ಶಹಾಬಾದ: ಚರಗ ಚೆಲ್ಲಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸಿದ ರೈತರು

0
8

ಶಹಾಬಾದ: ಎಳ್ಳ ಅಮವಾಸ್ಯೆ ನಿಮಿತ್ಯ ರವಿವಾರ ತಾಲೂಕಿನಾದ್ಯಂತ ರೈತಾಪಿ ವರ್ಗದವರು ಹೊಲದಲ್ಲಿ ಬೆಳೆದು ನಿಂತ ಪೈರಿಗೆ ಸಂಭ್ರಮದಿಂದ ಚರಗ ಚೆಲ್ಲಿ ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸಿದರು.

ನಗರದ ಸುತ್ತಮುತ್ತಲಿನ ಗ್ರಾಮಗಳಾದ ಭಂಕೂರ, ಮುತ್ತಿಗಿ, ನಗರದ ಸುತ್ತಮುತ್ತಲಿನ ಗ್ರಾಮಗಳಾದ ಭಂಕೂರ, ಮುತ್ತಿಗಿ, ರಾವೂರ, ಮಾಲಗತ್ತಿ, ತೊನಸಿನ ಹಳ್ಳಿ, ಮರತೂರ, ತೆಗನೂರ, ಕಿರಣಗಿ, ಗೋಳಾದಲ್ಲಿ ರೈತರು ಭೂತಾಯಿಗೆ ಚರಗ ಚೆಲ್ಲಿ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದರು. ರೈತಾಪಿ ಜನರು ತಮ್ಮ ಹೊಲಗಳಿಗೆ ತೆರಳಿ ಜೋಳದ ದಂಟಿನ ಮಂಟಪವನ್ನು ಕಟ್ಟಿ ಪಂಚ ಪಾಂಡವರಿಗೆ ಕೂಡಿಸಿ ಪೂಜೆ ಮಾಡಿದರು. ಬೆಳೆದ ಬೇಳೆಗಳಾದ ತೊಗರಿ, ಜೋಳ, ಕಡಲೆ, ಗೋಧಿ ಬೆಳೆಗಳಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲುವ ಮೂಲಕ ಬೆಳೆ ಸಮೃದ್ಧಿಯಾಗಲಿ ಎಂದು ಭೂತಾಯಿಗೆ ಪ್ರಾರ್ಥನೆ ಸಲ್ಲಿಸಿದರು.

Contact Your\'s Advertisement; 9902492681

ಬೆಳಿಗ್ಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್, ಮೋಟಾರ ಸೈಕಲ್‌ಗಳಲ್ಲಿ ಹೊಲಗಳಿಗೆ ತೆರಳಿದ ರೈತರು ತಮ್ಮ ಸ್ನೇಹಿತರನ್ನು ಕರೆದುಕೊಂಡು ಚರಗಕ್ಕೆ ಮೆರಗು ತಂದರು. ಹಬ್ಬದ ವಿಶೇಷವಾಗಿ ಹೊಲದಲ್ಲಿ ಮೊದಲು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಮೊದಲ ನೈವೈಧ್ಯವನ್ನು ಹುಲ್ಲುಲ್ಲಿಗೋ ಚಳ್ಳಂಬಚರಿಗೋ ಎಂದು ಕೂಗುತ್ತಾ ಹೊಲದ ತುಂಬೆಲ್ಲ ಚರಗ ಚೆಲ್ಲಿದರು.

ಬಳಿಕ ಹಬ್ಬದ ಊಟಕ್ಕೆಂದು ತಯಾರಿಸಿದ್ದ ಶೆಂಗಾ ಹೋಳಿಗೆ, ಮೊಸರು,ಚಟ್ನಿ, ಎಳ್ಳಿನ ಸಜ್ಜೆ ರೊಟ್ಟಿ, ಅನ್ನದ ಬಾನ, ಕಡಬು, ಹೋಳಿಗೆ,ಕರಿಗಡಬು ನಾನಾತರಹದ ಪಲ್ಯೆ ಸೇರಿದಂತೆ ಬಗೆಬಗೆಯ ಭೋಜನವನ್ನು ಹೊಲದಲ್ಲಿ ಕುಳಿತು ಕುಟುಂಬ ವರ್ಗದವರು, ಸ್ನೇಹಿತರು ಹಾಗೂ ಬಂದು ಭಾಂದವರು ಸವಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here