ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಒಕ್ಕೂಟದ ಡಾ:ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ರಾಜ್ಯದಲ್ಲಿನ ಅತಿಥಿ ಉಪನ್ಯಾಸಕರು ಕಳೆದ ೧೫ ರಿಂದ ೨೦ ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇವೆ,ಅನೇಕ ವರ್ಷಗಳಿಂದ ನಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಾ ಬರುತ್ತಿದ್ದೇವೆ ಆದರೂ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ,ಅಲ್ಲದೆ ಕಳೆದ ೧೫ ದಿನಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿದ್ದೇವೆ ಆದರೆ ಇದುವರೆಗೆ ಸರಕಾರ ನಮ್ಮ ಬೇಡಿಕೆಗಳ ಕುರಿತು ಮಾತನಾಡುತ್ತಿಲ್ಲ.
ಈಗ ಮತ್ತೆ ಒತ್ತಾಯವನ್ನು ಮಾಡುತ್ತಿದ್ದೇವೆ ಸರಕಾರ ಕೂಡಲೇ ನಮ್ಮ ಬೇಡಿಕೆಗಳಾದ ನಮ್ಮನ್ನು ಖಾಯಂಗೊಳಿಸಬೇಕು,ಸೇವಾ ಭದ್ರತೆ ನೀಡಬೇಕು ಮತ್ತು ವೇತನ ಹೆಚ್ಚಿಸಬೇಕು ಎನ್ನುವ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಸುವಂತೆ ಆಗ್ರಹಿಸಿದರು.ಕೋವಿಡ್ ಕಾರಣದಿಂದ ಅನೇಕ ಜನ ಅತಿಥಿ ಉಪನ್ಯಾಸಕರು ಜೀವನ ನಡೆಸಲು ಕಷ್ಟವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮುಂದೆಯೂ ಇಂತಹ ಘಟನೆಗಳು ಮುಂದುವರೆದರೆ ಅದಕ್ಕೆ ಸರಕಾರವೇ ಹೊಣೆಯಾಗಲಿದೆ.ಆದ್ದರಿಂದ ಕೂಡಲೇ ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ನಂತರ ಸ್ಥಳಿಯ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಬರೆದ ಮನವಿಯನ್ನು ತಸಹೀಲ್ದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಬಸವರಾಜ,ವೆಂಕಟೇಶಗೌಡ,ಡಾ:ಹಳ್ಳೆಪ್ಪ,ಆದಿಶೇಷ,ಮಾನಪ್ಪ,ದತ್ತಾತ್ರೆಯ ನಾಯಕ,ಶಾಂತಪ್ಪ,ನಿಂಗಪ್ಪ,ರೇಣುಕಾ,ರುಬಿಯಾ,ಡಾ:ಹೊನ್ನಪ್ಪ,ತಾಯಮ್ಮ,ಡಾ:ಭೀಮರಾಯ,ಪರಾಗರಾಜ,ಜ್ಯೋತಿ ಭಂಡಾರಿ,ಹಂಪಮ್ಮ,ಕವಿತಾ ಸೇರಿದಂತೆ ಅನೇಕರಿದ್ದರು.