ಎಲ್ಲರಿಗೂ ಕೋವಿಡ್ ಸುರಕ್ಷಿತ ಕ್ರಮಗಳ ಬಗ್ಗೆ ಅರಿವಿರಬೇಕು: ಎಸ್.ಪಿ.ವೆಂಕಟೇಶ್

0
20

ಮಾಲೂರು: ಶಾಲೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರಬೇಕು, ಜೊತೆಗೆ ಶಿಕ್ಷಕರು ಪೋಷಕರು ಎರಡು ಡೋಸ್ ಪಡೆದಿರಬೇಕು ಹಾಗೂ ಕೋವಿಡ್ ಸುರಕ್ಷಿತಾ ಕ್ರಮಗಳ ಬಗ್ಗೆ ಹಾಗೂ ಎಸ್ ಡಿ ಎಂ ಸಿ ಸದಸ್ಯರ ಜವಾಬ್ದಾರಿಗಳ ಬಗ್ಗೆ ಅರಿವಿರಬೇಕು,  ಎಂದು ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಎಸ್.ಪಿ.ವೆಂಕಟೇಶ್ ರವರು ತಿಳಿಸಿದರು.

ಮಾಲೂರು ತಾಲ್ಲೂಕಿನ ಮಡಿವಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂ.ಸಿ.ಹಳ್ಳಿ ಶಾಲೆಯಲ್ಲಿ ಎಸ್ ಡಿ ಎಂ ಸಿ ಸದಸ್ಯರ ಮತ್ತು ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯವಾಗಿ ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರದೊಂದಿಗೆ ತರಗತಿಯಲ್ಲಿ ಕುಳಿತುಕೊಳ್ಳಬೇಕು ಜೊತೆಗೆ ಆಗಾಗ ಸ್ಯಾನಿಟೈಸರ್ ಬಳಸುವಂತೆ ತಿಳಿಸಬೇಕು ಎಂದರು.

Contact Your\'s Advertisement; 9902492681

ಈ ಸಭೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ಬಸಪ್ಪ, ಸದಸ್ಯರಾದ ವೈ.ಕೆ. ವೆಂಕಟೇಶ್, ಪ್ರಶಾಂತರೆಡ್ಡಿ, ಜಯಶಂಕರ, ನಾಗವೇಣಿ, ನಾಗರತ್ನ, ದೀಪ, ಸುಗುಣ, ಶಾಲಾ ಮುಖ್ಯಶಿಕ್ಷಕಿ ಎಂ.ಆರ್.ಭಾಗ್ಯಲಕ್ಷಿ, ಸಹಶಿಕ್ಷಕರಾದ ಎಚ್.ಎನ್.ಗೀತ, ಎನ್.ಜಿ.ಕೃಷ್ಣವೇಣಿ, ಕೆ. ಸುಜಾತ ಹಾಗೂ ಪೋಷಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here