ಕ್ರಿಮಿನಲ್ ಮೊಕುದ್ದುಮೆ ಹಾಕಬೇಕಾಗುತ್ತದೆ: ಕಲಬುರಗಿ ಸಂಸದರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

0
19

ಕಲಬುರಗಿ: ಬಂಜಾರ ಸಮುದಾಯವನ್ನು ಎಸ್.ಟಿ. ಪಟ್ಟಿಗೆ ಸೇರಿಸುವಂತೆ ಪ್ರಧಾನಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಸಮುದಾಯದ ಆರಾಧ್ಯದೈವ ರಾಮರಾವ್ ಮಹಾರಾಜ್ ಅವರ ಸಹಿ ನಕಲಿ ಎಂದು ಕಲಬುರಗಿ ಎಂ.ಪಿ. ಉಮೇಶ್ ಜಾಧವ್ ಹೇಳಿದ್ದಾರೆ ಅದನ್ನು ಯಾರು ಮಾಡಿದರು ? ಯಾಕೆ ಮಾಡಿದರು ? ಎನ್ನುವುದನ್ನು ಬಹಿರಂಗವಾಗಿ ಹೇಳದಿದ್ದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದುಮೆ ಹೂಡಬೇಕಾಗುತ್ತದೆ ಎಂದು ಮಾಜಿ ಸಚಿವರಾದ, ಶಾಸಕರಾದ ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.

ಕಲಬುರಗಿ ಯಲ್ಲಿ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ರಾಮರಾಜ್ ಮಹರಾಜರ ಸಹಿ ನಕಲಿ ಎಂದು ಗೊತ್ತದ ಮೇಲೆ ಜಾಧವ ಯಾಕೆ ಸುಮ್ಮನೆ ಕುಳಿತಿದ್ದರು, ಅವಾಗಲೇ ಹೇಳಬಹುದಿತ್ತು. ನಕಲಿ ಸಹಿ ಎಂದು ಗೊತ್ತದ ಮೇಲೂ ಪ್ರಧಾನಿಗೆ ಅದೇ ಪತ್ರ ಯಾಕೆ ಕೊಟ್ಟರು ? ಅವರನ್ನೇ ವಂಚಿಸಲು ಹೋದರಾ? ಇದು ಮಹಾರಾಜ ಒಳ್ಳೆಯತನ ದುರಪಯೋಗ ಮಾಡಿದಂತೆ ಅಲ್ಲವೇ? ಈ ಕುರಿತು ನಾನು ಪಂಚ ಪಶ್ನೆ ಕೇಳಿದ್ದೆ ಅದಕ್ಕೆ ಇನ್ನೂ ಉತ್ತರ ಬಂದಿಲ್ಲ. ಜಾಧವ ಅವರು ನಕಲಿ ಸಹಿ ಯಾರು ಮಾಡಿದ್ದು? ಯಾಕೆ ಮಾಡಿದರು ? ಉದ್ದೇಶವೇನು ಎನ್ನುವುದ ಬಗ್ಗೆ ಹೊರಗಡೆ ಬಂದು ಸತ್ಯ ಹೇಳದೇ ಹೋದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದುಮೆ ದಾಖಲಿಸಬೇಕಾಗುತ್ತದೆ ಎಂದು ಪುನರುಚ್ಚರಿಸಿದರು.

