ಬಾಗಲಕೋಟೆ ಎಂ.ಬಿ.ಎ. ಕಾಲೇಜಿನಲ್ಲಿ ಬೆಲ್ಲದ ಹಬ್ಬ

0
12
  • ಕುಶಲ

ಬಾಗಲಕೋಟೆ: ರೈತ ದಿನಾಚರಣೆ ಹಿನ್ನೆಲೆಯಲ್ಲಿ ಬೆಲ್ಲದ ಹಬ್ಬ ಆಯೋಜನೆ ಮಾಡಲಾಗಿತ್ತು. ರೈತರಿಗೆ ಸಾವಯವ ಕೃಷಿ ಕಡೆ ಉತ್ತೇಜನ, ದೇಶಿತಳಿಯ ಮಹತ್ವ ಸಾರುವ ಉದ್ದೇಶ ಪ್ರಮುಖವಾಗಿತ್ತು. ಕಾರ್ಯಕ್ರಮದಲ್ಲಿ ರೈತರಷ್ಟೇ ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಸಿಹಿ ತಿಂಡಿ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಬೆಲ್ಲದಲ್ಲಿ ಮಾಡಿರುವುದು ಅಂದರೆ ರುಚಿಯೂ ಹೆಚ್ಚು. ಆರೋಗ್ಯಕ್ಕೂ ಒಳ್ಳೇದು. ಹೀಗಾಗೇ ಬಾಗಲಕೋಟೆಯಲ್ಲಿ ಸ್ವೀಟ್ಸ್ ಪ್ರಿಯರೆಲ್ಲಾ ನಿನ್ನೆ ಬಾಯಿ ಚಪ್ಪರಿಸಿದ್ದರು. ವಿದ್ಯಾಗಿರಿಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂಬಿಎ ಕಾಲೇಜಿನಲ್ಲಿ ಬೆಲ್ಲದ ಹಬ್ಬ ಆಚರಣೆ ಮಾಡಲಾಯ್ತು. ಬಾಗಲಕೋಟೆ ಕೃಷಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಲ್ಲದಿಂದ ತಯಾರಾದ ತಿನಿಸುಗಳು ಎಲ್ಲರ ಗಮನ ಸೆಳೆದವು. ಯಾವುದೇ ರಾಸಾಯನಿಕವಿಲ್ಲದ ದೇಶಿ ಸಾವಯವ ಬೆಲ್ಲ, ಬೆಲ್ಲದ ಪುಡಿ, ಬೆಲ್ಲದ ಕ್ಯೂಬ್ಸ್ ಹೀಗೆ ಹಲವು ಬೆಲ್ಲದ ಜತೆ ಸಿಹಿತಿನಿಸುಗಳ ಪ್ರದರ್ಶನ ಕೂಡ ನಡೀತು.

Contact Your\'s Advertisement; 9902492681

ಇನ್ನು ರೈತ ದಿನಾಚರಣೆ ಹಿನ್ನೆಲೆಯಲ್ಲಿ ಬೆಲ್ಲದ ಹಬ್ಬ ಆಯೋಜನೆ ಮಾಡಲಾಗಿತ್ತು. ರೈತರಿಗೆ ಸಾವಯವ ಕೃಷಿ ಕಡೆ ಉತ್ತೇಜನ, ದೇಶಿತಳಿಯ ಮಹತ್ವ ಸಾರುವ ಉದ್ದೇಶ ಪ್ರಮುಖವಾಗಿತ್ತು. ಕಾರ್ಯಕ್ರಮದಲ್ಲಿ ರೈತರಷ್ಟೇ ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿದ್ಯಾರ್ಥಿಗಳೇ ದೇಶಿ ಸಾವಯವ ಬೆಲ್ಲದಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸಿದ್ದರು.

ಎಳ್ಳಿನ ಚಿಕ್ಕಿ‌, ಬೆಲ್ಲದ ವಡಾ, ಲಡಿಕಿ ಲಾಡು, ಮಾದಲಿ, ಶೇಂಗಾ ಹೋಳಿಗೆ‌, ಶೇಂಗಾ ಅಂಟು, ಶೆಂಗಾ ಉಂಡೆ, ಬೆಲ್ಲದ ಕರದಂಟು ಸೇರಿದಂತೆ ಹಲವು ಬಗೆಯ ತಿನಿಸು ಮಾಡಲಾಗಿತ್ತು. ಅದರಲ್ಲೂ ಬೇಲದ ಹಣ್ಣಿನ ಜಾಮ್ ಮಾಡಿದ್ದು, ಮತ್ತೊಂದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here