ಶಾಸಕ ಗುತ್ತೇದಾರ ವಿರುದ್ಧ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ಖಂಡಿಸಿ ಪ್ರತಿಭಟನೆ

0
4

ಆಳಂದ: ಶಾಸಕ ಸುಭಾಷ ಗುತ್ತೇದಾರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕಿಡಿಗೇಡಿಗಳನ್ನು ಬಂಧಿಸಿ ಪ್ರಕರಣವನ್ನು ಸಿಒಡಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ೧೭ ಮಠಾಧೀಶರ ನೇತೃತ್ವದಲ್ಲಿ ಕಾರ್ಯಕರ್ತರು ಮಿಂಚಿನ ಬೃಹತ್ ಪ್ರತಿಭಟನೆ ನಡೆಸಿದರು.

ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆ ಎದುರಾಯಿತು. ಪಟ್ಟಣದ ಬಸ್ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನೆ ರಜ್ವಿರೋಡ ಮೂಲಕ ತಹಸೀಲ್ದಾರ ಕಚೇರಿಯವರೆಗೆ ಸಾಗಿದ ಕಾರ್ಯಕರ್ತರು, ರಸ್ತೆಯೂದ್ದಕ್ಕು ಘೋಷಣೆ ಕೂಗಿದರು. ಟಾಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, ಜೈ ಶ್ರೀರಾಮ, ಜೈ ಭವಾನಿ ಜೈ, ಶಿವಾಜಿ ಘೋಷಣೆ ಕೂಗಿದರು. ಹಿಂದು ಹುಲಿ ಯಾರಪ್ಪ ಸುಭಾಷ ಗುತ್ತೇದಾರ ನೋಡಪ್ಪ, ತುಮ್ಮ ಆಗೇ ಬಡೋ ಹಂ ತುಮಾರೆ ಸಾಥ ಹೈ, ಹಿಂದು ಧರ್ಮಕ್ಕೆ ಜೈಯವಾಗಲಿ ಹೀಗೆ ರಸ್ತೆಯೂದ್ದಕ್ಕು ಘೋಷಣೆ ಮೊಳಗಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಂದೋಲಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಅಧಿವೇಶನದಲ್ಲಿ ಹಿಂದು ದೇವಾಲಯ ಧ್ವನಿ ಎತ್ತಿದ ಶಾಸಕರ ವಿರುದ್ಧ ಅವಹೇಳನಕಾರಿ ನಿಂಧಿಸಿ ಅವಾಚ್ಯಶಬ್ದಗಳಿಂದ ಹರಿಬಿಟ್ಟಿದ್ದಾರೆ ಎಂದು ಅವರು ಖಂಡಿಸಿದರು.
ಆಳಂದ ದರ್ಗಾದಲ್ಲಿ ಶಿವಲಿಂಗಕ್ಕೆ ಅಪಮಾನಿಸಿರುವುದು ಖಂಡನೀಯವಾಗಿದೆ. ಹಿಂದೆ ಹೋಳಿ ಹಬ್ಬದಲ್ಲಿ ಮಸೀದಿ ಮೇಲೆ ಬಣ್ಣ ಸಿಡಿದಿದ್ದಕ್ಕೆ ರಂಪಾಟಮಾಡಿ ಬೆಂಕಿ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಹೀಗೆ ಎಲ್ಲವನ್ನು ಸಹಿಸಿಕೊಂಡ ಹಿಂದುಗಳ ದೌರ್ಬಲ್ಯವಲ್ಲ. ಇದು ನಮ್ಮ ಸಹನ ಶೀಲತೆಯಾಗಿದೆ. ಹಿಂದೆ ಆದ ಘಟನೆಗಳು ಮರುಕಳಿಸಿದರೆ ನಿಮ್ಮ ಶೃದ್ಧಾಕೇಂದ್ರಗಳು ಪುಡಿಯಾಗುತ್ತೇವೆ ಎಂದು ಅವರು ಗುಡಗಿದರು.

