ಅಫಜಲಪೂರ: ತಾಲೂಕಿನ ಬಿದನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ನೀಲಮ್ಮ ಅಂಗಡಿಯವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಯ ಮಕ್ಕಳಿಗಾಗಿ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಹಲವು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ ಅವರ ಸೇವೇಗೆ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿ ಒಲಿದು ಬಂದಿದೆ ಎಂದು ಬಿದನೂರ ಗ್ರಾಮದ ವಿರುಪಾಕ್ಷೇಶ್ವರ ಮಠÀದ ಪೀಠಾಧಿಪತಿ ಯಮುನಯ್ಯ ಗುರುಗಳು ಹೇಳಿದರು.
ಅಫಜಲಪೂರ ತಾಲೂಕಿನ ತಾಲೂಕಿನ ಬಿದನೂರ ಗ್ರಾಮದ ವಿರುಪಾಕ್ಷೇಶ್ವರ ಮಠÀದಲ್ಲಿ ಗ್ರಾಮಸ್ಥರಿಂದ ಗೌರವ ಸನ್ಮಾನ ಹಾಗೂ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿಯನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ನೀಲಮ್ಮ ಅಂಗಡಿಯವರಿಗೆ ವಿತರಿಸಿದರು.
ಸನ್ಮಾನ ಸಮಾರಂಭ ಹಾಗೂ ಅತ್ಯುತ್ತಮ ಮುಖ್ಯಗುರುಗಳ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳೂ ಗ್ರಾಮದಲ್ಲಿ ನೀಲಮ್ಮ ಅಂಗಡಿಯವರನ್ನು ಜಯಘೋಷದೊಂದಿಗೆ ಅದ್ದೂರಿಯಾಗಿ ಸರಳ ಮೆರವಣಿಗಯ ಮೂಲಕ ಸ್ವಾಗತ ಮಾಡಿದರು.ನಂತರ ಕಾರ್ಯಕ್ರಮವನ್ನು ಮತ್ತು ಅವರಳ್ಳಿ ಚಿದಾನಂದ ಮಹಾಸ್ವಾಮಿಗಳು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನೀಲಮ್ಮ ಅಂಗಡಿಯವರು,ಕಳೆದ 5 ವರ್ಷಗಳಿಂದ ಅಫಜಲಪೂರ ತಾಲೂಕಿನ ಬಿದನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನೇ ನನ್ನ ಮಕ್ಕಳೆಂದು ಭಾವಿಸಿ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ, ಮಾಡುವ ಕಾಯಕವನ್ನು ಸತ್ಯ ನಿಷ್ಠೆಯಿಂದ ಮಾಡಿದ್ದೇನೆ. ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದು ,ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯತಿ ಸದಸ್ಯರು, ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ನೀಡಿದ ಸಹಕಾರದಿಂದ ಒಳ್ಳೆಯ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದು ಭಾವುಕರಾಗಿ ನುಡಿದರು.
ಹಳೆಯ ವಿದ್ಯಾರ್ಥಿ ಮಲ್ಲಿಕಾರ್ಜುನ ಕೌಲಗಿ ಅಭಿಮಾನದಿಂದ ಸ್ವಂತ ಖರ್ಚಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಇದಾಗಿತ್ತು. ನೀಲಮ್ಮ ಅಂಗಡಿಯವರ ಜೀವನ ಸಾಧನೆ ಕುರಿತು ರಚಿಸಿ ಹಾಡಿದ ಶಿವಪುತ್ರ ಹೂಗಾರ ಗೀತೆಗೆ ತಬಲಾ ಸಾಥ್ ನೀಡುವ ಮೂಲಕ ಸೂರ್ಯಕಾಂತ ಮಾಸ್ತರ್ ಕಾರ್ಯಕ್ರಮವನ್ನು ಮತ್ತಷ್ಟು ಅದ್ಭುತಗೊಳಿಸಿದರು. ಸಹಶಿಕ್ಷಕಿ ವಿದ್ಯಾವತಿ ಸುಂದರವಾಗಿ ನಿರೂಪಿಸಿದರು.
ವೇದಿಕೆಯ ಮೇಲೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಅರುಣಕುಮಾರ ಹರಳಯ್ಯ,ಸದಸ್ಯರಾದ ಅಂಬಾರಾಯ ವರವಿ,ಬುದ್ಧಿವಂತ ಚಿಕ್ಕೌಲಗಿ,ಶಿವಾನಂದ ಜೋಗೂರ,ಸಿದ್ದು,ಮಹಾಂತಯ್ಯ ಗುತ್ತೇದಾರ,ಸ್ವಪ್ನಾ ಪಾಟೀಲ್,ರಮೇಶ ಪಾಟೀಲ, ಅಕ್ಷತಾ,ಮಲ್ಲಿಕಾರ್ಜುನ ಕೌಲಗಿ ಸೇರಿದಂತೆ ಶಾಲೆಯ ಮಕ್ಕಳು, ಸಿಬ್ಬಂದಿ ವರ್ಗ,ಬಿದನೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.