ಹೊನಗುಂಟಾ ಗ್ರಾಮಕ್ಕೆ ರಸ್ತೆ ನಿರ್ಮಾಣ ಮಾಡಲು ಆಗ್ರಹಿಸಿ ಪ್ರತಿಭಟನೆ

0
25

ಶಹಾಬಾದ:ತಾಲೂಕಿನಿಂದ ಹೊನಗುಂಟ ಗ್ರಾಮಕ್ಕೆ ಹೋಗುವ ರಸ್ತೆಯ ಹದಗೆಟ್ಟಿದ್ದು,ಅದನ್ನು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸೋಮವಾರ ಎಐಡಿವೈಓ ಯುವಜನ ಸಂಘಟನೆ ಹಾಗೂ ರೈತ ಕೃಷಿಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟಿಸಿ ಉಪತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ನಿತ್ಯ ಹೊನಗುಂಟಾ ಹಾಗೂ ವಡ್ಡರ ವಾಡಿ ಗ್ರಾಮಗಳಿಂದ ದಿನನಿತ್ಯ ಶಹಾಬಾದ ನಗರಕ್ಕೆ ನೂರಾರು ಸಂಖ್ಯೆಯಲ್ಲಿ ಸಾರ್ವಾಜನಿಕರು ಮತ್ತು ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಆದರೆ ರಸ್ತೆಯು ಸಂರ್ಪೂಣ ಹದಗೆಟ್ಟಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹದಗೆಟ್ಟ ರಸ್ತೆಗಳಲ್ಲಿ ವಾಹನ ಮುಂದೆ ಹೋದಾಗ ಧೂಳಿನಿಂದ ಬಹಳಷ್ಟು ತೊಂದರೆ ಅನುಭವಿಸಬೇಕಾಗಿದೆ. ಪ್ರಯಾಣಿಕರಿಗೆ ತೊಂದರೆ ಅಗುತ್ತಿರುವುದಲ್ಲದೇ ಅಪಘಾತಗಳು ಹೆಚ್ಚು ಆಗುತ್ತಿವೆ. ಹಾಗಾಗಿ ಕೂಡಲೇ ಗುಣಮಟ್ಟದ ರಸ್ತೆಯನ್ನು ನಿರ್ಮಿಸಬೇಕು. ಹೊನಗುಂಟ ಹಾಗು ವಡ್ಡರ ವಾಡಿ ಗ್ರಾಮಗಳಲ್ಲಿ ಶೌಚಾಲಯಗಳ ಸಮಸ್ಯೆಯಿರುವುದು ಶೌಚಾಲಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಜಿಲ್ಲಾ ಉಪಾದ್ಯಾಕ್ಷರಾದ ಸಿದ್ದು ಚೌದ್ರಿ ಮಾತನಾಡಿ, ಹದಗೆಟ್ಟ ರಸ್ತೆಯಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರವು ಜನಪರವಾದ ಯೋಜನೆಗಳನ್ನು ತರದೇ, ಇತ್ತ ಸಮಸ್ಯೆಗಳನ್ನು ಬಗೆಹರಿಸದೇ ಕಾಲಹರಣ ಮಾಡುತ್ತಿದೆ.ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವುದು ಸರಕಾರದ ಮೂಲ ಕರ್ತವ್ಯ.ಆದರೆ ಇವೆಲ್ಲವನ್ನೂ ಸರಕಾರ ಮರೆತು ಹೋಗಿದೆ.ಕೂಡಲೇ ಹೊಸ ರಸ್ತೆ ನಿರ್ಮಾಣ ಮಾಡುವುದರ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಕಾರ್ಯದರ್ಶಿಗಳಾದ ರಮೇಶ ದೇವಕರ್ ಹಾಗೂ ರಾಜೇಂದ್ರ ಅತನೂರ ಮಾತನಾಡಿದರು. ರಘು ಪವಾರ, ದೇವರಾಜ, ತಿರುಪತಿ, ಶ್ರೀಶೈಲ ಬುರ್ಲಿ, ಮೌನೇಶ ರಾಜವಾಳ, ಸಿದ್ದು, ಅಂಬ್ರೇಶ ಪ್ರವೀಣ, ತೇಜಶ.ಆರ್.ಇಂಬ್ರಾಹಿಮ್‌ಪುರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here