ನಾಡಿನ ಸಾಹಿತ್ಯ ಕ್ಷೇತ್ರದ ಸಾಂಸ್ಕೃತಿಕ ರಾಯಭಾರಿ ಕುವೆಂಪು: ಇಂದು ಚನ್ನೂರ

0
16

ಶಹಾಬಾದ: ನಾಡಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಈ ನಾಡಿನ ಸಾಂಸ್ಕೃತಿಕ ರಾಯಭಾರಿ ಕುವೆಂಪು ಎಂದು ಉಪನ್ಯಾಸಕಿ ಇಂದು ಚನ್ನೂರ ಹೇಳಿದರು.

ಅವರು ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾದ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಈ ನಾಡಿನ ಸಾಹಿತ್ಯ ಕ್ಷೇತ್ರದ ಶಾಶ್ವತ ನಾಯಕ ಕುವೆಂಪು ಎಂಬ ಸಂಗತಿಯನ್ನು ಕನ್ನಡ ಮನಸ್ಸುಗಳು ಅಂಗೀಕರಿಸಿದ್ದು ಬೇರೆ ಯಾವ ಸಾಹಿತಿಗೂ ಸಿಗದ ಗೌರವ ಕುವೆಂಪು ಅವರಿಗೆ ಶ್ರೀ ಸಾಮಾನ್ಯರಿಂದ ಸಿಕ್ಕಿದೆ.ಕಾರಣ ಅವರು ಕರ್ನಾಟಕ ರತ್ನ , ರಾಷ್ಟ್ರ ಕವಿ ಸೇರಿದಂತೆ ಅನೇಕ ಬಿರುದುಗಳನ್ನು ಪಡೆದಿರುವುದಕ್ಕೆ ಅಲ್ಲ. ಅವರು ತಮ್ಮ ಸಾಹಿತ್ಯದಲ್ಲಿ ಹೃದಯವಂತಿಕೆ, ವಿಶಾಲವಾದ ಮನೋಭಾವನೆ, ಮಾನವೀಯ ಮೌಲ್ಯಗಳನ್ನು ರಚಿಸಿದಕ್ಕೆ. ಅವರು ತಮ್ಮ ಅನಿಕೇತನ ಕವನದಲ್ಲಿ ವಿಶ್ವಮಾನವ ತತ್ವವನ್ನು ಹೇಳುವುದರ ಮೂಲಕ ಎಲ್ಲರ ಹೃದಯದಲ್ಲಿ ವಿರಾಜಮಾನರಾಗಿ ಉಳಿದಿದ್ದಾರೆ.

ಅವರ ಕವಿತೆಯ ತಿರುಳನ್ನು ತಿಳಿದುಕೊಂಡರೆ ನಮ್ಮ ನಿಮ್ಮ ಮುಂದೆ ಮತ್ತೊಬ್ಬ ಬುದ್ಧ, ಅಂಬೇಡ್ಕರ್, ಬಸವಣ್ಣನವರನ್ನು ಕಾಣಬಹುದು. ವಿಶ್ವಮಾನವನಾಗಲು ಕುವೆಂಪು ಅವರು ಹೇಳಿದಂತೆ ಧರ್ಮ, ಜಾತಿ ಸಂಕೋಲೆಗಳ ಬಂಧನದಿಂದ ಮುಕ್ತರಾಗಿ ನನ್ನದು ಎಂಬ ಹೃದಯ ವೈಶ್ಯಾಲತೆಯ ಮನೋಭಾವನೆ ಬಂದಾಗ ಮಾತ್ರ ವಿಶ್ವಮಾನವರಾಗಲು ಸಾಧ್ಯ.ಅದಕ್ಕಾಗಿ ಕುವೆಂಪು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಅಗತ್ಯತೆ ಎಂದಿಗಿಂತಲೂ ಇಂದು ಅಗತ್ಯವಾಗಿದೆ ಎಂದರು.

ಉಪನ್ಯಾಸಕಿ ಸೋನಾಬಾಯಿ ರಾಠೋಡ ಮಾತನಾಡಿ, ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ, ದಾರ್ಶನಿಕರು ಕನ್ನಡ ನಾಡಿನಲ್ಲಿ ಬೆರಳಣಿಯಷ್ಟೇ. ಈ ನಾಡಿನ ನೊಂದ ವರ್ಗದ ದನಿಯಾಗಿ ರೈತರ ಪರವಾಗಿ ದಿಟ್ಟದನಿ ಎತ್ತಿದ ಕುವೆಂಪು ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ವಿಜಯ ಕಂಪ್ಯೂಟರ್ ನಿರ್ದೇಶಕ ವಾಸುದೇವ ಚವ್ಹಾಣ್ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.  ಶಿಕ್ಷಕಿ ರೇಷ್ಮಾ, ವಿಜಯಲಕ್ಷ್ಮೀ ಹಳ್ಳಿ, ಉಪನ್ಯಾಸಕರು, ಶಿಕ್ಷಕರು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here