ಸುರಪುರ: ಕಳೆದ ೨೧ನೇ ತಾರೀಖು ನಗರದ ಶಿಬಾರಬಂಡಿ ಬಳಿಯಲ್ಲಿ ಬೀದರ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಸಿಕ್ಕಿದ್ದ ಮೃತ ದೇಹದ ಗುರುತು ಪತ್ತೆ ಮಾಡಲಾಗಿದೆ.ಪೊಲೀಸರಿಂದ ಮೃತನು ಧರಿಸಿದ್ದ ಅಂಗಿಯ ಆಧಾರದ ಮೇಲೆ ಗುರುತು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.
೨೧ನೇ ತಾರೀಖು ರಾತ್ರಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ಕುಂಬಾರಪೇಟೆ ಹೋಗುವ ಮಾರ್ಗ ಮದ್ಯದ ಶಿಬಾರಬಂಡಿ ಬಳಿಯಲ್ಲಿನ ಹೆದ್ದಾರಿ ಮೇಲೆ ಮೃತದೇಹ ಇರುವುದನ್ನು ಹೈವೆ ಪೆಟ್ರೋಲಿಂಗ್ ಪೊಲೀಸರು ಕಂಡು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು,ನಂತರ ಮೃತನ ಗುರುತು ಪತ್ತೆಯಾಗದಕಾರಣ ಮೃತ ದೇಹವನ್ನು ಶಹಾಪುರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು.
ನಂತರ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಮೃತನು ಕಾಣೆಯಾದ ಬಗ್ಗೆ ಹಾಕಿದ್ದನ್ನು ನೋಡಿರುವ ಸುರಪುರ ಠಾಣೆಯ ಪೊಲೀಸ್ ಪೇದೆ ದಯಾನಂದ ಜಮಾದಾರ್ ಎನ್ನುವವರು ಮೃತನು ಧರಿಸಿದ್ದ ಅಂಗಿ ಹಾಗು ಸಾಮಾಜಿಕ ಜಾಲತಾಣದಲ್ಲಿ ಹಾಕಿದ ವ್ಯಕ್ತಿ ಧರಿಸಿದ್ದ ಅಂಗಿ ಒಂದೆಯಾಗಿದ್ದರಿಂದ ಸಂಬಂಧಿಸಿದವರಿಗೆ ಮಾಹಿತಿಯನ್ನು ತಿಳಿಸಿದ ನಂತರ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದೆ.
ಮೃತ ವ್ಯಕ್ತಿ ಶಹಾಪುರ ಗ್ರಾಮದ ಗೋಗಿ ಕೆ ಗ್ರಾಮದ ಶಿವಕುಮಾರ ಶರಣಪ್ಪ ಗೌರ ಗ್ರಾಮದವರೆಂದು ಗುರುತಿಸಲಾಗಿದೆ.ನಂತರ ಸಂಬಂಧಿಕರಿಗೆ ವಿಷಯ ತಿಳಿಸಿದ್ದರಿಂದ ಶನಿವಾರ ಬೆಳಿಗ್ಗೆ ಮೃತನ ಸಂಬಂಧಿಕರು ಆಗಮಿಸಿದ ನಂತರ ಶವದ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಸಂಬಂಧಿಕರಿಗೆ ಮೃತದೇಹ ರವಾನಿಸಲಾಗಿದೆ.