ಮಣೂರ ಆಸ್ಪತ್ರೆಯ ಪ್ರಥಮ ವಾರ್ಷಿಕೋತ್ಸವ ಆಚರಣೆ

0
11

ಕಲಬುರಗಿ: ನಗರದ ಹುಮಾನಬಾದ್ ರಿಂಗ್ ರಸ್ತೆಯ ಗಣೇಶ ನಗರದಲ್ಲಿರುವ ಪ್ರತಿಷ್ಠಿತ ಮಣೂರ ಮಲ್ಟಿಸ್ಪೆಷಾಲಿಟಿ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ರಕ್ತದಾನ ಶಿಬಿರಕ್ಕೆ ಸಂಸದ ಡಾ. ಉಮೇಶ ಜಾಧವ ಚಾಲನೆ ನೀಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಸಂಸದ ಅವರು, ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ರಕ್ತದಾನದಿಂದ ಸದೃಢ ಆರೋಗ್ಯ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯವಂತ ಯುವಕರು ಹೆಚ್ಚು ರಕ್ತದಾನ ಮಾಡಬೇಕು ಎಂದು ಹೇಳಿದರು. ನಂತರ ನೂರಾರು ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಅಲ್ಲದೆ ಶಾಸಕಿ ಖನಿಜ ಫಾತೀಮ್ ಅವರು ಸಹ ಪಾಲ್ಗೊಂಡು ಆಸ್ಪತ್ರೆ ಬೆಳವಣಿಗೆ ಬಗ್ಗೆ ಶುಭ ಹಾರೈಸಿದರು.

Contact Your\'s Advertisement; 9902492681

ಆಸ್ಪತ್ರೆಯು ಒಂದು ವರ್ಷದಲ್ಲಿ ೨,೫೦೦ ಓಪಿಡಿ, ೧೫೦೦ ಐಪಿಡಿ, ೫೦೦ ಸರ್ಜರಿ, ನಾಲ್ಕು ಆರೋಗ್ಯ ತಪಾಸಣೆ ಶಿಬಿರ ಸೇರಿದಂತೆ ಅನೇಕ ಜನೋಪಯೋಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣೂರ ತಿಳಿಸಿದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಂಎಲ್‌ಸಿ ಶಶೀಲ್ ಜಿ. ನಮೋಶಿ, ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಫಾರುಖ ಅಹ್ಮದ್ ಮಣೂರ, ವೈದ್ಯೆ ಡಾ. ಹುಮೇರಾ ಫಾರುಖ ಮಣೂರ, ಜನರಲ್ ಮುಖ್ಯ ಮ್ಯಾನೇಜರ್ ಸೂರ್ಯ, ಸಿಇಓ ಲಕ್ಷ್ಮೀಕಾಂತ ಮೇತ್ರಿ, ಮುಬೀನ್ ಅಹ್ಮದ್ ಮತ್ತಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here