ಕೊಪ್ಪಳ ಜಿಲ್ಲೆಯಾದ್ಯಂತ ಜಾಲಿಮ ಸಂಘಟಿಸಲು ಜಾಮದಾರ ಕರೆ

0
5

ಕೊಪ್ಪಳ: ನಿನ್ನೆ ಇಲ್ಲಿಗೆ ಆಗಮಿಸಿದ್ದಂತ ಜಾಗತಿಕ ಲಿಂಗಾಯತ ಮಹಾಸಭದ ರಾಷ್ಟ್ರೀಯ ಕಾರ್ಯದ್ಯಕ್ಷರಾದ ಡಾ. ಶಿವಾನಂದ ಜಾಮದಾರ್ ಅವರು *ಲಿಂಗಾಯತ ಧರ್ಮ ಸಂಘಟನೆ* ವಿಚಾರಗೋಷ್ಠಿ ಕಾರ್ಯಕ್ರಮದ ನೆತೃತ್ವ ವಹಿಸಿ ಮಾತನಾಡಿದ ಅವರು ಮುಂಬರುವ ಜನಗಣತಿಯೊಳಗೆ ಎಲ್ಲರು ಜಾಗತಿಕ ಲಿಂಗಾಯತ ಮಹಾಸಭದ ಸದಸ್ಯತ್ವವನ್ನು ಹೊಂದುವ ಮೂಲಕ ಇಡೀ ಕೊಪ್ಪಳ ಜಿಲ್ಲೆಯಾದ್ಯಂತ ಜಾಗತಿಕ ಲಿಂಗಾಯತ ಮಹಾಸಭವನ್ನು ಸಂಘಟಿಸಲು ಕರೆ ನೀಡಿದ್ದಾರೆ.

ಎಲ್ಲಾ ಲಿಂಗಾಯತ ಧರ್ಮಿಗಳು ಜನಗಣತಿಯ ಕಾಲಂನಲ್ಲಿ ನಮ್ಮ ಧರ್ಮ ಲಿಂಗಾಯತ ಧರ್ಮವೆಂದೆ ಬರೆಯಿಸಿರಿ ಎಂದು ಹೇಳುವ ಮೂಲಕ ಈವೊಂದು ವಿಚಾರವನ್ನು ಲಿಂಗಾಯತ ಸಮುದಾಯದ ಎಲ್ಲ ವರ್ಗದವರಿಗೂ ತಲುಪಿಸಬೇಕು ಎಂದು ಸಭಿಕರಲ್ಲಿ ಮನವಿ ಮಾಡಿಕೊಂಡರು.

Contact Your\'s Advertisement; 9902492681

ನಮ್ಮ ಲಿಂಗಾಯತ ಧರ್ಮದ ಹೋರಾಟ ಕೇಂದ್ರ ಸರ್ಕಾರದಿಂದ ಮಾನ್ಯತೆ ಸಿಗುವವರೆಗು ಇದು ಜೀವಂತವಾಗಿ ಇರಬೇಕು ಏಕೆಂದರೆ ನಮ್ಮ ಲಿಂಗಾಯತ ಧರ್ಮದಲ್ಲಿ ಸಾಕಷ್ಟು ಒಳಪಂಗಡಗಳಿದ್ದು ಅವರು ಶಿಕ್ಷಣದಿಂದ ಸರಕಾರಿ ಉದ್ಯೋಗಗಳಿಂದ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಹಾಗಾಗಿ ಎಲ್ಲ ಧರ್ಮಗಳಿಗು ಸಿಕ್ಕಂತ ಮಾನ್ಯತೆ ನಮ್ಮ ಲಿಂಗಾಯತ ಧರ್ಮಕ್ಕೂ ಸಿಗಬೇಕೆಂಬ ಸದುದ್ದೇಶದಿಂದ ಈ ಹೋರಾಟವನ್ನು ಮುಂದುವರಿಸಬೇಕು ಎಂಬುದು ಜಾಮದಾರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.

ಲಿಂಗಾಯತ ಧರ್ಮದ ಇತಿಹಾಸವನ್ನು ಎಳೆಯೆಳೆಯಾಗಿ ಬಿಚ್ಚಿಡುತ್ತ ಅವರು ಸಭಿಕರಲ್ಲಿ ಅಚ್ಚರಿ ಮೂಡಿಸಿದ್ದರು. ನಮ್ಮ ಲಿಂಗಾಯತ ಧರ್ಮದ ಇತಿಹಾಸದ ಉದ್ದಕ್ಕೂ ಸಾಕಷ್ಟು ಅನ್ಯಾಯವನ್ನು ಎದುರಿಸುತ್ತ ಬಂದಿದೆ, ನಮ್ಮ ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗವನ್ನು ನಾವು ಮರೆತಿದ್ದೇವೆ ಇನ್ನು ಮುಂದಾದರು ಅವರ ವಚನಗಳನ್ನು ಅವರ ತತ್ವಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯೊಣವೆಂದು ಹೇಳುತ್ತ ಸಭಿಕರು ಕೇಳುವ ಪ್ರಶ್ನೆಗಳಿಗೆ ಡಾ. ಶಿವಾನಂದ ಜಾಮದಾರ್ ಶರಣರು ಸಮರ್ಪಕವಾಗಿ ಉತ್ತರಿಸುತ್ತ ಸಭೆಯ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

