ವಚನ ಸಾಹಿತ್ಯದ ದೃವತಾರೆ ಅಜಗಣ್ಣ-ಮುಕ್ತಾಯಕ್ಕ

0
375

ಹೆಣ್ಣು, ಹೊನ್ನು, ಮಣ್ಣಿನ ಮೇಲಿರುವ ಮೋಹ ಕವಿ ರನ್ನ, ಜನ್ನ, ಪೊನ್ನರ ಮೇಲಿದ್ದರೆ, ಬಡ್ಡಿಯ ಮೇಲಿರುವ ಮೋಹ ಜಗಜ್ಯೋತಿ ಬಸವಣ್ಣನ ಮೇಲಿದ್ದರೆ, ಮೋಸದ ಮೇಲಿರುವ ಮೋಹ ಕುಮಾರವ್ಯಾಸನ ಮೇಲಿದ್ದರೆ, ಅವಿವೇಕದ ಮೇಲಿನ ಮೋಹ ಸ್ವಾಮಿ ವಿವೇಕಾನಂದರ ಮೇಲಿದ್ದರೆ, ಕನ್ನಡಿಯ ಮೇಲಿರುವ ಮೋಹ ಕನ್ನಡದ ಮೇಲಿದ್ದರೆ ಭಾರತ ಮಾತೆ, ನಿನ್ನ ಭೂಗರ್ಭಕ್ಕೆ ಭಾರವಾಗುವುದಕ್ಕಿಂತ ನಮ್ಮವರ ಬಾಳು ಬಂಗಾರವಾಗುತ್ತಿತ್ತು ಎಂಬ ಅನುಭಾವದ ಮಾತಿನಂತೆ ೧೨ನೇ ಶತಮಾನದಲ್ಲಿ ರಚಿತವಾದ ವಚನ ಸಾಹಿತ್ಯದ ವಿಶ್ವಕ್ಕೆ ನೀಡಿದ ಶ್ರೇಷ್ಠ ಕೊಡುಗೆಯಾಗಿದೆ.

Contact Your\'s Advertisement; 9902492681

ಸಮಯವೇ ದೇವರು. ಸಮಯಕ್ಕೆ ಯಾರು ಬೆಲೆ ಕೊಡುವುದಿಲ್ಲವೋ ಅವರು ದೇವರಿಗೂ ಬೆಲೆ ಕೊಡುವುದಿಲ್ಲ. ಆಡಿದ ಮಾತು, ಹೊಡೆದ ಮುತ್ತು ಗತಿಸಿದ ಸಮಯ ಮತ್ತೆ ಮರಳಿ ಬರುವುದಿಲ್ಲ. ಮುತ್ತಿನಹಾರ, ಮಾಣಿಕ್ಯದ ದೀಪ್ತಿ, ಸ್ಪಟಿಕದ ಸಲಾಕೆಯಂತಿರುವ ಶರಣರ ನುಡಿಗಡಣ ಬದುಕಿಗೆ ಪೂರಕವಾದವುಗಳಾಗಿವೆ. ೧೨ನೇ ಶತಮಾನದ ಅನೇಕ ಶರಣರಲ್ಲಿ ಅಜಗಣ್ಣ- ಮುಕ್ತಾಯಕ್ಕ ಎಂಬ ಅಣ್ಣ-ತಂಗಿ ಕೂಡ ಇದ್ದರು. ಗದಗ ಜಿಲ್ಲೆಯ “ಲಕ್ಕುಂಡಿ” ಇವರ ಗ್ರಾಮ. ಮಹಾತತ್ವಜ್ಞಾನಿ, ಕಾಯಕಯೋಗಿಯಾಗಿದ್ದ ಅಜಗಣ್ಣನ ೧೦ ವಚನ, ಮುಕ್ತಾಯಕ್ಕನ ೩೮ ವಚನಗಳು ದೊರೆತಿವೆ. ತಂದೆ-ತಾಯಿಯನ್ನು ಕಳೆದುಕೊಂಡ ಮುಕ್ತಾಯಕ್ಕಳಿಗೆ ಅಜಗಣ್ಣನೇ ಅಣ್ಣ, ತಂದೆ-ತಾಯಿ ಗುರುವಾಗಿದ್ದರು ಎಂಬುದು ವಿಶೇಷ ಸಂಗತಿಯಾಗಿದೆ.