ಭಾರತ ವಿಭಜನೆಯಲ್ಲಿ ದೇಶದ ಮುಸ್ಲಿಂರು ಪಾಕಿಸ್ತಾನಕ್ಕೆ ಹೋಗಬೇಕು ಎಂದಾಗ, ಗಾಂಧೀಜಿಯವರು ಇಲ್ಲಿಯೇ ಇರುವಂತೆ ಹೇಳಿದ್ದರಿಂದ ಇಂಥ ಕಹಿ ಘಟನೆಗಳಾಗಿ, ಶಿವಲಿಂಗಕ್ಕೆ ಅಪಮಾನದಂತ ಘಟನೆಗಳಾಗುತ್ತಿವೆ. ರಾಜ್ಯ ದೇಶದಲ್ಲಿ ಬಿಜೆಪಿ ಅಧಿಕಾರದಿಂದ ಆಡಳಿತ ನಡೆಸುತ್ತಿರುವುದು ಮುಸ್ಲಿಂರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ದೇಶದಲ್ಲಿ ಹಿಂದುಗಳಿಗೆ ಮತ್ತು ಹಿಂದು ದೇವರುಗಳಿಗೆ ನಿರಂತರವಾಗಿ ಅಪಮಾನಕರ ಘಟನೆ ನಡೆಯುತ್ತಿವೆ.

ಇದರ ರಕ್ಷಣೆಗೆ ಸಮರ್ಥವಾಗಿರುವ ವ್ಯಕ್ತಿ ಪ್ರಧಾನಿ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರದಷ್ಟೇ ಕೆಲಸವಲ್ಲ. ಎಲ್ಲರ ಕೆಲಸವಾಗಿದೆ. ದರ್ಗಾದಲ್ಲಿ ಶಿವಲಿಂಗಕ್ಕೆ ಅಪಮಾನ ಮಾಡಿ ಶಾಸಕ ಗುತ್ತೇದಾರ ಅವರ ಫೋಟೋಹಾಕಿ ಜಾಲತಾಣದಲ್ಲಿ ಅವಮಾನಿಸಿದ್ದಾರೆ. ಇಲ್ಲಿ ಪಾಕಿಸ್ತಾನದ ಏಜ್ಂಟರು, ಜೀಹಾದಿಗಳಿದ್ದಾರೆ. ಒಎಸಿ ಏಜೆಂಟರಿದ್ದಾರೆ. ಪೊಲೀಸರು ಇಂಥ ಕೃತ್ಯಗಳನ್ನು ಮಟ್ಟಹಾಕಲು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ರಾಷ್ಟ್ರ ಹಿಂದು ರಾಷ್ಟ್ರವಾಗಬೇಕಾಗಿದೆ. ರಾಷ್ಟ್ರಕ್ಕೆ ಮತ್ತು ಹಿಂದು ಸಂತರಿಗೆ ಅಪಮಾನವಾದರೆ ಸಹಿಸಲಾಗದು. ದರ್ಗಾದಲ್ಲಿ ಈಶ್ವರ ಲಿಂಗವಿರು ಸ್ಥಳದಲ್ಲಿ ದೇವಾಲಯವಾಗಬೇಕು. ಇದೇ ರೀತಿ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ಸಹಿಸುವುದಿಲ್ಲ. ಯೋಗಿ ಮತ್ತು ಮೋದಿ ಅವರು ಶ್ರೀಕೃಷ್ಣನ ಅವತಾರಿಗಳಿದ್ದಾರೆ ಎಂದರು.

ಕಡಗಂಚಿ ಕಟ್ಟಿಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಂದಗಾಂವ ಮಠದ ರಾಜಶೇಖರ ಸ್ವಾಮಿಗಳು, ಖಜೂರಿ ಮಠದ ಮುರುಘೇಂದ್ರ ಮಹಾಸ್ವಾಮಿಗಳು, ಯಳಸಂಗಿಯ ಪರಮಾನಂದ ಸ್ವಾಮಿಗಳು, ಸಿದ್ಧಲಿಂಗ ಶಿವಾಚಾರ್ಯರು, ಕಿಣ್ಣಿಸುಲ್ತಾನ ಮಠದ ಶಿವಶಾಂತಲಿಂಗ ಶಿವಾಚಾರ್ಯರು ಸೇರಿ ೧೭ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

ವಿಧಾನ ಪರಿಷತ್ ಸದಸ್ಯ ಶಶೀಲ ಜಿ. ನಮೋಶಿ ಮಾತನಾಡಿ, ಆಳಂದ ದರ್ಗಾದಲ್ಲಿನ ಶಿವಲಿಂಗಕ್ಕೆ ಹೊಲಸು ಎರಚಿ ಅವಮಾನಿಸಿದ್ದ ಬಗ್ಗೆ ಶಾಸಕ ಸುಭಾಷ ಗುತ್ತೇದಾರ ಅವರು ಸದನದಲ್ಲಿ ರಕ್ಷಣೆ ನೀಡುವಂತೆ ಹಾಗೂ ಶಿವಲಿಂಗ ಸ್ಥಳವನ್ನು ಅಭಿವೃದ್ಧಿ ಪಡಿಸುವಂತೆ ಕೋರಿದ್ದಾರೆ. ಹಿಂದುಪರ ಧ್ವನಿ ಎತ್ತಿದ ಶಾಸಕರ ವಿರುದ್ಧ ಅವಹೇಳನಕಾರಿ ಪದಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ಮುಂದೆ ಇಂಥ ಘಟನೆ ಮರುಕಳಿಸಬಾರದು ಎಂದು ಅವರು ಎಚ್ಚರಿಸಿದರು.

