ಕಲಬುರಗಿ: ಕುರುಬ ಸಮುದಾಯದಲ್ಲಿ ತಲೆ ಎತ್ತುತ್ತಿರುವ ಹಲವು ಸಮಸ್ಯೆಗಳನ್ನು ಕ್ರಮವಾಗಿ ಪರಿಹರಿಸುವಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕುರುಬ ಸಮಾಜದ ಯುವ ಮುಖಂಡ ನಿಂಗರಾಜ ಬಗಲೂರು ಅವರು ಹೇಳಿದರು.
ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಭಗವಂತರಾಯ ಗೌಡ ಕರೆಪ್ಪಗೌಡ ಪಾಟೀಲ್ ಅವರಿಗೆ ಗ್ರಾಮದ ಯುವ ಘಟಕದಿಂದ ಸತ್ಕರಿಸಿ ಅವರು ಮಾತನಾಡಿದರು.
ಚಿಕ್ಕ ಗ್ರಾಮದಲ್ಲಿ ಬೆಳೆದು ಇದೀಗ ರಾಜ್ಯಮಟ್ಟದಲ್ಲಿ ಸಂಘದ ಅಧ್ಯಕ್ಷರಾಗಿರುವುದು ಊರಿಗೆ ಹೆಮ್ಮೆಯ ವಿಷಯವಾಗಿದ್ದು, ಸಮಾಜ ಎದುರಿಸುತ್ತಿರುವ ಹಲವಾರು ಅಡೆತಡೆಗಳನ್ನು
ನಿವಾರಿಸುವಲ್ಲಿ ಭಗವಂತರಾಯ ಅವರು ಶ್ರಮಿಸುತ್ತಾರೆಂದು ಭರವಸೆಯಿದೆ ಎಂದು ನಿಂಗರಾಜ ಬಗಲೂರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕಂಟೆಪ್ಪ ಗೋದಿಹಾಳ, ಭಾಗು ಕರಗೊಂಡ, ಮಡಿವಾಳ ಕರಗೊಂಡ, ಸಿದ್ದರಾಮ ಆನಗೊಂಡ, ಮಲ್ಲಿನಾಥ ಕಾಬಿ, ಬಸವರಾಜ ಕರಗೊಂಡ, ಗಂಗಪ್ಪ ಕಂಟೇಕರ್ ಸೇರಿದಂತೆ
ಮತ್ತಿತರರು ಹಾಜರಿದ್ದರು.