ಹೃದಯವಂತ ಮನಸ್ಸುಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ: ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ

0
18

ಕಲಬುರಗಿ: ಜಗತ್ತಿನಲ್ಲಿಯೇ ಉತ್ತಮ ರಾಷ್ಟ್ರ ಕಟ್ಟುವುದು  ವಿದ್ಯಾರ್ಥಿ ಯುವಜನರ ಕೈಯಲ್ಲಿದೆ, ವಿದ್ಯಾವಂತರಿಗಿಂತ ಹೃದಯವಂತ ಮನಸ್ಸುಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವೆಂದು  ಹಿರಿಯ ಸಾಹಿತಿಗಳಾದ ಡಾ. ಸ್ವಾಮಿರಾವ ಕುಲಕರ್ಣಿ ಹೇಳಿದರು.

ಶನಿವಾರ ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ ದಶಮಾನೋತ್ಸವ ಸಮಾರಂಭದ ನಿಮಿತ್ಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ವಿಶೇಷ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತ ರೈತನು ಉತ್ತಮ ಸಮಯದಲ್ಲಿ ಬೀಜ ಬಿತ್ತಿ ಉತ್ತಮ ಫಸಲು ಪಡೆಯುವ೦ತೆ, ವಿದ್ಯಾರ್ಥಿಗಳು ಕೂಡ ನಿರ್ದಿಷ್ಟ ಗುರಿಯೊಂದಿಗೆ ನಿರಂತರ  ಪ್ರಯತ್ನ ಮಾಡಿದಾಗ ಮಾತ್ರ ಸಾಧನೆಯ ಶಿಖರ ವೇರುತ್ತಾನೆ. ಸಾಧನೆ ಎನ್ನುವುದು ಸೋಮಾರಿಗಳ ಸೊತ್ತಲ್ಲ, ಅದು ಉತ್ತಮ ಪರಿಶ್ರಮವಾದಿಗಳ ಸ್ವತ್ತಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

Contact Your\'s Advertisement; 9902492681

ತರಬೇತಿ ಕೇಂದ್ರದ ಮುಖ್ಯಸ್ಥರಾದ ಅಸ್ಲಾಂ ಶೇಖ್ ಮಾತನಾಡುತ್ತಾ ಮಸೀದಿ, ಮಂದಿರಗಳಲ್ಲಿ ದೇವರು ಇರದೆ ಯಾರು ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಾರೆ ಅಂಥವರಲ್ಲಿ ದೇವರಿರುತ್ತಾನೆ.ನಾವು ಕೂಡ ನಿಸ್ವಾರ್ಥದಿಂದ ಸಮಾಜಸೇವೆ ಮಾಡುತ್ತ  ಸಮಾಜದ ಋಣ ತೀರಿಸೋಣ ಎಂದು ಹೇಳಿದರು.

ಜನಪರ ಹೋರಾಟಗಾರ  ನ್ಯಾಯವಾದಿ ಹಣಮಂತರಾಯ ಎಸ. ಅಟ್ಟೂರ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ  ಶಾರದಾ ವಿವೇಕ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಹಣಮಂತರಾಯ ಗುಡ್ಡೆವಾಡಿ, ಮಿಲೇನಿಯಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್ ಕೆ ಕುಂಬಾರ, ರಘುನಂದನ್ ಕುಲಕರ್ಣಿ  ಆಗಮಿಸಿದರು.

ವಿವಿಧ ಕ್ಷೇತ್ರದಲಿೢ ಸೇವೆಗೈಯುತ್ತಿರುವ ಶಾಂತೇಶ ಎಳಿಮಲಿ, ಪರಮೇಶ್ವರ ಎಸ್ ವಡ್ಡಳ್ಳಿ, ಅಭಿಷೇಕ ಎಸ.ತಾರಾಪೂರ,  ಮಂಜುಳಾ ಬಿ. ಅಕ್ಕಿ, ಭಾಗ್ಯ ಲಕ್ಷ್ಮಿ ಎಸ್. ಬೂಸಾ, ಶ್ರುತಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಹೊಸ ವರ್ಷಾಚರಣೆ ನಿಮಿತ್ಯ  ಕಲ್ಯಾಣ ಕರ್ನಾಟಕ ಭಾಗದ ಖ್ಯಾತ ಕಲಾವಿದರಾದ ಶ್ರವಣಕುಮಾರ ಮಠ, ರಾಜು ಹೆಬ್ಬಾಳ, ಮಹೇಶ ತೆಲೆಕುಣಿ, ಹಾಗೂ ವಿದ್ಯಾರ್ಥಿಗಳಿಂದ  ಹಾಸ್ಯ, ರಸಮಂಜರಿ ಕಾರ್ಯಕ್ರಮ ನಡೆಯಿತು. ರಂಜಿತಾ ಶ್ರೀಚಂದ, ಸುಲ್ತಾನಾ ಯಾದಗಿರಿ, ಶಿಲ್ಪಾ ಬೇಡರ, ಅಶ್ವಿನಿ ಆಚಾರ್ಯ, ತ್ರಿವೇಣಿ ರಾಜರಕರ, ಸೇರಿದಂತೆ ಹಲವಾರು ಜನ ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here