ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

0
27

ಭಾಲಿ: ಪಟ್ಟಣದ ಹಿರೇಮಠ ಸಂಸ್ಥಾನ ಆವರಣದಲ್ಲಿ ನಡೆಯುವ ಗುರುಪ್ರಸಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಹಾಗೂ ರಾಜಮಾತಾ ಜೀಜಾವು ಇವರ ಜಯಂತಿ ಆಚರಣೆ ಮಾಡಲಾಯಿತು.

ಸಮಾರಂಭದ ಸಾನಿಧ್ಯ ವಹಿಸಿ, ಇಂದು ವಿಶೇಷವಾದ ದಿನ. ಏಕೆಂದರೆ ರಾಜಾಮಾತಾ ಜೀಜಾವು ಇವರು ಒಬ್ಬ ಆದರ್ಶ ಮಾತೆ. ಛತ್ರಪತಿ ಶಿವಾಜಿ ಮಹಾರಾಜರ ತಾಯಿ. ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಕಟ್ಟಿ ನಮ್ಮ ಅಸ್ಮೀತೆ, ಧರ್ಮ, ಸಂಸ್ಕೃತಿ ಬೆಳೆಸಿದ ಮಹಾನ್ ಚೇತನರು. ಮೊಗಲರ ಜೊತೆ ಹೋರಾಟ ಮಾಡುತ್ತಲೇ ನಮ್ಮ ಜನರ ಏಳಿಗೆಗಾಗಿ ಸ್ವರಾಜ್ಯವನ್ನು ಸ್ಥಾಪಿಸಿದರು.

Contact Your\'s Advertisement; 9902492681

ಇದಕ್ಕೆ ಪ್ರೇರಣೆಯಾದವರು ತಾಯಿ ಜೀಜಾಮಾತಾ ಅವರು. ಹಾಗೆಯೇ ಇಂದು ಯುವಕರಿಗೆ ಪ್ರೇರಣಾದಾಯಕರಾದ ಸ್ವಾಮಿ ವಿವೇಕಾನಂದರ ಜಯಂತಿ. ಸ್ವಾಮಿ ವಿವೇಕಾನಂದರು ನಮ್ಮ ದೇಶ ಕಂಡ ಅಪರೂಪದ ಸನ್ಯಾಸಿಗಳು. ಅವರು ಕ್ರಾಂತಿಕಾರಕ ವಿಚಾರಧಾರೆಯ ಮಹಾಪುರಷರು. ಅವರು ಯುವಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಅಮೂಲ್ಯವಾದಂತಹ ಸಂದೇಶವನ್ನು ನೀಡಿದ್ದಾರೆ. ‘ಏಳೆ ಎದ್ದೇಳಿ ಗುರಿ ಮುಟ್ಟುವತನ ನಿಲ್ಲದಿರಿ’ ಅವರ ಈ ಒಂದು ಸಂದೇಶವೇ ಇಂದಿನ ಯುವಕರು ಆಚರಣೆಯಲ್ಲಿ ತಂದರೆ ನಮ್ಮ ದೇಶದ ಉದ್ಧಾರ ಇಂದೇ ಆಗುತ್ತದೆ ಎಂದು ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿದರು.

ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು ಸ್ವಾಮಿ ವಿವೇಕಾನಂದರ ಜೀವನ ಸಾಧನೆ ಕುರಿತು ಮಕ್ಕಳಿಗೆ ಪ್ರೇರಣಾದಾಯಕವಾದಂತಹ ಅನೇಕ ಘಟನೆಗಳನ್ನು ಹೇಳುತ್ತಾ ಮಕ್ಕಳಲ್ಲಿ ಪ್ರೋತ್ಸಾಹ ತುಂಬಿದ್ದರು.

ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಸಿದ್ರಾಮ ರಾಜಪೂರೆ ಹಾಗೂ ಸಿಬ್ಬಂದಿಯವರಾದ ಅಶೋಕ ನೆಲವಾಡೆ, ಜ್ಯೋತಿ ಆನಂದವಾಡೆ, ವಿರೇಶ ನಾಗಲಿಕರ, ದೀಪಿಕಾ ಎಸ್. ರೆಡ್ಡಿ, ರಾಜು ಜುಬರೆ ಹಾಗೂ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here