ಅಂಚೆ ಕಚೇರಿಗೆ ಸಿಬ್ಬಂದಿ ಕೊರತೆ:ಮಕ್ಕಳ ಶಿಷ್ಯವೇತನ ಖಾತೆಗಾಗಿ ಪೋಷಕರ ಪರದಾಟ

0
49

ವಾಡಿ: ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ಶಾಲಾ ಶಿಷ್ಯವೇತನಕ್ಕಾಗಿ ಜಂಟಿ ಖಾತೆ ತೆರೆಯಲು ಪರದಾಡುತ್ತಿದ್ದಾರೆ. ರಾಷ್ಟ್ರೀಕೃತ ಎಸ್‌ಬಿಐ ಬ್ಯಾಂಕ್ ಮತ್ತು ಅಂಚೆ ಕಚೇರಿಗಳಿಗೆ ಅಲೆದರೂ ಜಂಟಿ ಖಾತೆ ತೆರೆಯಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಶಿಷ್ಯವೇತನ ಪಡೆದುಕೊಳ್ಳಲು ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಜಂಟಿ ಬ್ಯಾಂಕ್ ಖಾತೆ ಹೊಂದುವುದು ಅವಶ್ಯಕ ಎಂದು ಘೋಷಿಸಲಾಗಿದ್ದು, ಶಿಕ್ಷಣ ಇಲಾಖೆಯ ತಾಲೂಕು ಅಧಿಕಾರಿಗಳು ಆದೇಶ ಪಾಲಿಸುವಂತೆ ಶಾಲಾ ಆಡಳಿತ ಮಂಡಳಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಒತ್ತಡವನ್ನು ಮಕ್ಕಳ ಪೋಷಕರ ಮೇಲೆ ಹೇರುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನಸಿಕ ಕಿರುಕುಳ ನೀಡುತ್ತಿವೆ ಎಂಬ ಆರೋಪ ಕೇಳಿಬಂದಿದೆ.

Contact Your\'s Advertisement; 9902492681

ಮೀಣ ಅಂಚೆ ಶಾಖೆಗಳ ಸಿಬ್ಬಂದಿಯೊಬ್ಬರನ್ನು ಸೇವೆಗೆ ನಿಯೋಜಿಸಿಕೊಂಡು ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಇದರ ಮಧ್ಯೆ ಪದೇಪದೆ ವಿದ್ಯುತ್ ಕಡಿತ ಮತ್ತು ಬ್ಯಾಟರಿ ರಿಪೇರಿ ಕಿರಿಕಿರಿ ಉಂಟಾಗುತ್ತಿದೆ. ಗಣಕಯಂತ್ರ ಸೌಲಭ್ಯ ಒದಗಿಸಲಾಗಿಲ್ಲ. ಈ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಈ ಕಾರಣಕ್ಕೆ ಪೋಷಕರಿಗೆ ತೊಂದರೆಯಾಗುತ್ತಿದೆ. ಆದರೂ ಹಲವು ಸಮಸ್ಯೆಗಳ ಮಧ್ಯೆ ನಾವು ಸಾರ್ವಜನಿಕರ ಸೇವೆ ಮಾಡುತ್ತಿದ್ದೇವೆ
                                               – ಬಿ.ವಿ.ಕಟ್ಟಿಮನಿ. ಅಂಚೆ ಕಚೇರಿ ಪೋಸ್ಟ್ ಮಾಸ್ಟರ್

ಮಕ್ಕಳ ಆಧಾರ್ ಕಾರ್ಡ್, ಪೋಷಕರ ಬ್ಯಾಂಕ್ ಖಾತೆ ಪುಸ್ತಕ ಹಾಗೂ ಭಾವಚಿತ್ರಗಳೊಂದಿಗೆ ಅರ್ಜಿ ಹಿಡಿದು ಬ್ಯಾಂಕ್‌ಗಳ ಮುಂದೆ ಪಾಳಿಗೆ ನಿಲ್ಲುತ್ತಿರುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಪೋಷಕರೊಂದಿಗೆ ಮಕ್ಕಳೂ ದಿನವಿಡೀ ಪಾಳಿಗೆ ನಿಲ್ಲುವ ಮೂಲಕ ಕಷ್ಟ ಅನುಭವಿಸುತ್ತಿರುವುದು ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಬದಲು ಅಂಚೆ ಕಚೇರಿಯಲ್ಲಿ ಮಕ್ಕಳ ಖಾತೆ ತೆರೆಯಲು ಅವಕಾಶ ಒದಗಿಸಲಾಗಿದೆಯಾದರೂ ಅಲ್ಲೂ ಸಕಾಲಕ್ಕೆ ಅರ್ಜಿ ಸ್ವೀಕೃತಿಯಾಗದೆ ಪಾಲಕರು ಗೋಳಾಡುತ್ತಿದ್ದಾರೆ.

