ಕಲಬುರಗಿ: ಆಳಂದ ಪೊಲೀಸರ ಭರ್ಜರಿ ಬೇಟೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಮನೆಗಳ ಬೀಗ ಮುರಿದು ಬೆಳ್ಳೆ, ಚಿನ್ನದ ಆಭರಣಗಳು ಹಾಗೂ ನಗದು ಕಳುವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ೪.೭೦ ಲಕ್ಷ ರೂಪಾಯಿ ಮೌಲ್ಯದ ಚಿನ್ನ ಬೆಳ್ಳೆ ನಗದು ಹಣವನ್ನು ಜಪ್ತಿಮಾಡಿಕೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಗುಲಾಬ ಗಂಗಾರಾಮ ಚವ್ಹಾಣ ಕುಮಸೂರ ನಾಯಕ ತಾಂಡಾ ಆಳಂದ, ಹೀರಾಚಂದ ಪ್ರಕಾಶ ಪಾಟೀಲ್ , ಜೈನ ಗಲ್ಲಿ ಆಳಂದ ಇವರನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ಮಂಗಳವಾರ ಖಚಿತಪಡಿಸಿದ್ದಾರೆ. ಬಂಧಿತರಿಂದ ೧೦೧ ಗ್ರಾಂ. ಚಿನ್ನದ ಆಭರಣಗಳು, ೧೫೦ ಗ್ರಾಂ ಬೆಳ್ಳಿ ಆಭರಣಗಳು ಒಟ್ಟು ೪.೭೬ ಲಕ್ಷ ಸಾಮಗ್ರಿ ವಶಕ್ಕೆ ಪಡಿಸಕೊಂಡು ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಅಗಿದೆ. ಬಂಧಿತರ ಮೇಲೆ ಆಳಂದ ಮತ್ತು ನಿಂಬರ್ಗಾ ಠಾಣೆಯ ಒಟ್ಟು ೪ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಸದರಿ ಪ್ರಕರಣಗಳ ಪತ್ತೆ ಕುರಿತು. ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಇಶಾ ಪಂತ ಹಾಗೂ ಹೆಚ್ಚುವರಿ ಪೊಲೀಸ ಅಧೀಕ್ಷಕರಾದ ಪ್ರಸನ್ನಕುಮಾರ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಆಳಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಅವರ ನೇತೃತ್ವದಲ್ಲಿ ಸಿಪಿಐ ಮಂಜುನಾಥ ಎಸ್ , ಪಿಎಸ್ಐ ಮಹಾಂತೆಶ ಪಾಟೀಲ್ ಹಾಗೂ ಸಿಬ್ಬಂದಿಗಳಾದ ರವೀಂದ್ರ ವರ್ಮಾ, ಶಿವಾಜಿ ಚವ್ಹಾಣ, ಸುಧಾಕರ ಪಾಟೀಲ್, ಗೀತಾ, ಮಲ್ಲಿಕಾರ್ಜುನ ಗುಟ್ಟರ, ಗುರುರಾಜ, ಸಿದ್ಧರಾಮ ಬಿರಾದಾರ ಅವರ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡಿದೆ.
ಸದರಿ ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗು ಸಿಬ್ಬಂದಿ ವರ್ಗಕ್ಕೆ ಪೊಲೀಸ ಅಧೀಕ್ಷಕರು ಕಲಬುರಗಿ ಇವರು ಶ್ಲಾಂಘನೀಯ ವ್ಯಕ್ತ ಪಡಿಸಿದ್ದಾರೆ.