ಈವೊಂದು ಸಭೆಗೆ ಕೊಪ್ಪಳ ಜಿಲ್ಲೆಯವರಲ್ಲದೆ ಹತ್ತಿರದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಬಸವಭಕ್ತರು ಸಹ ಆಗಮಿಸಿ ಇನ್ನೂರಕ್ಕೂ ಹೆಚ್ಚು ಜನಗಳು ಸಭೆಯಲ್ಲಿ ಭಾಗವಹಿಸಿ *ಲಿಂಗಾಯತ ಧರ್ಮದ ಸಂಘಟನೆ* ವಿಚಾರಗೋಷ್ಠಿಯ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದರು.

ವೇದಿಕೆಯ ಮೇಲೆ ಕೊಪ್ಪಳ ಜಿಲ್ಲೆಯ ಜಾಲಿಮ ಸಂಚಾಲಕರಾದ ಶರಣ ಹನುಮೇಶ್ ಕಲ್ಮಂಗಿ, ಗಂಗಾವತಿ ತಾಲೂಕಿನ ಸಂಚಾಲಕರಾದ ಶರಣ ಸಿದ್ದಣ್ಣ ಜಕ್ಕಲಿ, ಕೊಪ್ಪಳ ತಾಲೂಕಿನ ಸಂಚಾಲಕರಾದ ಶರಣಬಸನಗೌಡ ಪಾಟೀಲ್, ಧಾರವಾಡದ ಜಾಲಿಮದ ಜಿಲ್ಲಾಧ್ಯಕ್ಷರು, ಕುಷ್ಟಗಿ ತಾಲೂಕಿನ ಮಾಜಿ ಶಾಸಕರಾದ ಕೆ. ಶರಣಪ್ಪವರು ಇನ್ನುಳಿದ ಅತಿಥಿಗಳು ಉಪಸ್ಥಿತಿ ಇದ್ದರು.

ಸಭೆಯಲ್ಲಿ ಬಸವರಾಜ ಬಳ್ಳೊಳ್ಳಿ, ಗವಿಸಿದ್ದಪ್ನ ಮಾಸ್ತರು, ಮಹೇಶ್ ಮಿಟ್ಟಲಕೋಡ್, ಬಸವರಾಜ ಸಸಿಮಠ, ದಾನಪ್ಪ ಶೆಟ್ಟರ್, ಅಶೋಕ್ ಸಾಸ್ವಿಹಾಳ, ಗವೀಶ ಸಸಿಮಠ, ಗವಿಸಿದ್ದಪ್ನ ಪಲ್ಲೆದ್, ಕೆ ಮಹೇಶ್, ಕೆ ಬಸವರಾಜ, ಮೈಲಾರಗೌಡ ಗುಡ್ಲಾನೂರು, ಸುರೇಶ್ ಸಿಂಗ್ನಾಳ, ರುದ್ರಮ್ಮ ಅಮರೇಶ ಹಾಸಿನಾಳ ಗಂಗಾವತಿ. ಕೋಮಲ ಕುದುರಿಮೋತಿ, ಶಕುಂತಲಮ್ಮ ಹೊಸಪೇಟೆ, ಪ್ರೊಫೆಸರ್ ಬಸವರಾಜ ಹೊಸಪೇಟೆ, ಶ್ರೀಶೈಲಪ್ಪ ಪಟ್ಟಣಶೆಟ್ಟಿ ಗಂಗಾವತಿ ನಿಜಲಿಂಗಪ್ಪ ಮೆಣಸಗಿ, ಸುವರ್ಣಲತ ಮೆಣಸಗಿ, ಶರಣಪ್ಪ ಸಜ್ಜನ್, ಬೆಂಗಳೂರಿನ ಎಚ್ ಸಿ ಉಮೇಶ್, ಕೃಪಾಶಂಕರ್, ಮೈಸೂರುಜಿಲ್ಲೆಯ ಜಾಲಿಮದ ಅಧ್ಯಕ್ಷರಾದ ಕೆ. ಮಹಾದೇವ್, ಇನ್ನು ಮುಂತಾದ ಕೊಪ್ಪಳ ಜಿಲ್ಲೆಯ ಎಲ್ಲ ಶರಣಸಂಘಟನೆಯ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here