ಅಂಚೆ ಅಧಿಕಾರಿಗಳ ನಿರ್ಲಕ್ಷ್ಯ: ಪಟ್ಟಣದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಕ್ಕಳ ಜಂಟಿ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿರುವ ಅಂಚೆ ಕಚೇರಿಯಲ್ಲಿ ಅಧಿಕಾರಿಗಳು ಪೋಷಕರನ್ನು ನಿರ್ಲಕ್ಷ್ಯ ಭಾವನೆಯಿಂದ ಕಾಣುತ್ತಿದ್ದಾರೆ. ಗಂಟೆಗಟ್ಟಲೇ ಅರ್ಜಿ ಸ್ವೀಕೃತಿ ಕಿಟಕಿಯಲ್ಲಿ ಪಾಳಿಗೆ ನಿಂತರೂ ಯಾರು? ಯಾಕೆ? ಎಂದು ಕೇಳುವವರಿರಲ್ಲ. ವಿದ್ಯಾರ್ಥಿಗಳ ಖಾತೆ ತೆರೆಯಲೆಂದೇ ತೆರೆಯಲಾಗಿರುವ ವಿಶೇಷ ಕೌಂಟರ್‌ನಲ್ಲಿ ಸಿಬ್ಬಂದಿ ಇರುವುದಿಲ್ಲ. ಸಿಬ್ಬಂದಿಗಾಗಿ ಕಾಯ್ದು ಪೋಷಕರು ಸುಸ್ತಾಗುತ್ತಿದ್ದಾರೆ.

ಮಕ್ಕಳ ಆಧಾರ್ ಲಿಂಕ್ ಸಾಧ್ಯವಾಗದೆ ಅನೇಕರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಜವಾಬ್ದಾರಿ ನಿಭಾಯಿಸದ ಅಂಚೆ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲೂ ಇದೇ ಸಮಸ್ಯೆ ತಲೆದೋರಿದ್ದು, ಕೆಲಸ ಕಾರ್ಯಗಳನ್ನು ಬಿಟ್ಟು ಪೋಷಕರು ಬ್ಯಾಂಕ್‌ಗಳಿಗೆ ಅಲೆದು ಗೋಳಾಡುತ್ತಿದ್ದಾರೆ. ಮಕ್ಕಳ ಜಂಟಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಎದುರಾಗುತ್ತಿರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

ಪೋಷಕರೊಂದಿಗೆ ವಿದ್ಯಾರ್ಥಿಗಳ ಜಂಟಿ ಖಾತೆ ತೆರೆಯಲು ನಮ್ಮ ಅಂಚೆ ಕಚೇರಿಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ವಿಶೇಷ ಕೌಂಟರ್ ತೆರೆಯಲಾಗಿದೆ. ಅಲ್ಲದೆ ಬಳವಡಗಿ, ಹಳಕರ್ಟಿ, ಇಂಗಳಗಿ, ಕಡಬೂರ, ಕೊಂಚೂರ, ಲಾಡ್ಲಾಪುರ, ರಾವೂರ ಹಾಗೂ ಸೂಲಹಳ್ಳಿ ಗ್ರಾಮಗಳ ಅಂಚೆ ಕಚೇರಿಗಳಲ್ಲಿ ಮಕ್ಕಳ ಖಾತೆ ತೆರೆಯುವ ಕಾರ್ಯ ನಡೆಯುತ್ತಿದೆ. ಆದರೆ ವಾಡಿ ಅಂಚೆ ಕಚೇರಿ ಶಾಖೆಯಲ್ಲಿ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನೇಮಕವಿಲ್ಲ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here