2023ಕ್ಕೆ ಮತ್ತೆ ಜೆಡಿಎಸ್ ಅಧಿಕಾರ ಹಿಡಿಯಲಿದೆ: ಮಾಜಿ ಪ್ರಧಾನಿ ದೇವೇಗೌಡ

0
167
  • ಶಪೀಕ್ ಊಡಗಿ

ಕಲಬುರಗಿ: 2023ರಲ್ಲಿ ಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಜಾತ್ಯಾತೀತ ಜನತಾ ದಳ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದರು.

ಸೇಡಂ ಪಟ್ಟಣದ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದ ಮಂಗಲ ಮಂಟಪದಲ್ಲಿ ಬುಧವಾರ ಜಾತ್ಯತೀತ ಜನತಾ ದಳ ವತಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನೇತ್ರದಾನ ಶಿಬಿರ ಮತ್ತು ಸದಸ್ಯತ್ವ ಅಭಿಮಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರು ಕಷ್ಟಪಟ್ಟು ತಮ್ಮ ಹೊಲದಲ್ಲಿ ಬೇಳೆ ಬೆಳೆದು ಮಳೆರಾಯನ ಆರ್ಭಟದಿಂದ ಬೇಳೆಗಳು ನಾಶವಾಗಿದ್ದರು ಈಗಿನ ಬಿಜೆಪಿ ಸರಕಾರ ರೈತರ ಬಗ್ಗೆ ಕಾಳಜಿ ವಹಿಸಿದೇ ರೈತರ ಸಾಲ ಮನ್ನಾ ಮಾಡದೇ ನಿರ್ಲಕ್ಷತೆ ಮಾಡುತ್ತಿದ್ದಾರೆ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ, ಹಿಂದಿನ ಕಲಬುರಗಿ ಹೇಗಿತ್ತು ಈಗಿನ ಪರಿಸ್ಥಿತಿ ಹೇಗಿದೆ ಅವಲೋಕನ ಮಾಡಿಕೊಂಡು ನೋಡಿದರೆ ನಿಮಗೆ ತಿಳಿಯುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಒಂದುವರೆ ವರ್ಷ ದೊಸ್ತಿ ಸರಕಾರದಲ್ಲಿ ನಾವು ನೀರಾವರಿ ಯೋಜನೆ ತಂದು ರೈತರಿಗೆ ಅನುಕೂಲ ಆಗುವಂತೆ ಮಾಡಿದ್ದು, ರೈರ ಸಾಲ ಮನ್ನಾ ಕೂಡ ಜೆಡಿಎಸ್ ಅಧಿಕಾರವದಿಯಲ್ಲಿ ಮಾಡಿದೆ. ಬಿಜೆಪಿ ಕಾಂಗ್ರೆಸ್ ಪಕ್ಷ ರೈತರ ಪರವಾಗಿ ಬಡವರ ಪರವಾಗಿ ಕಾಳಜಿ ವಹಿಸಿ ಯಾವುದೇ ಜನಪರ ಕೇಲಸ ಮಾಡಿವೇ ಎಂದು ಪ್ರಶ್ನಿಸಿದರು.

ಜಾತ್ಯಾತೀತ ಜನತಾ ದಳ ಪಕ್ಷವನ್ನು ಮುಗಿಸಿ ಬಿಡುವದನ್ನು ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಕಾಂಗ್ರೆಸ್ ಮುಖಂಡರಿಗೆ ಜನರು ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಉಳಿಸಿ ಬೆಳೆಸಿ ಬಲ ಪಡಿಸುವ ಕೆಲಸ ಮಾಡಬೇಕಿದೆ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಮಹಿಳೆಯರನ್ನು ರಾಜಕೀಯ ಶಕ್ತಿ ನೀಡಿದ್ದು ಜಾತ್ಯಾತೀತ ಜನತಾ ದಳ ಪಕ್ಷವನ್ನು ಮರೆಯಬಾರದು ಎಂದು ಹೇಳಿದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಬಡತನ ಇನ್ನೂ ಹೇಚ್ಚಾಗಿದ್ದು, ಬಿಜೆಪಿ ಸರಕಾರ ಬಡವರ ಪರವಾಗಿ ಸರಿಯಾಗಿ ನಡೆದುಕೊಂಡಿಲ್ಲ ಎಂದು ಆರೋಪಿಸಿದರು, ರಾಷ್ಟ್ರದಲ್ಲಿ ಐಕ್ಯತೆ ಇಲ್ಲದಿದ್ದಲ್ಲಿ, ಎದುರಾಳಿಯನ್ನು ಎದುರಿಸುವದು ಅಸಾಧ್ಯ , “ಈಶ್ವರ ಅಲ್ಲ ತೇರೆ ನಾಮ ಸಬ್ ಕೊ ಸಮ್ಮತಿ ದೇ ಭಗವಾನ್” ಎಂದು ಹೇಳಿದರು.

