ಸುರಪುರ: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ನಗರ ಸಂಪೂರ್ಣ ಬಂದಾಗಿದ್ದು ಅಂಗಡಿ ಮುಂಗಟ್ಟುಗಳು ಬಂದಾಗಿದ್ದು ರಸ್ತೆಗಳು ಬಿಕೋ ಎನ್ನುತ್ತಿವೆ.ನಗರದ ಮಹಾತ್ಮ ಗಾಂಧಿ ವೃತ್ತ,ದರಬಾರ ರಸ್ತೆ,ಕಬಾಡಗೇರಾ ರಸ್ತೆ,ಬಸ್ ನಿಲ್ದಾಣ ಹೀಗೆ ಎಲ್ಲಾ ರಸ್ತೆಗಳು ಜನರು ಇಲ್ಲದೆ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಖಾಲಿ ಖಾಲಿ ಹೊಡೆದು ಬಿಕೋ ಎಂದವು.
ಅನೇಕ ಜನ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರವಿಲ್ಲದ್ದರಿಂದ ದೈನಂದಿನ ಜೀವನಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲು ತೋಡಿಕೊಂಡರು.ಅಲ್ಲದೆ ಇದೇ ರೀತಿ ಮುಂದುವರೆದಲ್ಲಿ ನಾವು ಬದುಕುವುದೇ ದುಸ್ತರವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಅಲ್ಲದೆ ವ್ಯಾಪಾರಿಗಳು ಯಾವಾಗ ವೀಕೆಂಡ್ ಕರ್ಫ್ಯೂ ಮುಗಿದು ಮತ್ತೆ ವ್ಯಾಪಾರ ಆರಂಭವಾಗಲಿದೆ ಎಂದು ಸೋಮವಾರಕ್ಕೆ ಎದುರು ನೋಡುತ್ತಿದ್ದರು.
ಇದರ ಮದ್ಯೆ ಭಾನುವಾರ ಬೆಳಿಗ್ಗೆಯಿಂದ ನಗರದೆಲ್ಲೆಡೆ ವೀಕೆಂಡ್ ಕರ್ಫ್ಯೂ ನಿಯಮ ಉಲ್ಲಂಘಿಸದಂತೆ ನಿಗಾವಹಿಸಿದ್ದರು.ಅಲ್ಲದೆ ಎಲ್ಲಾ ರಸ್ತೆಗಳಲ್ಲಿ ಪಿಐ ಸುನೀಲಕುಮಾರ ಮೂಲಿಮನಿ ಹಾಗು ತಂಡ ಸಂಚರಿಸಿ ವೀಕ್ಷಿಸಿದರು.ಇದರ ಮದ್ಯೆ ಅನಾವಶ್ಯಕವಾಗಿ ಹೊರಗಡೆ ಓಡಾಡುತ್ತಿದ್ದವರ ೧೨ ಬೈಕ್‌ಗಳನ್ನು ಸೀಜ್ ಮಾಡಿದ್ದಾರೆ.ಅಲ್ಲದೆ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ೫೮ ಜನರಿಗೆ ದಂಡ ಹಾಕಿದ್ದಾರೆ.ಭಾನುವಾರ ಬೆಳಗ್ಗೆಯಿಂದಲೂ ನಿಯಮ ಉಲ್ಲಂಘಿಸಿದವರಿಂದ ೯೬೦೦ ರೂಪಾಯಿಗಳ ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿ ತಿಳಿಸಿದ್ದಾರೆ.