ರೈತ ನಾಯಕ ಒಕ್ಕಲಿಗ ಮುದ್ದಣ್ಣ: ಶಿವಶರಣಪ್ಪ ಕಲ್ಬುರ್ಗಿ

0
8

ಕಲಬುರಗಿ: ಅಂಗ ಬೇಸಾಯದ ಜೊತೆಗೆ ಲಿಂಗ ಬೇಸಾಯ ಹೇಗೆ ಮಾಡಬೇಕು ಎಂಬುದನ್ನು ಕಲಿಸಿದ ಒಕ್ಕಲಿಗ ಮುದ್ದಣ್ಣನವರು ನಿಜವಾಗಿಯೂ ರೈತ ನಾಯಕ ಎಂದು ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶಿವಶರಣಪ್ಪ ಕಲ್ಬುರ್ಗಿ ತಿಳಿಸಿದರು.

ನಗರದ ಹೊರ ವಲಯದ ಸೋಮಣ್ಣ ನಡಕಟ್ಟಿ (ಮೃತ್ಯುಂಜಯ ಟ್ರೇಡರ್ಸ್) ಹೊಲದಲ್ಲಿ ಎಳ್ಳಾಮವಾಸ್ಯೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಒಕ್ಕಲಿಗ ಮುದ್ದಣ್ಣನವರ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಗಿನ ಕಾಲದಲ್ಲಿ ಸುಂಕ ವಿಧಿಸಿರುವುದನ್ನು ವಿರೋಧಿಸಿದ ಮುದ್ದಣ್ಣ ಇಂದಿನ ರೈತರಿಗೆ ಮಾದರಿಯಾಗಿದ್ದಾನೆ ಎಂದು ಹೇಳಿದರು.

Contact Your\'s Advertisement; 9902492681

ಕೃಷಿ ಕಾಯಕ ಮಾಡುತ್ತ ನಿತ್ಯ ಜಂಗಮ ದಾಸೋಹ ಮಾಡುತ್ತಿದ್ದ ಮುದ್ದಣ್ಣನವರು ನಮ್ಮನ್ನು ಆಳುತ್ತಿದ್ದ ರಾಜರುಗಳ ಬೊಕ್ಕಸಕ್ಕೆ ಅಧಿಕ ತೆರಿಗೆಯನ್ನು ಕೊಡುವುದಿಲ್ಲ ಎಂದು ಆಗಿನ ಕಾಲದಲ್ಲೇ ರೈತ ವಿರೋಧಿ ನೀತಿಯನ್ನು ಖಂಡಿಸಿದ್ದರು. ಇದುವರೆಗೆ ದೊರೆತ ಅವರ ೧೨ ವಚನಗಳು ಸಮಾಜ ಬದಲಾವಣೆಯ ಅಂಶಗಳಿಂದ ಕೂಡಿವೆ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಅವರಿಂದ ಹಾಸ್ಯ ಕಾರ್ಯಕ್ರಮ, ಪ್ರಮಥ-ಪ್ರಣವ ಸತ್ಯಂಪೇಟೆ, ಶಾರದಾ ಜಂಬಲದಿನ್ನಿ ಸಹೋದರಿ ಅವರಿಂದ ವಚನ ಸಂಗೀತ, ವೀರಭದ್ರ ಸಿಂಪಿ ಅವರಿಂದ ಒಡಪುಗಳನ್ನು ಹೇಳುವುದು ಮುಂತಾದ ಕಾರ್ಯಕ್ರಮ ಜರುಗಿದವು.

ಮುಖ್ಯ ಅತಿಥಿಯಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಆಗಮಿಸಿದ್ದರು. ಮಲ್ಲಣ್ಣ ನಾಗರಾಳ ನಿರೂಪಿಸಿದರು. ಸೋಮಣ್ಣ ನಡಕಟ್ಟಿ ಸ್ವಾಗತಿಸಿದರು. ವಿಶ್ವನಾಥ ಡೋಣೂರ ವಂದಿಸಿದರು.

ಬಸವರಾಜ ಚಾಂದಕವಟೆ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವಿಶ್ವನಾಥ, ಶರಣಬಸವ ಕಲ್ಲಾ, ಡಾ. ಶಿವರಂಜನ್ ಸತ್ಯಂಪೇಟೆ, ಮಲ್ಲಿಕಾರ್ಜುನ ಜಿ. ಸತ್ಯಂಪೇಟೆ, ಡಾ. ಶ್ರೀಶೈಲ ಘೂಳಿ, ಸತೀಶ ಸಜ್ಜನ್, ಆದಪ್ಪ ಬಗಲಿ, ಪ್ರಜ್ಞಾ ನಡಕಟ್ಟಿ ಅನಸೂಯಾ ನಡಕಟ್ಟಿ ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here