ಸರಕಾರದ ಸವಲತ್ತು ರೈತನ ಮನೆಗೆ ತಲುಪಬೇಕು: ಪಾಟೀಲ್

0
6

ಕಲಬುರಗಿ: ರೈತ ದೇಶದ ಅನ್ನದಾತ, ರೈತ ದೇಶದ ಬೆನ್ನೆಲುಬು ಎಂಬುದು ಕೇವಲ ಘೋಷ ವಾಕ್ಯವಾಗದೇ ಸರಕಾರದ ಸವಲತ್ತುಗಳನ್ನು ರೈತನ ಮನೆ ಬಾಗಿಲಿಗೆ ತಂದು ಕೊಡುವಂತಹ ವ್ಯಕ್ತಿಗಳನ್ನು ಸದನಕ್ಕೆ ಕಳಿಸುವ ಜವಾಬ್ದಾರಿ ರೈತನ ಮೇಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಹೆಚ್. ಶಿವರಾಮೇಗೌಡರ ಕರವೇ ಕಲಬುರಗಿ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಪ್ರಯುಕ್ತ ರೈತರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಮುಂಜಾನೆ ಎದ್ದು ಸೇವಿಸುವ ಹಾಲಿನಿಂದ ಹಿಡಿದು ತರಕಾರಿ, ಅಕ್ಕಿ, ಕಾಳು ಸೇರಿದಂತೆ ಮತ್ತಿತರ ಆಹಾರ ಉತ್ಪನ್ನಗಳು ಬರುವುದು ಅನ್ನದಾತನಿಂದ. ಸೈನಿಕರು ಗಡಿಕಾಯ್ದು ದೇಶರಕ್ಷಿಸಿದರೆ ಅನ್ನದಾತರು ಹೊಲ ಕಾಯ್ದು ನಮ್ಮ ಉದರ ತುಂಬಿಸುತ್ತಾರೆ. ಆದರೆ, ಅವರ ಶ್ರಮ ಮಾತ್ರ ಯಾರಿಗೂ ಕಾಣುವುದಿಲ್ಲ.  ರೈತರನ್ನು ಗೌರವಿಸುವುದಕ್ಕಾಗಿಯೇ ಇಂದು (ಡಿಸೆಂಬರ್ 23) ದೇಶದೆಲ್ಲೆಡೆ ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿನವನ್ನಾಗಿ ಆಚರಿಸಿ ರೈತರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದರು.

ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ ಎಂದರು.

ಮಾಜಿ ಸಚಿವ ರೇವು ನಾಯಕ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬಿರಬಿಟ್ಟೆ, ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆ ಮೇಲೆ ವಿಜಯಕುಮಾರ ತೇಗಲತಿಪ್ಪಿ, ಎಂ.ಡಿ ಸಿದ್ದೀಕಿ ಇದ್ದರು.

ಸಾಂಕೇತಿಕವಾಗಿ ಪ್ರಗತಿಪರ ರೈತರಾದ ಸಿದ್ದಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ಸಿ. ಪಾಟೀಲ್, ಮಲ್ಲೇಶಪ್ಪ ರೇವಣಸಿದ್ದಪ್ಪ, ಜಲೀಂದ್ರ ದಾನಪ್ಪ, ಶಿವಶರಣಪ್ಪ ಕೋಬಾಳ, ಬಸವರಾಜ ಪೀರಪ್ಪ, ಮುರುಗೆಪ್ಪಗೌಡ ಲಿಂಗಶೆಟ್ಟಿ, ಫಾತೀಮಾ ಕಾಲೇಸಾಬ್, ಸಿದ್ದಪ್ಪ ಈರ್ಪಣ್ಣ, ಕಾಲೇಸಾಬ್ ದೊಡಮನಿ ಅವರಿಗೆ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here