ಮುಕ್ತಾಯಕ್ಕನಿಗೆ “ಮಸಳಿಕಲ್ಲು” ಎಂಬ ಗ್ರಾಮದ ವ್ಯಕ್ತಿಯೊಬ್ಬನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರೆಂದು ತಿಳಿದು ಬರುತ್ತದೆ. ವಚನಕಾರರಲ್ಲಿಯೇ ಈಕೆಗೆ ಅಗ್ರ ಸ್ಥಾನವಿದ್ದು, ದಿಟ್ಟ ವ್ಯಕ್ತಿತ್ವ, ಸ್ವತಂತ್ರ ಪ್ರವೃತ್ತಿಯ ಶರಣೆ ಎಂದು ಗುರುತಿಸಲಾಗುತ್ತದೆ. ಅಕ್ಕಮಹಾದೇವಿ ಭಕ್ತಿ ಮಾರ್ಗ, ತಾರ್ಕಿಕ ಜ್ಞಾನ ಮಾರ್ಗ ಹೊಂದಿದ್ದರೆ ಮುಕ್ತಾಯಕ್ಕ ವೈಚಾರಿಕತೆಯ ದಿಟ್ಟ ನಿಲುವಿನ ಜ್ಞಾನ ಮಾರ್ಗ ಹೊಂದಿದ್ದಳು. ಅಜಗಣ್ಣನ ಅಂಕಿತನಾಮ “ಮಹಾಘನ ಸೋಮೇಶ್ವರ”, ಮುಕ್ತಾಯಕ್ಕನ ಅಂಕಿತ ಅಜಗಣ್ಣತಂದೆ.

ಎನ್ನ ಭಾವಕ್ಕೆ ಗುರುವಾದನಯ್ಯ ಬಸವಣ್ಣನು
ಎನ್ನ ನೋಟಕ್ಕೆ ಲಿಂಗವಾದನಯ್ಯ ಚೆನ್ನಬಸವಣ್ಣನು
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯ ಪ್ರಭುದೇವರು
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯ
ಮರುಳಶಂಕರ ದೇವರು
ಎನ್ನ ಹೃದಯಕ್ಕೆ ಮಂತ್ರವಾದನಯ್ಯ ಮಡಿವಾಳಯ್ಯನು
ಇಂತೀ ಐವರ ಕಾರೂನ್ಯ ಪ್ರಸಾದವ ಕೊಂಡು
ಬದುಕಿದೆನಯ್ಯ ಅಜಗಣ್ಣ ತಂದೆ

ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, Pಮರುಳಶಂಕರದೇವ, ಮಡಿವಾಳಯ್ಯ ಮುಂತಾದ ಶರಣರ ಕರುಣೆಯಿಂದಾಗಿ ತನಗೊಂದು ವ್ಯಕ್ತಿತ್ವ ತಂದುಕೊಂಡೆ ಎಂಬುದನ್ನು ಸ್ಮರಿಸುತ್ತಾಳೆ. ಕಾಯಕನಿಷ್ಠೆ, ಅಧ್ಯಾತ್ಮಚಿಂತನೆ, ಭಕ್ತಿಯ ಮೂಲಗುರು ಸೇವೆ, ಐಶ್ವರ್ಯ ಮೂಲ ಲಿಂಗಾರ್ಚೆನೆ, ಮೋಕ್ಷ ಮೂಲ ಘಟ ಸಂತೃಪ್ತಿ, ಸಾಕು ಎನ್ನುವುದು ಸಿರಿತನ, ಬೇಕು ಎನ್ನುವುದು ಬಡತನ ಹೀಗೆ ಬದುಕುವುದಕ್ಕೆ ಬೇಕಾದ ಎಲ್ಲ ಮಾತುಗಳನ್ನು ತಮ್ಮ ವಚನಗಳಲ್ಲಿ ಹೇಳಿದ ಮುಕ್ತಾಯಕ್ಕ ವಚನ ಸಾಹಿತ್ಯದ ದೃವತಾರೆಯಾಗಿದ್ದಾರೆ.

ಅಜಗಣ್ಣನ ಮೃತದೇಹವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು ಅಣ್ಣನ ಅಗಲಿಕೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಶೋಕಗೀತೆಗಳಂತಿವೆ. ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿದ್ದಾಗ ಅಲ್ಲಮರು ಅವಳೊಂದಿಗೆ ನಡೆಸಿದ ಸಂವಾದ ಸುಂದರ ಅಧ್ಯಾತ್ಮ, ಅನುಭಾವ ಗೀತೆಗಳೆನಿಸಿವೆ.

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ
ಹೊತ್ತುಗಳೆವಿರಿ
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ
ಶಿವಾನುಭವವ, ನೋಡಬನ್ನಿ
ಅಜಗಣ್ಣನಿರವ ಬಸವಣ್ಣತಂದೆ

ಶರಣರು ಬಹಿರಂಗದ ಮಾತುಗಳಿಗೆ ತಲೆಕೆಡಿಸಿಕೊಂಡವರಲ್ಲ. ಅಂತರಂಗ, ಆತ್ಮಸಾಕ್ಷಿಗನುಗುಣವಾಗಿ ಬಾಳಿ ಬದುಕಿದವರು. ನುಡಿದಂತೆ ನಡೆದ ಅವರ ಬದುಕಿನ ಪರಿ ಮಹಾ ಬೆಳಗು, ಮಹಾ ಬೆರಗು. ಬಸವಾದಿ ಶರಣರನ್ನು ಸ್ಮರಣೆ ಮಾಡುವುದೇ ಒಂದು ಯೋಗ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here