Contact Your\'s Advertisement; 9902492681

ಎಂ.ಪಿ. ಚುನಾವಣೆ ನಂತರ ಪ್ರಿಯಾಂಕ್ ಹತಾಶೆರಾಗಿದ್ದಾರೆ ಎಂದು ಉಮೇಶ್ ಜಾಧವ ಹೇಳುತ್ತಾರೆ. ಅದು ಸರಿ ಚುನಾವಣೆ ಗೆದ್ದ ಮೇಲೆ ಅವರಿಗೆ ಹುಚ್ಚು ಹಿಡಿದಿದೆಯಾ.?” ಪ್ರಿಯಾಂಕ್ ಗೆ ಬ್ಯಾನರ್ ಇದೆ ಎನ್ನುತ್ತಾರೆ. ನಾನು ಖರ್ಗೆ ಅವರ ಮಗ ಎನ್ನುವ ಹೆಮ್ಮೆ ಇದೆ. ನೀವೂ ಕೂಡಾ ಅದೇ ಬ್ಯಾನರ್ ನಿಂದಲೇ ಮೊಟ್ಟಮೊದಲ ಬಾರಿಗೆ ಚುನಾವಣೆ ಗೆದ್ದಿರುವುದು ಇದು ನೆನಪಿರಲಿ ” ಎಂದು ಕುಟುಕಿದರು.

ಚಿತ್ತಾಪುರ ತಾಲೂಕಿನ ಬೆಳಗೇರಾ ಗ್ರಾಮದ ಭೀಮನಳ್ಳಿ ಪಂಚಾಯತಿ ಅಡಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಮಾಡಲಾರದ ಕೆಲಸಕ್ಕೆ ಬಿಲ್ ಪಾಸು ಮಾಡುವಂತೆ ಪಿಡಿಓ ಎಂಪಿಯವರು ಒತ್ತಾಯಿಸಿದ್ದಾರೆ ಇದು ಅಧಿಕಾರದ ದುರಪಯೋಗವಲ್ಲವೇ?
ಮಲ್ಲಿಕಾರ್ಜುನ ಖರ್ಗೆ ಅವರು ಎಂಪಿ ಇದ್ದಾಗ SCP TSP ಅಡಿ ಕೆಬಿಜೆಎನ್ಎಲ್ ಅಡಿಯಲ್ಲಿ 7 ಕಾಮಗಾರಿಗಳನ್ನು ತಂದಿದ್ದರು. ಅವುಗಳಲ್ಲಿ ರೂ 66.22 ಲಕ್ಷದಿಂದ ರೂ 1.79 ಕೋಟಿಯವರೆ ಇವೆ. ಟೆಂಡರ್ ಕರೆದು ತಾಂತ್ರಿಕ ಬಿಡ್ ತೆರೆಯಲು ಜಾಧವ ಅವರು ತಡೆಹಿಡಿದು ಮತ್ತೊಂದು ಬಾರಿ ಟೆಂಡರ್ ಕರೆಯುವಂತೆ ಮೌಖಿಕ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ಅಧಿಕೃತವಾಗಿ ಬರೆದ ಪತ್ರದಲ್ಲಿ ಹೇಳಿದ್ದಾರೆ. ಜಾಧವ ಅವರು ಯಾಕೆ ಈ ರೀತಿ ಅಡ್ಡಿ ಮಾಡುತ್ತಾರೆ? ಉದ್ದೇಶವೇನು ? ಎಂದು ಪ್ರಶ್ನಿಸಿದರು.

ಕೆಕೆಆರ್ ಡಿಬಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕರು, ಸಿಎಂ ಅವರು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಂದರ್ಭದಲ್ಲಿ ನೀಡಿದ ಭರವಸೆಗಳು ಈಡೇರಿಲ್ಲ. ರೂ 3000 ಕೋಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಅದೂ ಕೂಡ ಬಿಡುಗಡೆಯಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆಯ ಹಂತದ ಕಾಮಗಾರಿ ಬಗ್ಗೆ ಹೇಳಿದ್ದರು, 1000 ಎಕರೆ ಪ್ರದೇಶದಲ್ಲಿ ಕಲಬುರಗಿ ಯಲ್ಲಿ ಟೆಕ್ಸಟೈಲ್ ಪಾರ್ಕ್ ಸ್ಥಾಪಿಸುವುದಾಗಿ ಹೇಳಿದ್ದರು ಅದೂ ಕೂಡಾ ರದ್ದಾಗಿದೆ. ಕಲಬುರಗಿ ಯಲ್ಲಿ ಇನ್ವೆಸ್ಟ್ಮಮೆಂಟ್ ಮೀಟ್ ಮಾಡುವುದಾಗಿ ಹೇಳಿದ್ದರು ಅದೂ ಕೂಡಾ ನಡೆದಿಲ್ಲ.

ಕೆಕೆಆರ್ ಡಿಬಿ ಯಲ್ಲಿ 2019- 20 ರಲ್ಲಿ ಅಪ್ರೂವ್ ಆಗಿರುವ ಕೆಲಸಗಳು 4049 ಅವುಗಳ ಪೈಕಿ ಮುಗಿದಿದ್ದು 77% ಹಾಗೂ ಅಪ್ರೂವ್ ಆದ ಮೊತ್ತ ರೂ 1500 ಕೋಟಿ ಅದರಲ್ಲಿ ಬಿಡುಗಡೆಯಾಗಿದ್ದು ಕೇವಲ 1125 ಕೋಟಿ ಮಾತ್ರ. 2020-21 ರಲ್ಲಿ ಅಪ್ರೂವ್ ಆದ ಕಾಮಗಾರಿಗಳು 2234 ಅವುಗಳಲ್ಲಿ ಮುಗಿದಿದ್ದು ಕೇವಲ 16% ಅಪ್ರೂವ್ ಆದ ಮೊತ್ತ 1131 ಕೋಟಿ ಆದರೆ ಬಂದಿದ್ದು ಕೇವಲ 1000 ಕೋಟಿ ಹಾಗೂ 2021-22 ರಲ್ಲಿ ಅಪ್ರೂವ್ ಆದ ಕಾಮಗಾರಿಗಳು 1949 ಇದರಲ್ಲಿ ಪ್ರಗತಿ ಆಗಿದ್ದು ಕೇವಲ 1 % ಮಾತ್ರ ಅಪ್ರೂವ್ ಆದ ಮೊತ್ತ ರೂ 1492 ಆದರೆ ಬಿಡುಗಡೆಯಾಗಿದ್ದು 415 ಕೋಟಿ ಬಿಡುಗಡೆಯಾಗಿದ್ದು ಕೋಟಿ.

ಹೀಗೆ 2009-20, 2020-21 ಹಾಗೂ 2021-22 ಮೂರು ವರ್ಷದಲ್ಲಿ ಸಾಲಿನಲ್ಲಿ ಅಪ್ರೂವ್ ಆಗಿದ್ದುದು ರೂ 4124.83 ಕೋಟಿ ಆದರೆ ಬಿಡುಗಡೆಯಾಗಿದ್ದು ರೂ 2572.02 ಕೋಟಿ, ಖರ್ಚಾಗಿದ್ದು 2880.48 ಕೋಟಿ. ಇದೂವರೆಗೆ ರೂ 1552.81 ಕೋಟಿ ಬಾಕಿ ಇದೆ ಹಾಗೂ ಹಿಂದಿನ ಬಾಕಿ ರೂ 369 ಕೋಟಿ ಸೇರಿ ಒಟ್ಟು ರೂ 1921.81 ಕೋಟಿ ಆಗುತ್ತದೆ. ಹಾಗಾಗಿ ಬಾಕಿ ರೂ 369 ಕೋಟಿ ಜೊತೆಗೆ ಹೆಚ್ಚುವರಿ ರೂ 500 ಕೋಟಿ ಹಾಗೂ ವಾರ್ಷಿಕ ರೂ 2421.81 ಕೊಟ್ಟರೆ ಜಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಗಿಸಬಹುದು. ಆದರೆ ಯುಸಿ ಕೊಟ್ಟರೆ ಮಾತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಯುಸಿ ಕೊಡಿಸುವ ಕೆಲಸ ಸರ್ಕಾರದು ತಾನೆ ? ಎಂದು ಪ್ರಶ್ನಿಸಿದರು.

ಕೆಕೆಆರ್ ಡಿಬಿ ಅನುದಾನದಲ್ಲಿ ರೂ 300 ಕೋಟಿಯನ್ನ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಕಾನೂನುಬಾಹಿರವಾಗಿ ಬಿಡುಗಡೆ ಮಾಡಲಾಗಿದೆ. ಸದರಿ ಅನುದಾನ ಯಾರಿಗೆ ಹೇಗೆ ಬಿಡುಗಡೆ ಮಾಡಲಾಗುತ್ತದೆ? ಫಲಾನುಭವಿಗಳು ಯಾರು ? ಎನ್ನುವುದೇ ಟಾಪ್ ಸಿಕ್ರೇಟ್. ಈ ಕುರಿತು ತನಿಖೆಯಾಗಬೇಕು ಎಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಮೇಕೆದಾಟು ಯೋಜನೆ ಕುರಿತಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು ನಾವು ಯಾವಾಗ ಹೇಗೆ ಪಾದಯಾತ್ರೆ ಮಾಡಬೇಕು ಎನ್ನುವುದನ್ನ ಹೇಳಲು ಜೆಡಿಎಸ್ ನವರು ಯಾರು ? ಜನರ ಕಾಳಜಿ ಇದ್ದರೆ ಅವರು ನಮ್ಮೊಂದಿಗೆ ಪಾದಯಾತ್ರೆ ಯಲ್ಲಿ ಭಾಗವಹಿಸಲಿ ಎಂದು ಆವ್ಹಾನ ನೀಡಿದರು.

ಹೋಟೇಲ್ ಮಾಲೀಕರು ನೈಟ್ ಕರ್ಫ್ಯೂನಿಂದ ಆತಂಕಕ್ಕೊಳಗಾಗಿದ್ದಾರೆ. ಹಾಗಾಗಿ ಸರ್ಕಾರ ವೈರಸ್ ಹೇಗೆ ಏರಿಕೆಯಾಗಿದೆ ಈ ಬಗ್ಗೆ ಅಂಕಿ ಅಂಶ ನೀಡಲಿ. ಓಮಿಕ್ರೋನ್ ಟೆಸ್ಟಿಂಗ್ ಮಾಡಲು ಜೈನೋಂ ಟೆಸ್ಟಿಂಗ್ ಸೆಂಟರ್ ಯಾಕೆ ತೆಗೆದಿಲ್ಲ ? ಎಂದು ಪ್ರಶ್ನಿಸಿದರು. ಸಿಎಂ ಬದಲಾವಣೆ ಕುರಿತಂತೆ ಕಾಂಗ್ರೆಸ್ನ ನಿಲುವು ಏನು ಇಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್ ಅವರು ಚಿಂಚೋಳಿ ತಾಲೂಕಿನಲ್ಲಿ ರಸ್ತೆ ನಿರ್ಮಾಣದಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದೆ. ಡಾಂಬರು ಇರುವ ರಸ್ತೆಯ ಮೇಲೆ ಮುರಮ್ ಹಾಕಿರುವುದಾಗಿ ಹೇಳಿ ಕೋಟಿಗಟ್ಟಲೇ ಲೂಟಿ ಮಾಡಲಾಗಿದೆ ಉದಾಹರಣೆಗೆ ಐನಾಪುರದಿಂದ ಬಿಕ್ಕುನಾಯಕ ತಾಂಡವರೆಗೆ ಡಾಂಬರು ಇರುವ ರಸ್ತೆಯ ಮೇಲೆ ಮುರುಮ್ ಹಾಕಿರುವುದಾಗಿ ರೂ 3.50 ಕೋಟಿ ಹಣ ಎತ್ತಲಾಗಿದೆ ಎಂದು ಆರೋಪಿಸಿ ಈ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತದೆ.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಜಗದೇವ ಗುತ್ತೇದಾರ ಸೇರಿದಂತೆ ಮತ್ತಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here