ಬಳಿಕ ಶಾಸಕ ಬಂಡೇಪಾ ಕಾಶಾಂಪೂರ ಮಾತನಾಡಿ, ಯಾವುದೇ ಪಕ್ಷದವರು ರೈತರ ಸಾಲ ಮನ್ನಾ ಮಾಡಿಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಣ್ಣ ನವರು ರೈತರ ಸಾಲ ಮನ್ನಾ ಮಾಡಿದ್ದು ಎಂದರು, ರೈತರಿಗೆ ಅನುಕೂಲ ಹಾಗೂ ಬಡವರ ಅನುಕೂಲ ಆಗುವ ನೀರಾವರಿ ಯೋಜನೆ ತಂದು ಅನುಕೂಲ ಮಾಡಿದ ಜಾತ್ಯಾತೀತ ಜನತಾ ದಳ, ಮುಂದೆ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರದ ಚೂಕಣ್ಣಿ ಹಿಡಿಯಲಿದೆ ಎಂದು ಭವಿಷ್ಯ ನುಡಿದ್ದರು, ರೈತರ ಪರ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಕೇಲಸ ಮಾಡಲಾಗುವುದು ಎಂದು ಭರವಸೆಯ ಮಾತನಾಡಿದರು.

ಪ್ರಸ್ತವಿಕವಾಗಿ ಜೆಡಿಎಸ್ ಮುಖಂಡ ಬಾಲರಾಜ ಗುತ್ತೆದಾರ ಮಾತನಾಡಿ, ಸೇಡಂ ತಾಲೂಕಿನಲ್ಲಿ ಹಲವು ಕಾರ್ಖಾನೆಗಳಿವೇ ಆದರೆ ಸರಿಯಾಗಿ ರಸ್ತೆಗಳಿಲ್ಲದೆ ರಸ್ತೆ ಮೇಲೆಲ್ಲಾ ದೂಳಿನಿಂದ ರಸ್ತೆಗಳು ಕೂಡಿವೆ, ಯುವಕರು ವಿಧ್ಯಾಭ್ಯಾಸ ಮುಗಿಸಿ ಉದೋಗ್ಯ ಸಿಗದೇ ಮನೆಯಲ್ಲಿ ಕುಳಿತಿದ್ದಾರೆ, ಅವರ ಉಪಾ ಜೀವನ ನಡೆಸಲು ತುಂಬಾ ತೊಂದರೆ ಅನೂಭವಿಸುವಂತಾಗಿದೆ, ಕೊರೋನಾ ಹೇಚ್ಚಾಗಿರುವ ಹಿನ್ನೆಲೆಯಲ್ಲಿ ಸರಕಾರ ಕೊರೋನಾ ನಿಯಂತ್ರಣಕ್ಕೆ ತರಲು ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ವಿದಿಸಲಾಗಿತು, ಬಡವರು ಹನಿ ನೀರು ತುತ್ತು ಅನ್ನ ಸಿಗದೇ ಪರದಾಡುವ ಸಮಯದಲ್ಲಿ ದಿನಸಿ ಕಿಟಗಳ ಮೂಲಕ ಜನರಿಗೆ ನೇರವು ಆಗುವ ಕೇಲಸ ಮಾಡಿದ್ದು, ಕರ್ನಾಟಕದಲ್ಲಿ ಜಾತ್ಯಾತೀತ ಜನತಾ ದಳ ಪಕ್ಷವನ್ನು ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳು ತಂದು ಬಡವರ ಅಭಿವೃದ್ಧಿ ಕೇಲಸ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ, ಶ್ರೀ ಸದಾಶಿವ ಸ್ವಾಮೀಜಿ, ಗುರುಮಿಠಕಲ್ ಶಾಸಕ ನಾಗನಗೌಡ ಕಂದಪೂರ, ಜೆಡಿಎಸ್ ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂಗನ್, ಜೆಡಿಎಸ್ ತಾಲೂಕ ಅಧ್ಯಕ್ಷ ಎಕ್ಬಾಲ ಖಾನ್, ಕಾರ್ಯಧ್ಯಕ್ಷ ಶಿವುರಾಮರೆಡ್ಡಿ, ಮಹೇಶ್ವರಿ ವಾಲಿ, ಉದ್ಯಮಿ ಅಶೋಕ ಗುತ್ತೆದಾರ, ಶಿವುಕುಮಾರ ನಾಟೀಕರ್, ಕೇದಾರಲಿಂಗ ಹಿರೇಮಠ, ಜಗನಾಥ ಗೋಟ್ಟೂರ ಸೇರಿ ಅನೇಕರು ಉಪಸ್ಥಿತರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here