ರೈತ ಸಮಾಚಾರ ಮಾಸಪತ್ರಿಕೆಯನ್ನು ಬಿಡುಗಡೆ

0
21

ಕಲಬುರಗಿ: ಸರಕಾರಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ರೈತ ದಿನಾಚರಣೆ ಸಂದರ್ಭದಲ್ಲಿ ಸಂಸದ ಡಾ. ಉಮೇಶ ಜಾಧವ ಅವರು ರೈತ ಸಮಾಚಾರ ಮಾಸಪತ್ರಿಕೆಯ ಕ್ಯಾಲೆಂಡರ ಮತ್ತು ಒಂದು ಲಕ್ಷ ರೈತರಿಗೆ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲು ರೈತ ಸಮಾಚಾರ ಮಾಸಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಕರ್ನಾಟಕ ಕೃಷಿ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ೭೫ ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ರೈತ ಸಮಾಚಾರ ಮಾಸಪತ್ರಿಕೆ ಕರ್ನಾಟಕದ ೩೧ ಜಿಲ್ಲೆಯಲ್ಲಿ ಬರುವ ಒಂದು ಲಕ್ಷ ರೈತರಿಗೆ ರೈತ ಸಮಾಚಾರ ಕನ್ನಡ ಮಾಸಪತ್ರಿಕೆ ಒಂದು ವರ್ಷದ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲಾಗುವುದು ಎಂದು ಸಂಪಾದಕರಾದ ಗಿರೀಶಗೌಡ ಇನಾಮದಾರ ಅವರು ತಿಳಿಸಿದರು.

Contact Your\'s Advertisement; 9902492681

ಆಸಕ್ತ ರೈತ ಬಾಂದವರು ತಮ್ಮ ಮೊಬೈಲ್ ನಂ. ವಿಳಾಸವನ್ನು ಕನ್ನಡ ರೈತ ಸಮಾಚಾರ ಕನ್ನಡ ಮಾಸ ಪತ್ರಿಕೆ ಮೊ.ನಂ. 9916664444 ಸಂಖ್ಯೆಗೆ ರೈತ ಬಾಂದವರು ತಮ್ಮ ಮೊಬೈಲ್ ಸಂಖ್ಯೆಯನ್ನು ಕಳಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ ಕಳುಹಿಸಿದ ರೈತರಿಗೆ ಒಂದು ವರ್ಷದ ಉಚಿತ ಡಿಜಿಟಲ್ ಚಂದಾದಾರರಾಗಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದರಾಮಪ್ಪ ಧಂಗಾಪೂರ, ಜಂಟಿ ನಿರ್ದೇಶಕರಾದ ಡಾ. ರಿತೇಂದ್ರನಾಥ ಸುಗೂರ, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ. ದಿಲೀಷ್ ಶಶಿ, ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಲೋಖಂಡ, ಡಾ. ಎಸ್.ಎ. ಪಾಟೀಲ್, ಡಾ. ರಾಜು ತೆಗ್ಗೆಳ್ಳಿ, ಶರಣಪ್ಪ ತಳವಾರ, ಚಂದ್ರಶೇಖರರೆಡ್ಡಿ ನಾಲವಾರ, ಮಹಾದೇವಯ್ಯ ಸೇರಿದಂತೆ ಅನೇಕ ಕೃಷಿ ತಜ್ಞರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here