ತಾಳ್ಮೆ, ಸಹನೆ ಮುಖ್ಯ: ಪ್ರೊ. ದಯಾನಂದ ಅಗಸರ

0
11

ಕಲಬುರಗಿ: ನಾವು ಎಲ್ಲಿಯೇ ಹುಟ್ಟಲಿ, ಹೇಗೆಯೇ ಬೆಳೆಯಲ್ಲಿ ನಿರ್ಧಿಷ್ಠ ಗುರಿ ಮುಟ್ಟಬೇಕಾದರೆ ತಾಳ್ಮೆ, ಸಹನೆ ಬಹಳ ಮುಖ್ಯವೆಂದು ಪ್ರೊ. ದಯಾನಂದ ಅಗಸರ ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಗಾಂಧಿ ಸಭಾಂಗಣದಲ್ಲಿ ಜರುಗಿದ ವಯೋನಿವೃತ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸ್ವತಃ ನಾನು ಪ್ರಾಧ್ಯಾಪಕ ಹುದ್ದೆಯಿಂದ ನೀವೃತ್ತಿ ಹೆಂದುತ್ತಿದ್ದು ನನ್ನನ್ನು ಬೆಳೆಸಿದ ಅಧ್ಯಯನ ಸಂಸ್ಥೆ, ವಿಶ್ವವಿದ್ಯಾಲಯಕ್ಕೆ ನಾನು ಪ್ರಥಮದಲ್ಲಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ತದನಂತರದಲ್ಲಿ ನನ್ನ ಹೆತ್ತವರನ್ನು, ಪೋಷಿಶಿದವರನ್ನು ಸ್ಮರಿಸಬೇಕಾದ ವಿಶೇಷ ಸಂದರ್ಭ ಇದಾಗಿದೆ ಎಂದು ಹೇಳುತ್ತಲೇ ಸಾಮಾಜಿಕ ಹರಿಕಾರರಾದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರು ನಮ್ಮಂತಹ ತಳ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಶ್ರಮಿಸಿದ್ದಾರೆ.

ಅವರಿಗೂ ನಾವು ಕೃತಜ್ಞರಾಗಿರಬೇಕು ಎಂದು ಹೇಳುತ್ತ ಗದ್ಗದಿತರಾದರು. ಕಲ್ಲು ಮೂರ್ತಿಯಾಗಿ ಸಿದ್ದವಾಗುವಲ್ಲಿ ಉಳಿಪೆಟ್ಟು ಹೇಗೆ ಬೇಕೊ, ಹಾಗೆ ನಮ್ಮಂತವರು ಬೆಳೆಯಬೇಕಾದರೆ ಕಷ್ಟ ಸಹಿಷ್ಣುಗಳಾಗಲೇಬೇಕು ಅಂದಾಗ ಮಾತ್ರ ಬಡತನ, ಅಸಮಾನತೆ ಮೆಟ್ಟಿನಿಂತು ಸ್ವಾಭಿಮಾನದಿಂದ ಬದುಕಬಹುದು. ತಳ ಸಮುದಾಯದ ಸಾರ್ಥಕತೆ ಇರುವುದೇ ಮಹಾನ್ ವ್ಯಕ್ತಿಗಳ ಕಂಡ ಕನಸು ನನಸು ಮಾಡುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನೀವೃತ್ತಿ ಹೊಂದಲಿರುವ ಪ್ರೊ. ಪಿ.ವ್ಹಿ. ಹುನಗುಂದ, ಬಸವರಾಜ ಚೌರಿಯವರನ್ನು ಸನ್ಮಾನಿಸಲಾಯಿತು. ನಿರ್ಮಲಾ ದಯಾನಂದ ಅಗಸರ, ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸೋನಾರ ನಂದಪ್ಪ, ವಿತ್ತಾಧಿಕಾರಿ ಪ್ರೊ. ಬಿ. ವಿಜಯ  ವೇದಿಕೆ ಮೇಲಿದ್ದರು.

ಕಾರ್ಯಕ್ರಮದಲ್ಲಿ ಗು.ವಿ. ಸ್ನಾತಕೋತ್ತರ ಶಿಕ್ಷಕರ ಸಂಘದ ಅಧ್ಯಕ್ಷರಾದ ಡಾ. ಜಿ. ಶ್ರೀರಾಮುಲು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆಯವರು, ಬಿ.ಎಂ. ರುದ್ರವಾಡಿಯವರು ನಿವೃತ್ತರಾಗಲಿರುವವರ ಮಾತಾಡಿದರು ಕಾರ್ಯಕ್ರಮವನ್ನು ಪ್ರಕಾಶ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here