ಆನೇಕಲ್: ತಾಲ್ಲೂಕಿನಲ್ಲಿ ಅಂಕುರ ಸಂಸ್ಥೆಯಿಂದ ಸಾವಿತ್ರಿ ಬಾಯಿಪುಲೆ ಯವರ ಜನ್ಮದಿನದ ಪ್ರಯುಕ್ತ ಕರಕುಶಲ ತರಬೇತಿಯನ್ನು ಕಲಾಶಾಲೆಯಲ್ಲಿ ನಡೆಸಲಾಯಿತು.
ನೆಹರು ಯುವ ಕೇಂದ್ರದ ವತಿಯಿಂದ ಸುಜಾತ ರವಿಚಂದ್ರ ರವರು ಮಹಿಳೆಯರು ಮನೆಯಲ್ಲೇ ಹೇಗೆ ಉದ್ಯೋಗ ಮಾಡಬಹುದು, ಸಣ್ಣ ಸಣ್ಣ ಕರಕುಶಲ ವಸ್ತುಗಳನ್ನು ಹೇಗೆ ತಯಾರು ಮಾಡಿ ಹಣ ಸಂಪಾದನೆ ಮಾಡಬಹುದು? ಎಂಬುದರ ಬಗ್ಗೆ ತಿಳಿಸಿಕೊಟ್ಟರು.
ಅಂಕುರ ಸಂಸ್ಥೆ ಭಾಗ್ಯ ಮೂರ್ತಿ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರ ಜೀವನವನ್ನು ನಾವು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು ಮತ್ತು ಮಹಿಳೆಯರು ಮುಂದೆ ಬಂದು ಎಲ್ಲಾ ಕ್ಷೇತ್ರದಲ್ಲೂ ಬೆಳೆಯಬೇಕು ಎಂದು ಹೇಳಿದರು.
ಮುಂದೆ ನೆಹರು ಯುವ ಕೇಂದ್ರ ಯೋಜನೆಗಳನ್ನು ಮಹಿಳೆಯರು ಉಪಯೋಗಿಸಿಕೊಳ್ಳಬೇಕು, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಕೆಲಸಗಳು ಕೂಡ ಅಧಿಕಾರಿಗಳು ಮಾಡಬೇಕು ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದಲ್ಲಿ ಅಂಕುರ ಸಂಸ್ಥೆಯ ಅದ್ಯಕ್ಷರು ಸುನಿತಾ ರವಿ, ಶೋಭಕುಮಾರಿ, ಪವಿತ್ರ, ಪುಟ್ಟಮ್ಮ, ವಕೀಲರಾದ ಪುರುಷೋತ್ತಮ ಚಿಕ್ಕಹಾಗಡೆ, ಬಿಕಗಕನಹಳ್ಳಿ ವೆಂಕಿ ಮತ್ತು ಅಂಕುರ ಸಂಸ್ಥೆಯ ಮಹಿಳೆಯರು ಭಾಗವಹಿಸಿದ್ದರು.