳಿಗಾಲದ ಅಧಿವೇಶನದ ಬುಧವಾರದ ಕಲಾಪದಲ್ಲಿನ ಪ್ರಶ್ನೋತ್ತರ ವೇಳೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಬಗ್ಗೆ ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಸ್ಪಂದಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ  ಜೇವರ್ಗಿಯಲ್ಲಿ ಸ್ಥಗಿತಗೊಂಡಿರುವ ಎಲ್ಲಾ 17 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆದ್ಯತೆ ಮೇಲೆ ರಿಪೇರಿ ಮಾಡೋದಾಗಿಯೂ, ಪ್ರತಿ ಘಟಕಕ್ಕೆ ಮಾಸಿಕ 3 ಸಾವಿರ ರು ಇಲಾಖೆಯಿಂದಲೇ ನೀಡೋದಾಗಿಯೂ ಹೇಳಿದ್ದಾರೆ.

ನಿರ್ವಹಣೆಗೆ ಸಾಕಾಗುತ್ತಿಲ್ಲ ಹಣ: ಘಟಕಗಳಿಂದ ನೀರು ಪಡೆಯುವ  ಸಾರ್ವಜನಿಕರು 20 ಲೀಟರ್‍ಗೆ 5 ರು ಪಾವತಿಸುತ್ತಾರೆ. ಇದರಿಂದ 8 ರಿಂದ 10 ಸಾವಿರ ರುಪಾಯಿ ಹಣ ಸಂಗ್ರಹವಾಗುತ್ತಿದೆ. ಆದರೆ ಘಟಕಗಳ ನಿರ್ವಹಣೆಗೆ ಮಾಸಿಕ 20 ಸಾವಿರ ರು ವೆಚ್ಚವಾಗುತ್ತಿದೆ. ಹೀಗಾಗಿ ಹಣದ ಒರತೆಯಿಂದಾಗಿ ಸೂಕ್ತ ನಿರ್ವಹಣೆ ಕಾಣದೆ ಘಟಕಗಳು ಬಂದ್ ಬೀಳುತ್ತಿವೆ ಎಂದು ಡಾ. ಅಜಯ್ ಸಿಂಗ್ ಸದನದಲ್ಲಿ ಸಮಸ್ಯೆ ಲ್ಲರ ಮನ ಮುಟ್ಟುವಂತೆ ವಿವರಿಸಿದರು.

ತಮ್ಮ ಮತಕ್ಷೇತ್ರ ಜೇವರ್ಗಿಯಲ್ಲೇ ಮಂಜೂರಾಗಿರುವ 57 ಘಟಕಗಳ ಪೈಕಿ 56 ಘಟಕಗಳು ನಿರ್ಮಾಣವಾಗಿವೆ, ಈ ಪೈಕಿ ಕೇವಲ 35 ಮಾತ್ರ ಕಾರ್ಯನಿರ್ವಹಿಸುತ್ತಿವೆ, ಉಳಿದಂತೆ 16 ರಿಂದ 17 ಕುಡಿಯುವ ನೀರಿನ ಘಟಕಗಲು ನಿರ್ವಹಣೆ ಇಲ್ಲದೆ ಸ್ಥಗಿತಗೊಂಡಿವೆ ಎಂದರು.

ಜೇವರ್ಗಿಯ ಸುಂಬಡ, ನರಿಬೋಳ, ಕೆಲ್ಲೂರ್, ಗೊಬ್ಬೂರವಾಡಿ ಸೇರಿದಂತೆ 17 ಹಳ್ಳಿಗಳಲ್ಲಿ ಘಟಕಗಳು ಕೆಲಸ ಮಾಡುತ್ತಿಲ್ಲ. ಇದರಿಂದ ಹಳ್ಳಿಯ ಜನತೆ ಶುದ್ಧ ನೀರಿನಿಂದಲೂ ವಂಚಿತರಾಗುವಂತಾಗಿದೆ ಎಂದು ಸದನದ ಗಮನ ಸೆಳೆದರು. ಜೇವರ್ಗಿಯ ನೀರಿನ ಘಟಕಗಳ ದುರಸ್ಥಿ- ಪ್ರತಿ ಘಟಕಕ್ಕೆ 3 ಸಾವಿರ ರು ಹೆಚ್ಚುವರಿ ಅನುದಾನ- ಈಶ್ವರಪ್ಪ

ಡಾ. ಅಜಯ್ ಸಿಂಗ್ ಅವರ ಗಮನ ಸೆಳೆಯುವ ಪ್ರಶ್ನೆಗೆ ಸ್ಪಂದಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಜೇವರ್ಗಿ ತಾಲೂಕಿನಲ್ಲಿ ಸ್ಥಗಿತಗೊಂಡಿರುವ ಘಟಕಗಳನ್ನು ಆದ್ಯತೆ ಮೇರೆಗೆ ದುರಸ್ಥಿಗೆ ತಾವು ಸೂಚಿಸೋದಾಗಿ ಹೇಳಿದರಲ್ಲದೆ ಪಂಚಾಯ್ತಿಗಳು ನೀರು ಮಾರಾಟದಿಂದ ಬಂದ ಹಣವನ್ನು ಘಟಕಗಳ ಸುಸ್ಥಿತಿಯಲ್ಲಿಡು ಬಳಸಲು ಹೇಳಲಾಗಿದೆ. ಇದರೊಂದಿಗೆ ಪ್ರತಿ ಘಟಕಕ್ಕೆ ಮಾಸಿಕ 3 ಸಾವಿರ ರು ನಿರ್ವಹಣೆ ವೆಚ್ಚ ಇಲಾಖೆಯೇ ನೀಡುತ್ತದೆ ಎಂದರು.

ಶುದ್ಧ ನೀರಿನ ಘಟಕಗಳ ನಿರ್ವಹಣೆ ಹಾಗೂ ಕಾರ್ಯಾಚರಣೆಯನ್ನು ಗ್ರಾಮ ಪಂಚಾಯ್ತಿಗಳವರು ಒಪ್ಪದೆ ಹೋದಲ್ಲಿ ಅಂತಹ ಘಟಕಗಳನ್ನು ಗುರುತಿಸಿ ಅವುಗಳಿಗೆ 5 ವರ್ಷಗಳ ಅವಧಿಗೆ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಟೆಂಡರ್ ಕರೆದು ಗುತ್ತಿಗೆದಾರರಿಗೇ ವಹಿಸಲಾಗುತ್ತಿದೆ ಎಂದೂ ಸಚಿವ ಈಶ್ವರಪ್ಪ ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here