ಸುರಪುರ: ವಿಶ್ವ ಬೌದ್ಧ ಧಮ್ಮ ದ್ವಜೋತ್ಸವ ದಿನದ ಅಂಗವಾಗಿ ಸುರಪುರ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟಿನ ಗೌರವ ಅದ್ಯಕ್ಷರಾದ ಪೋಜ್ಯ ವರಜ್ಯೋತಿ ಬಂತೆಜಿಯವರ ಉಪದೇಶದಂತೆ ೧೩೭ ನೇ ಬೌದ್ಧ ಧಮ್ಮ ದ್ವಜದ ದಿನವನ್ನಾಗಿ ಬುದ್ದ ವಿಹಾರದಲ್ಲಿ ದ್ವಜಾರೋಹಣ ಮಾಡಿ ಆಚರಿಸಲಾಯಿತು.
ಕಾರ್ಯಾಕ್ರದಲ್ಲಿ ರಾಹುಲ್ ಹುಲಿಮನಿಯವರು ಮಾತನಾಡಿ ಬ್ರಿಟಿಷರ ಕಾಲಘಟ್ಟದ ಬ್ರೀಟಿಷ ಅಧಿಕಾರಿಯಾದ ಸ್ಠೀಲೆ ಓಲಕಾಟ್, ಮತ್ತು ಜೆ.ಆರ್ ಡಿಸಿಲ್ವಾ ರವರು ಮೋಟ್ಟ ಮೋದಲಿಗೆ ಶ್ರಿಲಂಕದ ಕ್ಯಾಂಡಿಯಲ್ಲಿ ವಿಶ್ವದ ೨೮ ಬುದ್ದಿಸ್ಟ್ ದೇಶಗಳ ಹಿರಿಯ ಬಂತೆಜಿಗಳನ್ನು ಆವ್ಹಾನ ಮಾಡಿ ಅನಗಾರಿಕ ಧಮ್ಮಪಾಲ, ಪ್ರಭಾವಣಿ,ಶ್ರೀಲಂಕದಲ್ಲಿ ಬಂತೆಜಿಯಾಗಿ ದೀಕ್ಷೆ ಪಡೆಯುವ ಕಾರ್ಯಾಕ್ರಕ್ಕೆ ಎಲ್ಲ ಬೌದ್ಧ ಪ್ರತಿನಿಧಿಗಳನ್ನು ಕರೆಸಿ ಎಲ್ಲರು ಒಪ್ಪುವಂತೆ ಬೌದ್ಧ ಧರ್ಮದ ಏಕೈಕ ಒಂದೆ ದ್ವಜವಿರುವಂತೆ ನಿರ್ದರಿಸಿ ೧೮೮೫ ರಲ್ಲಿ ಅನಾವರಣಮಾಡಿದ ದಿನವನ್ನು ವಿಶ್ವ ಬೌದ್ಧ ಧಮ್ಮ ದ್ವಜದ ದಿನವನ್ನಾಗಿ ಆಚರಿಸಲಾಗುತ್ತಿದೆ. ಮತ್ತು ಸರ್ವ ಬೌದ್ಧ ಉಪಾಸಕರು ಶ್ರದ್ದೆಯಿಂದ ಮುಂದಿನ ದಿನಗಳಲ್ಲಿ ವಿಹಾರದ ಅಭಿವೃದ್ಧಿಗೆ ಶ್ರಮವಹಿಸುವ ಅವಶ್ಯಕತೆ ತುಂಬಾಯಿದೆ ಎಂದರು.
ಕಾರ್ಯಾಕ್ರಮಕ್ಕೆ ಬುದ್ದವಿಹಾರದ ವಿಶಾಲವಾದ ಬಂಡೆಯ ಮೆಲಿರುವ ದ್ವಜದ ಕಟ್ಟೆಯ ಮೆಲೆ ಬೌದ್ಧ ದ್ವಜಾರೋಹಣವನ್ನು ನೆರೆವರಿಸಲು ವಾರ್ಡ ನಂ ೧೦ ನಗರಸಭೆ ಸದಸ್ಯ ಎಮ್,ಡಿ,ಇಸ್ಮಾಯಿಲ್ ಬಾಗವಹಿಸಿದ್ದರು ಮತ್ತು ಪಟ್ಟಣದ ಗೋಲ್ಡನ್ ಕೇವ್ ಬುದ್ದ ವಿಹಾರ ಟ್ರಸ್ಟಿನ ಅದ್ಯಕ್ಷ ವೆಂಕಟೇಶ ಹೊಸಮನಿ, ಪ್ರಧಾನ ಕಾರ್ಯಾದರ್ಶಿ ರಾಹುಲ್ ಹುಲಿಮನಿ, ಉಪಾದ್ಯಕ್ಷರಾದ ನಾಗಣ್ಣ ಕಲ್ಲದೆವನಹಳ್ಳಿ, ಭಿಮರಾಯ ಸಿಂದಗೇರಿ, ಸದಸ್ಯರಾದ, ಶಿವುಕುಮಾರ ಕಟ್ಟಿಮನಿ,ಶಿವಲಿಂಗ ಹಸನಾಪೂರ,ಮಾಳಪ್ಪ ಕಿರದಳ್ಳಿ ,ರಮೇಶ ಅರಿಕೇರಿ, ಹುಲಗಪ್ಪ ದೇವತಕಲ್,ಮಲಕ್ಕಪ್ಪ ತೇಲಕರ್, ಮತ್ತು ಬೌದ್ಧ ಅನುಯಾಯಿಗಳಾದ ವಿಭದ್ರ ತಳವರಗೇರಾ,ಮಲ್ಲು ಮುಷ್ಠಳ್ಳಿ, ಮಲ್ಲು ಕೆಸಿಪಿ, ಚಂದಪ್ಪ ಪಂಚಮ್,ನಾಗು ಗೋಗಿಕೆರಿ,ವಾಸು ಡೊಣ್ಣಿಗೆರಿ,ಶರಣು ತಳವರಗೇರಿ,ರಾಜು ಬಡಿಗೇರ್,ಹಣಮಂತ ತೆಲಕರ್, ಹಣಮಂತ ರತ್ತಾಳ,ಮಲ್ಲಪ್ಪ ತಳವರಗೇರಾ, ಬಾಗವಹಿಸಿದ್ದರು.