ಗ್ರಾಮ ಪಂಚಾಯತ ಚುನಾವಣೆ: ಮುಗಿದ ಮತದಾನ

0
18

ಕಲಬುರಗಿ: ಜಿಲ್ಲೆಯ ಅವಧಿ ಮುಗಿದ 3 ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಇರುವ 8 ಗ್ರಾಮ ಪಂಚಾಯಿತಿಗಳ ತಲಾ ಒಂದೊಂದು ಸದಸ್ಯ ಸ್ಥಾನಗಳ ಉಪ ಚುನಾವಣೆಯ ಮತದಾನ ಸೋಮವಾರ ನಡೆಯಿತ್ತು.

ಈ ತಿಂಗಳ ಅಂತ್ಯಕ್ಕೆ ಅವಧಿ ಮುಕ್ತಾಯಗೊಳ್ಳಲಿರುವ ಚಿತ್ತಾಪುರ ತಾಲೂಕಿನ ಡೋಣಗಾಂವ ಗ್ರಾಮ ಪಂಚಾಯಿತಿಯ 13 ಸ್ಥಾನಗಳು. ಚಿಂಚೋಳಿ ತಾಲೂಕಿನ ಕರ್ಚಖೇಡ್ ಗ್ರಾಮ ಪಂಚಾಯಿತಿ 13 ಸ್ಥಾನಗಳು ಹಾಗೂ ಗರಗಪಲ್ಲಿ ಗ್ರಾಮ ಪಂಚಾಯಿತಿಯ 16 ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯಿತ್ತು.

Contact Your\'s Advertisement; 9902492681

ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯತಗಳ ಸದಸ್ಯ ಸ್ಥಾನಗಳ ಉಪ ಚುನಾವಣೆಯ ಕಲಬುರಗಿ ತಾಲೂಕಿನ ಕಿರಣಗಿ ಹಾಗೂ ಶ್ರೀನಿವಾಸ ಸರಡಗಿ ಪಂಚಾಯಿತಿಗಳ ತಲಾ ಒಂದೊಂದು ಸ್ಥಾನ. ಅಫಜಲಪೂರ ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯಿತಿಯ ಚಿಣಮಗೇರಾ ಗ್ರಾಮದ ಒಂದು ಸ್ಥಾನ. ಸೇಡಂ ತಾಲೂಕಿನ ಮಳಖೇಡ್ ಗ್ರಾಮ ಪಂಚಾಯಿತಿಯ ನೃಪತುಂಗ ನಗರ, ಮದನಾ ಗ್ರಾಮ ಪಂಚಾಯಿತಿಯ ಜಿಲ್ಲೆಡಪಳ್ಳಿ ಹಾಗೂ ಮುಧೋಳ ಗ್ರಾಮ ಪಂಚಾಯತ ಸೇರಿದಂತೆ 3 ಗ್ರಾಮ ಪಂಚಾಯಿತಿಗಳಿಗೆ ತಲಾ ಒಂದೊಂದು ಸ್ಥಾನ. ಚಿತ್ತಾಪೂರ ತಾಲೂಕಿನ ದಂಡೋತಿ ಪಂಚಾಯಿತಿ ಒಂದು ಸ್ಥಾನ. ಯಡ್ರಾಮಿ ತಾಲೂಕಿನ ಕಾಚಪೂರ ಗ್ರಾಮ ಪಂಚಾಯತನ ಒಂದು ಸ್ಥಾನ ಸೇರಿದಂತೆ ಒಟ್ಟು 8 ಸ್ಥಾನಗಳಿಗೆ ಉಪ ಚುನಾವಣೆಯ ಮತದಾನ ನಡೆಯಿತು.

ಚಿತ್ತಾಪೂರ್ ತಾಲೂಕಿನ ಡೊಂಣಗಾವ ಗ್ರಾಮ ಪಂಚಾಯಿತಿಯ ಒಟ್ಟು 13 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 72.75 ರಷ್ಟು ಮತದಾನವಾಯಿತು. ಚಿಂಚೋಳಿ ತಾಲೂಕಿನ ಕರ್ಚಖೇಡ್ ಗ್ರಾಮ ಪಂಚಾಯಿತಿಯ 13 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 82.37 ರಷ್ಟು ಮತದಾನವಾಯಿತು. ಗರಗಪಲ್ಲಿ ಗ್ರಾಮ ಪಂಚಾಯಿತಿಯ16 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಶೇಕಡಾ 84.17 ರಷ್ಟು ಮತದಾನವಾಯಿತು.

ಖಾಲಿ ಸದಸ್ಯ ಸ್ಥಾನಗಳ ಉಪ ಚುನಾವಣೆಗೆ ನಡೆದ ಮತದಾನದಲ್ಲಿ ಕಲಬುರಗಿ ತಾಲೂಕಿನ ಕಿರಣಗಿ ಯಲ್ಲಿ ಶೇಕಡಾ 56.15 ರಷ್ಟು, ಶ್ರೀನಿವಾಸ ಸರಡಗಿಯಲ್ಲಿ ಶೇಕಡಾ 61.79%. ಅಫಜಲಪೂರ ತಾಲೂಕಿನ ಚೌಡಾಪೂರ ಗ್ರಾಮ ಪಂಚಾಯಿತಿಯ ಚಿಣಮಗೇರಾದಲ್ಲಿ ಶೇಕಡಾ 64.16 ರಷ್ಟು. ಸೇಡಂ ತಾಲೂಕಿನ ಮಳಖೇಡ್ ಗ್ರಾಮ ಪಂಚಾಯಿತಿಯ ನೃಪತುಂಗ ನಗರದಲ್ಲಿ 49.24%, ಮದನಾ ಗ್ರಾಮ ಪಂಚಾಯಿತಿಯ ಜಿಲ್ಲೆಡಪಳ್ಳಿಯಲ್ಲಿ 87.77% ಹಾಗೂ ಮುಧೋಳದಲ್ಲಿ ಶೇಕಡಾ 67.8 ರಷ್ಟು. ಚಿತ್ತಾಪೂರ ತಾಲೂಕಿನ ದಂಡೋತಿಯಲ್ಲಿ ಶೇಕಡಾ 63.57 ರಷ್ಟು. ಯಡ್ರಾಮಿ ತಾಲೂಕಿನ ಕಾಚಪೂರದಲ್ಲಿ ಶೇಕಡಾ 75.09 ರಷ್ಟು ಮತದಾನಯಿತ್ತು.

ಮತದಾನ ನಡೆದ ಚುನಾವಣೆ ಮತ ಎಣಿಕೆಯು ಡಿ.30 ರಂದು ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಲಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here