ಬಿ.ಆರ್. ಆರೋಪಕ್ಕೆ ಶಾಸಕ ಗುತ್ತೇದಾರ ನಿರಾಕರಣೆ

0
48

ಆಳಂದ: ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಎಪಿಎಂಸಿ ಜಾಗದಲ್ಲಿ ಡಾ| ಅಂಬೇಡ್ಕರ್ ಪ್ರತಿಮೆ ಕೂಡಿಸುಗೊಟ್ಟಿಲ್ಲ. ಗುತ್ತೇದಾರ ಅವರು ಈ ಜಾಗಕ್ಕೆ ಕೇಸ್ ಹಾಕಿದ್ದರು ಎಂದು ಕೀಳುಮಟ್ಟದ ರಾಜಕೀಯಕ್ಕೆ ಇಳಿದು ಅಪಟ್ಟಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಈ ಕುರಿತು ಪಟ್ಟಣದಲ್ಲಿ ಗುರುವಾರ ಕರೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದ ಎಪಿಎಂಸಿ ಜಾಗಕ್ಕೆ ಸಂಬಂಧಿಸಿದಂತೆ ಕೇಸ ಹಾಕಿ, ತಡೆಯಾತಜ್ಞೆ ತಂದಿದ್ದಾರೆ. ಆ ಸ್ಥಳದಲ್ಲಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆ ಕೂಡಿಸಗೊಟ್ಟಿಲ್ಲ ಎಂದು ಪಾಟೀಲ ಆರೋಪ ಮಾಡಿದ್ದಾರೆ. ಇದು ನನ್ನ ಜಾಗವಲ್ಲ. ಹೈದರಾಬಾದ ನವಾಬ ಫತ್ತೆ ಸುಲ್ತಾನ ಎಂಬಾತನು ನನ್ನ ಜಾಗವೆಂದು ಕೇಸ ಹಾಕಿದ್ದಾರೆ.

Contact Your\'s Advertisement; 9902492681

ಈಗಲೂ ಕೇಸ್ ನಡೆದಿದೆ ಎಂದು ಸ್ಪಷ್ಟಪಡಿಸಿದ ಅವರು, ಡಾ| ಅಂಬೇಡ್ಕರ್ ಪ್ರತಿಮೆ ಎಪಿಎಂಸಿ ನಿವೇಶನದಲ್ಲಿ ಸ್ಥಾಪಿಸುವಂತೆ ಮುಖಂಡರು ನನ್ನಬಳಿಯೂ ಬಂದಿದ್ದರು. ಕೇಸ್ ಇರುವುದರಿಂದ ಬರುವುದಿಲ್ಲ ಎಂದು ಹೇಳಿದ್ದೇನೆ. ಆದರೆ ಈ ಜಾಗ ನನ್ನದಲ್ಲ ಮತ್ತು ನಾನೂ ಯಾವುದೇ ಕೇಸ್ ಹಾಕಿಲ್ಲ. ಸತ್ಯಾಸತ್ಯೆಯನ್ನು ಅರಿಯದೆ ರಾಜಕೀಯ ದುರುದ್ದೇಶದಿಂದ ಬಿ.ಆರ್. ಮಾಡುವ ಆರೋಪ ಸರಿಯಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ಮತ್ತೊಂದಡೆ ಕಿಸಾನಸಭಾದ ಮೌಲಾ ಮುಲ್ಲಾ ಅವರು ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಸಮಸ್ಯೆ ಕೇಳಿಲ್ಲ ಎಂದು ಆರೋಪಿಸಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.

ಹೋರಾಟಕ್ಕೆ ಇಲ್ಲದ ಕಾರಣ ಮುಂದೆ ಮಾಡಿ ಇವರು ಆರೋಪಿಸುವ ಜಾಯಮಾನ ಸರಿಯಲ್ಲ. ಅಂದು ರೈತರ ಕುರಿತು ಮುಖ್ಯಮಂತ್ರಿಗಳಿಗೆ ಬೇಡಿಕೆ ಇಡಲಾಗಿದೆ. ನಾಲ್ಕು ಹೊಸಕರೆ, ಏಳು ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಒಪ್ಪಿಗೆ ಹಾಗೂ ಬೆಳೆಹಾನಿ ಹೆಚ್ಚಿನ ಪರಿಹಾರ ಸೇರಿ ಹಲವು ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ.

ಇದು ರೈತರ ಬೇಡಿಕೆಯಲ್ಲವೇ ಎಂದು ಪ್ರಶ್ನಿಸಿದ ಅವರು, ಸಮಾರಂಭ ಮುಗಿದ ಬಳಿಕ ಸ್ವತಃ ಮುಖ್ಯಮಂತ್ರಿಗಳು ಕಾರಿನಿಂದಿಳಿದು ರೈತರಿಂದ ಹಾಗೂ ಹಲವು ಸಂಘಟಕರಿಂದ ಮನವಿಗಳನ್ನು ಸ್ವೀಕರಿಸಿ ಸ್ಪಂದಿಸುವ ಭರವಸೆ ನೀಡದಾಗ್ಯೂ ಮೌಲಾ ಮುಲ್ಲಾ ಅವರು ನೀಡುವ ಹೇಳಿಕೆ ಹಾಸಾಸ್ಪದವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಣಮಂತ ಕಾಬಡೆ, ಮುಖಂಡ ಮಲ್ಲಣ್ಣಾ ನಾಗೂರೆ, ವಿಜಯಕುಮಾರ ಕೋಥಳಿಕರ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here