ಬೀದರ್‌ನ ಈಶ್ವರಸಿಂಗ ಠಾಕೂರ ಮಾತನಾಡಿ, ಹಿಂದುಳ ಮೇಲೆ ಆಗುವ ದೌರ್ಜನ್ಯ ಸಹಿಸಲಾಗದು. ದರ್ಗಾದಲ್ಲಿ ದೇವಸ್ಥಾನ ನಿರ್ಮಾಣವಾಗುವರೆಗೂ ಹೋರಾಟ ನಡೆಯಲಿದೆ. ಇಡೀ ಜಿಲ್ಲೆಯ ಹಿಂದು ಸಮಾಜವನ್ನು ಶಾಸಕರ ಬೆನ್ನಿಗೆ ನಿಂತುಕೊಳ್ಳಲಿದೆ ಎಂದರು.

ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸದಸ್ಯ ಅಮರನಾಥ ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಮಲ್ಲಣ್ಣಾ ನಾಗೂರೆ, ರಾಜಶೇಖರ ಮಲಶೆಟ್ಟಿ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ನಿತೀನ ಗುತ್ತೇದಾರ, ಸಂಜಯ ಮಿಸ್ಕಿನ್, ಚಂದ್ರಕಾಂತ ಘೋಡಕೆ, ಮಲ್ಲಿಕಾರ್ಜುನ ಕಂದಗುಳ್ಳೆ, ಶ್ರೀಮಂತ ನಾಮಣೆ, ಅಶೋಕ ಗುತ್ತೇದಾರ ಸೇರಿದಂತೆ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದು, ತಹಸೀಲ್ದಾರ ಯಲ್ಲಪ್ಪ ಸುಬೇದಾರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.

ಬಾಲಕನೊಬ್ಬನ ಬಂಧನ:  ಸಾಮಾಜಿಕ ಜಾಲತಾಣದಲ್ಲಿ ಶಾಸಕ ಸುಭಾಷ ಗುತ್ತೇದಾರ ವಿರದ್ಧ ಅವಾಚ್ಯಶಬ್ದಗಳಿಂದ ನಿಂಧಿಸಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಾಲಕನಮೇಲೆ ಪ್ರಕರಣ ದಾಖಲಿಸಿಕೊಂಡು ಆತನಿಗೆ ಬಂಧಿಸಲಾಗಿದೆ ಎಂದು ಸಿಪಿಐ ಮಂಜುನಾಥ ಅವರು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರ ಮುಚ್ಚಿಕೊಳ್ಳಲು ಶಾಸಕರ ತಂತ್ರ ಆರೋಪ; ಆಳಂದ: ಒಂದು ತಿಂಗಳಿಂದಲೂ ರೈತರ ಬೇಡಿಕೆಗೆ ಒತ್ತಾಯಿಸಿ ತಾಪಂ ಕಚೇರಿಯ ಮುಂದೆ ಹೋರಾಟ ನಡೆದರು ಈ ಬಗ್ಗೆ ಚಕಾರ ಎತ್ತದ ಶಾಸಕರು, ಇಲ್ಲಸಲ್ಲದ ವಿಷಯ ಎತ್ತಿ ಅಶಾಂತಿ ನಿರ್ಮಾಣದ ತಂತ್ರವಾಗಿದೆ. ಮೂರು ವರ್ಷಗಳಿಂದಲೂ ನಡೆದ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಷಡ್ಯಂತ್ರವಾಗಿದೆ. ಇದರಿಂದ ತಾಲೂಕಿಗೆ ಯಾವುದೇ ಲಾಭವಿಲ್ಲ. – ಮೌಲಾ ಮುಲ್ಲಾ, ಸಿಪಿಐ ರಾಜ್ಯ ಕಾರ್ಯಕಾರಣಿ ಮಂಡಳಿಯ ಸದಸ್ಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here