ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸಿ ಆದರ್ಶಪ್ರಾಯರಾದವರು ಚನ್ನಯ್ಯ ಶರಣರು

0
3

ಶಹಾಬಾದ: ಮಾದಾರ ಚನ್ನಯ್ಯನವರು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸಿ, ಸತ್ಯ ಶುದ್ಧ ಕಾಯಕದಿಂದ ಬದುಕನ್ನು ನಡೆಸುವ ಮೂಲಕ ತಮ್ಮ ಆದರ್ಶಗಳನ್ನು ಮುಂದಿಟ್ಟು ಮಹಾ ಶರಣರಾಗಿದ್ದಾರೆ ಎಂದು ಮಾಜಿ ಸಚಿವ ಹಣಮಂತಪ್ಪ ಆಲ್ಕೊಂಡ ಹೇಳಿದರು.

ಅವರು ನಗರದ ಇಂಡಿಯಾ ಲಾಡ್ಜ್ ಸಭಾಂಗಣದಲ್ಲಿ ಶಿವಶರಣ ಮಾದಾರ ಚನ್ನಯ್ಯನವರ ೯೭೧ನೇ ಜಯಂತೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Contact Your\'s Advertisement; 9902492681

ವೃತ್ತಿಯನ್ನು ಗೌರವದಿಂದ ನಡೆಸಿದ ಚನ್ನಯ್ಯ ಶರಣರು ಕಾಯಕವನ್ನು ಬಹಳ ಗೌರವದಿಂದ ಕಾಣುತ್ತಿದ್ದರು.ಕಲ್ಯಾಣ ಪರಂಪರೆಯಲ್ಲಿ ಬಹಳ ಆದರ್ಶಪ್ರಾಯ ಶರಣರೆಂದರೆ ಮಾದಾರ ಚನ್ನಯ್ಯನವರು. ಅವರ ಆದರ್ಶಗಳನ್ನು ಮುಂದಿಟ್ಟುಕೊಂಡು ಜೀವನ ನಡೆಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು,೧೨ನೇ ಶತಮಾನದಲ್ಲಿ ಶರಣರು ನೀಡಿದ ವಚನಗಳು ಕೇವಲ ವಚನಗಳಾಗಿರದೇ ಅವರ ವಚನಗಳ ಸಂದೇಶ ಬಹಳ ಪ್ರಾಮುಖ್ಯತೆ ಪಡೆದಿವೆ.ಮಾದಾರ ಚನ್ನಯ್ಯ ಶರಣರು ಕಾಯಕದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ.ಅವುಗಳ ಅನುಕರಣೆ ಮಾಡುವ ಮೂಲಕ ಸಮಾಜವನ್ನು ಉತ್ತಮ ಮಾರ್ಗ ಹಾಕುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.

ಮುಖಂಡರಾದ ವಿಜಯಕುಮಾರ ರಾಮಕೃಷ್ಣ ಮಾತನಾಡಿ, ಶರಣರ ಸಾರ್ಥಕ ಬದುಕಿನ ಸೂತ್ರಗಳನ್ನು ಮರೆತಿದ್ದರಿಂದ ನಾವು ಸಂಕಷ್ಟಗಳಿಗೆ ಸಿಲುಕಿದ್ದೆವೆ.ಆಸೆ,ರೋಷ,ದ್ವೇಷ ಮುಂತಾದ ದುರ್ಗುಣ ಕೈಬಿಟ್ಟು ಸಜ್ಜನರ ಸಹವಾಸ ಮಾಡಬೇಕು.ದುರಾಚಾರ ಬಿಡಬೇಕು.ಸದಾಚಾರ ರೂಢಿಸಿಕೊಳ್ಳಬೇಕು.ಆಗ ಮಾತ್ರ ನಿಜವಾದ ಸಂತೃಪ್ತಿ ಬದುಕನ್ನು ಕಾಣಬಹುದು ಎಂದು ಹೇಳಿದರು.

ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ತಾರಫೈಲ್, ಚಂದ್ರಿಕಾ ಪರಮೇಶ್ವರ , ಡಾ.ಜ್ಞಾನಮಿತ್ರ ಬೈರಾಮಡಗಿ ಮಾತನಾಡಿದರು.

ಅಂಬಾರಾಯ ಬೆಳಕೋಟ,ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಶ್ಯಾಮ ನಾಟೀಕಾg,ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ,ನಾಗಪ್ಪ.ಎಸ್.ಬೆಳಮಗಿ, ಅಣವೀರ ಇಂಗಿನಶೆಟ್ಟಿ,ರಾಜ ಮಹ್ಮದ್ ರಾಜಾ,ಕನಕಪ್ಪ ದಂಡಗುಲಕರ್,ನಿಂಗಣ್ಣ ಹುಳಗೋಳಕರ್, ನಗರಸಭೆಯ ಸದಸ್ಯೆ ಪೀರಮ್ಮ ಪಗಲಾಪೂರ,ಅನೀಲ ಬೆಳಕೇರಿ, ಅಮೃತ ಸಾಗರ, ಅಯ್ಯಪ್ಪ ದೊಡ್ಡಮನಿ,ಶಿವರಾಜ ಕೋರೆ, ಶರಬಣ್ಣ ಸನ್ನತಿ, ಹಾಜಪ್ಪ ಬೆಳಾರ, ಅಮರ ಕೋರೆ,ಸಂಜಯ ಕೋರೆ, ಕಿಶನನಾಯಕ, ರಾಜೇಶ ಯನಗುಂಟಿಕರ್ ಇತರರು ಇದ್ದರು.

ರವಿ ಬೆಳಮಗಿ ನಿರೂಪಿಸಿದರು, ಶರಣು ಪಗಲಾಪೂರ ಸ್ವಾಗತಿಸಿದರು, ಭಕ್ತ ಪ್ರಹ್ಲಾದ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here