ನಗರದಲ್ಲಿ ಹೆಚ್ಚುತ್ತಿರುವ ಪಾಸಿಟಿವಿಟಿ ದರ/ ನಗರದಲ್ಲಿ ಆತಂಕದ ಮನೆ ಮಾಡಿದ ಕೊರೊನಾ

0
61

ಶಹಾಬಾದ: ನಗರದಲ್ಲಿ ಕೇವಲ ಮೂರು ದಿನಗಳಲ್ಲಿ ೧೬ಕ್ಕೂ ಹೆಚ್ಚು ಜನರಲ್ಲಿ ಕರೊನಾ ಪಾಸಿಟಿವ್ ಕಂಡು ಬಂದಿದ್ದು, ಕೋವಿಡ್-೧೯ ಮೂರನೇ ಅಲೆ ಶಹಾಬಾದ ನಗರಕ್ಕೆ ಬಿಸಿ ತಟ್ಟಿದ್ದು, ನಗರದಲ್ಲಿ ಆತಂಕದ ಮನೆ ಮಾಡಿದೆ.

ಮೂರು ದಿನಗಳ ಹಿಂದಷ್ಟೇ ಎರಡು ಕೊರೊನಾ ಪಾಸಿಟಿವ್ ಕಂಡು ಬಂದಿತ್ತು.ಅದರ ಬೆನ್ನಲ್ಲೆ ನಗರದ ಕೆನರಾ ಬ್ಯಾಂಕಿನಲ್ಲಿ ೪ ಹಾಗೂ ಎಸ್‌ಬಿಐ ಬ್ಯಾಂಕ್‌ನ ೫ ಸಿಬ್ಬಂದಿಗಳಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ ಎಂದು ಹೇಳಲಾಗುತ್ತಿದ್ದು, ಎರಡು ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ. ಅಲ್ಲದೇ ಸೋಮವಾರದಂದು ಪೊಲೀಸರಿಗೆ ಕೋವಿಡ್-೧೯ ಪರೀಕ್ಷೆಗೆ ಒಳಪಡಿಸಿದಾಗ ಇಬ್ಬರು ಪೊಲೀಸ್ ಪೇದೆಗಳಿಗೆ ಕೊರೊನಾ ದೃಢಪಟ್ಟಿದೆ. ಎಲ್ಲಾ ಸಿಬ್ಬಂದಿಗಳಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

Contact Your\'s Advertisement; 9902492681

ಆದರೂ ದಿನದಿಂದ ದಿನಕ್ಕೆ ಕೊರೊನಾ ಸೊಂಕಿರ ವ್ಯಕ್ತಿಗಳು ಪತ್ತೆಯಾಗುತ್ತಿದ್ದು, ನಗರದಲ್ಲಿ ಆತಂಕ ಸೃಷ್ಠಿಸುತ್ತಿದೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೊಂಕಿತ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರನ್ನು ಹೋಮ್ ಕ್ವಾರಂಟೈನ್ ಮಾಡಿಸಲು ಮುಂದಾಗಿದ್ದಾರೆ.ಅಲ್ಲದೇ ಶಾಲಾ-ಕಾಲೇಜುಗಳಿಗೆ ತೆರಳಿ ೧೫-೧೮ ವರ್ಷದೊಳಗಿನ ಮಕ್ಕಳಿಗೆ ಲಸಿಕೆಗಳನ್ನು ಹಾಕಲು ಮುಂದಾಗಿದ್ದಾರೆ.೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಕೂಡ ನೀಡಲಾಗುತ್ತಿದೆ. ಇದರ ಮಧ್ಯೆಯೂ ಕೊರೊನಾ ಹೆಚ್ಚಾಗುತ್ತಿರುವುದು ಮಾತ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ನೈಟ್ ಕರ್ಫ್ಯೂ, ವೀಕೆಂಡ್ ಕರ್ಪ್ಯೂಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದ್ದರೂ, ದಿನೇ ದಿನೇ ಕರೋನಾ ಪಾಸಿಟಿವ್ ಪ್ರಕರಣಗಳಲ್ಲಿ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಶನಿವಾರದಿಂದ ಸೋಮವಾರದೊಳಗೆ ಮೂರು ದಿನಗಳಲ್ಲಿ ಸುಮಾರು ೧೬ಕ್ಕೂ ಹೆಚ್ಚು ಕರೋನಾ ಪಾಸಿಟಿವ್ ದೃಢವಾಗಿರುವುದು ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ.ಇನ್ನೂ ಹೆಚ್ಚು ಕೊರೊನಾ ಸೊಂಕಿತ ವ್ಯಕ್ತಿಗಳು ಪತ್ತೆಯಾಗಬಹುದು ಎಂದು ಹೇಳಲಾಗುತ್ತಿದೆ.

ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಮಾತ್ರ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಖೇದದ ಸಂಗತಿ. ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ.ಇವರನ್ನು ಯಾರು ಹೇಳೋರು ಕೆಳೋರು ಇಲ್ಲದಂತಾಗಿದೆ.ಮತ್ತೆ ತಾಲೂಕಾಡಳಿತ ಎರಡನೇ ಅಲೆ ಸಂದರ್ಭದಲ್ಲಿ ಕೈಗೊಂಡ ಕಟ್ಟು ನಿಟ್ಟಿನ ಕ್ರಮ ಮತ್ತೆ ಕೈಗೊಳ್ಳಬೇಕಾಗಿದೆ.

ನಗರದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗುತ್ತಿದ್ದು, ಆತಂಕ ಮನೆಮಾಡಿದೆ. ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಸಾಮಾಜಿಕ ಅಂತರ ಕಾಪಾಡಿ.ನಮ್ಮ ಸ್ವಾಸ್ಥ್ಯದ ಜತೆಗೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಮಾಸ್ಕ್ ಧರಿಸದ ಜನರಿಗೆ ದಂಡ ಹಾಕಲು ಮುಂದಾಗುತ್ತಿದ್ದೆವೆ.ಅದಕ್ಕಾಗಿ ತಂಡ ರಚಿಸುತ್ತಿದ್ದೆವೆ.ಕೂಡಲೇ ಕೊರೊನಾ ತಡೆಗಟ್ಟಲು ಎಲ್ಲಾ ಕ್ರಮಕೈಗೊಳ್ಳುತ್ತೆವೆ – ಸುರೇಶ ವರ್ಮಾ ತಹಸೀಲ್ದಾರ ಶಹಾಬಾದ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here