ಜೇವರ್ಗಿ; ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ವಿಶ್ವಗುರು ಬಸವೇಶ್ವರ ಮೂರ್ತಿಗೆ ಮಸಿ ಬಳೆದ ಪ್ರಕರಣ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಆದ ಅವಮಾನ ಖಂಡಿಸಿ ಜೇವರ್ಗಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಿದ್ದು ಅಂಗಡಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ರಸ್ತೆತಡೆ ಚಳುವಳಿ ಟೈರಗಳಿಗೆ ಬೆಂಕಿ ಹಚ್ಚಿವುದರ ಮೂಲಕ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಕರ್ನಾಟಕ ರಾಜ್ಯದ ವಿವಿಧೆಡೆ ಮೂವರು ಮಹಾನ್ ನಾಯಕರಾದ ವಿಶ್ವ ಗುರು ಬಸವೇಶ್ವರ ,ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಕೆಲ ಕಿಡಿಗೇಡಿಗಳು ಮಸಿ ಬಳೆದು ಪುಂಡಾಟಿಕೆ ಮಾಡಿದ ಎಂ,ಇ,ಎಸ್ ಬೆಂಬಲಿತ ಗುಂಡಾಗಳು ಅವಮಾನ ಮಾಡಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ರಾಜ್ಯ ಸರಕಾರ ಮಧ್ಯ ಪ್ರವೇಶಿಸಿ ತಕ್ಷಣ ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ಧ ಗುಂಡಾ ಕಾಯ್ದೆಯಡಿ ಬಂಧಿಸಿ ಗಡಿಪಾರು ಮಾಡಬೇಕೆಂದು ಹೇಳಿದರು ನಂತರ ತಹಶೀಲ್ದಾರ ವಿನಯಕುಮಾರ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಂಗನಗೌಡ ಪಾಟೀಲ ಕಾಂಗ್ರೆಸ್ ಮುಖಂಡ ರಾಜಶೇಖರ ಸೇರಿ, ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ, ರೇವಣಸಿದ್ದಪ್ಪ ಸಂಕಾಲಿ,ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷ ನಾಗಣ್ಣ ಗಡ್ಡದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ನಿಂಗಣ್ಣ ರದ್ದೇವಾಡಗಿ ಬಾಪುಗೌಡ ಪಾಟೀಲ, ಭಗವಂತರಾಯ ಬೆಣ್ಣೂರ, ಭೀಮರಾವ ಗುಜಗೊಂಡ ಷಣ್ಮುಖಪ್ಪ ಹಿರೇಗೌಡ ವಿಜಯಕುಮಾರ ಕಲ್ಲಹಂಗರಗಾ ದಯಾನಂದ ದೇವರಮನಿ ಸಿದ್ದು ಮದರಿ ಈರಣ್ಣ ಬನ್ನೇಟ್ಟಿ ಸಾಯಬಣ್ಣ ದೊಡ್ಡಮನಿ ನಿಂಗಣ್ಣ ಬಂಡಾರಿ ಗುರುಲಿಂಗಯ್ಯ ಯನಗುಂಟಿ ವಿಜಯಕುಮಾರ ಬಿರಾದಾರ ತಿಪ್ಪಣ್ಣ ಹಡಪಾದ ಚಂದ್ರಶೇಖರ ನೇರಡಗಿ ನೀಲಕಂಠ ಅವಟಿ ಶಿವಕುಮಾರ ಕಲ್ಲಾ ರವಿ ಕೋಳಕೂರ ಅಶೋಕ ಗುಡೂರ ಮಲ್ಲಿಕಾರ್ಜುನ ಬಿರಾದಾರ ಸಿದ್ದು ಅಂಕುಶದೊಡ್ಡಿ ಭಗವಂತರಾಯ ಶಿವಣ್ಣನವರ ಬಾಪುಗೌಡ ಕಲ್ಲಹಂಗರಗಾ ಸೇರಿದಂತೆ ವೀರಶೈವ ಸಮಾಜದ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು