ಬಸವಣ್ಣನವರು ಕೂಡಲ ಸಂಗಮದೇವ ವಚನಾಂಕಿತಕ್ಕೆ ಎಲ್ಲರೂ ಶರಣೆ೦ಬುವೇ: ಪ್ಯಾಟಿ

0
15

ಕಲಬುರಗಿ: ಸಮಾಜದ ಸಮಾನತೆಯ ಹರಿಕಾರ ಯುಗಪುರುಷ ಬಸವಣ್ಣನವರ ಮೂಲ ಅಂಕಿತನಾಮವಾದ “ಕೂಡಲಸಂಗಮದೇವ” ಇದ್ದುದನ್ನು ಈ ಹಿಂದೆ ಬಸವಧರ್ಮಪೀಠಾಧ್ಯಕ್ಷೆ ಲಿಂಗೈಕ್ಯ ಮಾತೆ ಮಹಾದೇವಿಯವರು ತಮ್ಮ ವಚನ ದೀಪ್ತಿ ಗ್ರಂಥದಲ್ಲಿ ಕೂಡಲ ಸಂಗಮದೇವ ಬದಲಿಸಿ ಲಿಂಗದೇವ ಎಂದು ಉಲ್ಲೇಖಿಸಿದ ರಿಂದ ನಾಡಿನ ಜನತೆಯಲ್ಲಿ ಗೊಂದಲ ಉಂಟಾಗಿ ನ್ಯಾಯಾಲಯದಲ್ಲಿ ಚರ್ಚೆಯಾಗಿ ರಾಜ್ಯ ಸರ್ಕಾರದ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದ್ದರಿಂದ ಪ್ರಸ್ತುತ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಕರುಣಾಮಯಿ ಮಾತೆ ಗಂಗಾದೇವಿ ಬಸವಣ್ಣನವರ ನಿಜವಾದ ಅಂಕಿತನಾಮ ಕೂಡಲ ಸಂಗಮದೇವ ಎಂಬ ವಚನಾಂಕಿತವನ್ನು ಬಳಸಬೇಕು ಎಂದು ಹೇಳುವ ಮೂಲಕ ಕರ್ನಾಟಕ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಿಸಿ ಈ ಮಹತ್ವ ವಿಷಯವಾದುದರಿಂದ ಇನ್ನುಮುಂದೆ ಕೂಡಲಸಂಗಮದೇವ ಎಂಬ ವಚನಾಂಕಿತ ವಾಗಿ ಬಳಸಲಿದ್ದೇವೆ ಎಂದು ಜಗದ್ಗುರು ಮಾತೆ ಗಂಗಾದೇವಿಯವರಿಗೆ ಪ್ರಕಟಣೆ ಗೊಳಿಸಿದ್ದಕ್ಕಾಗಿ ಕೋಟಿಕೋಟಿ ನಮನದೊಂದಿಗೆ ಹಿರಿಯ ಚಿಂತಕ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಾಮರಾವ ಪ್ಯಾಟಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here