ಸ್ಲಂ ನಿವಾಸಿಗಳಿಗೆ ಪಿಎಂಎವಾಯ್ ಯೋಜನೆಯಲ್ಲಿ ಸಾಲ: ವಸತಿ ಸಚಿವ ವಿ.ಸೋಮಣ್ಣ

0
7

ಕಲಬುರಗಿ: ವಸತಿ ಸಚಿವರಾದ ವಿ.ಸೋಮಣ್ಣನವರನ್ನು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಮಿತಿಯ ನಿಯೋಗ ಭೇಟಿಯಾಗಿ ರಾಜ್ಯದ ಸ್ಲಂ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಯಲ್ಲಿ ಸಬ್ಸಿಡಿ ೬ ಲಕ್ಷ ಹೆಚ್ಚಳಕ್ಕೆ ಮತ್ತು ಹಕ್ಕುಪತ್ರ ವಿತರಣೆಯನ್ನು ಚುರುಕುಗೊಳಿಸಲು ಆಗ್ರಹಿಸಿ, ವಸತಿ ಹಕ್ಕು ಕಾಯಿದೆ ಜಾರಿಗೊಳಿಸುವಂತೆ ಹಾಗೂ ಇತ್ತೀಚೆಗೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಡೆದ ಹೋರಾಟದ ಹಕ್ಕೋತ್ತಾಯಗಳನ್ನು ಸಲ್ಲಿಸಿ ಕುಂದುಕೊರತೆ ಸಭೆ ಕರೆಯಲು ಒತ್ತಾಯಿಸಲಾಯಿತು.

ಇದೇ ಸಂದರ್ಭದಲ್ಲಿ ವಸತಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಜ್ಯದ ೧೮೭೩ ಸರ್ಕಾರಿ ಮತ್ತು ಸ್ಥಳೀಯ ಸಂಸ್ಥೆಗಳ ಅಧೀನದಲ್ಲಿರುವ ಕೊಳಚೆ ಪ್ರದೇಶಗಳ ೩.೧೨ ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಶ್ರಮಿಸಿ ಭೂ ಒಡೆತನ ನೀಡಲು ವಸತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಿರುವುದಕ್ಕಾಗಿ ಅಭಿನಂದಿಸಲಾಯಿತು.

Contact Your\'s Advertisement; 9902492681

ಮನವಿ ಸ್ವೀಕರಿಸಿ ಮಾತನಾಡಿದ ವಿ.ಸೋಮಣ್ಣನವರು ಹಿಂದಿನ ಸರ್ಕಾರಗಳು ಸ್ಲಂ ಜನರಿಗೆ ಹಕ್ಕುಪತ್ರ ನೀಡದೇ ಮೋಸ ಮಾಡಿದ್ದವು, ನಾನು ವಸತಿ ಸಚಿವನಾದ ಮೇಲೆ ರಾಜ್ಯದಲ್ಲಿರುವ ಲಕ್ಷಾಂತರ ಕುಟುಂಬಗಳಿಗೆ ಗುಡಿಸಲು ಮುಕ್ತ ಮಾಡಲು ಹಾಗೂ ಕೊಳಚೆ ಪ್ರದೇಶಗಳ ವಾಸಿಗಳು ವಾಣಿಜ್ಯ ಬ್ಯಾಂಕುಗಳಿಂದ ಸಾಲ ಪಡೆಯಲು ಹಕ್ಕುಪತ್ರ ಕೊಡುವ ಜೊತೆಗೆ ಸಾಂಕೇತಿಕ ದರದಲ್ಲಿ ನೊಂದಾಯಿಸಿ ಭೂ ಒಡೆತನ ಕೊಡುವ ಮೂಲಕ ಅನುಕೂಲ ಕಲ್ಪಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ನಗರ ವಸತಿ ಯೋಜನೆಯಲ್ಲಿ ರಾಜ್ಯದಲ್ಲಿರುವ ನಿವೇಶನ ರಹಿತರಿಗೆ ಭೂಮಿ ಮೀಸಲಿಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಈಗಾಗಲೇ ೯೭ ಸಾವಿರ ಮನೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲಿನ ಸಬ್ಸಿಡಿ ಫಲಾನುಭವಿಗಳ ವಂತಿಕೆ ಕ್ರೂಢೀಕರಿಸಿ ಉಳಿದ ಮೊತ್ತವನ್ನು ಬ್ಯಾಂಕುಗಳಲ್ಲಿ ಸಾಲ ಪಡೆಯಲು ಮುಂದಾಗಿದ್ದೇವು, ಆದರೆ ಹಲವಾರು ತೊಡಕುಗಳಿರುವುದರಿಂದ ಮಂಡಳಿಯೇ ಹುಡ್ಕೋದಿಂದ ಸಾಲ ಪಡೆದು ಫಲಾನುಭವಿಗಳಿಂದ ೨೦ ವರ್ಷಗಳಲ್ಲಿ ಸಂಗ್ರಹಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದ್ದು, ಕನಿಷ್ಠ ೫ ಲಕ್ಷ ರೂಗಳ ನೆರವನ್ನು ಸರ್ಕಾರದಿಂದ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿ, ಸ್ಲಂ ನಿವಾಸಿಗಳಿಗೆ ಪಿಎಂಎವಾಯ್ ಸರ್ವರಿಗೂ ಸೂರು ಯೋಜನೆಯಲ್ಲಿ ಸಂಪನ್ಮೂಲ ಮತ್ತು ದಾಖಲಾತಿಗಳ ಕ್ರೂಢೀಕರಣಕ್ಕೆ ಸಿಂಗಲ್ ವಿಂಡೋ ಯೋಜನೆ ಜಾರಿಗೊಳಿಸಿ ಸಬ್ಸಿಡಿಯನ್ನು ೬ ಲಕ್ಷಕ್ಕೆ ಏರಿಕೆ ಮಾಡಬೇಕು. ಹಕ್ಕುಪತ್ರ ನೀಡುವ ಸಂಬಂಧ ಜಿಲ್ಲಾ ಮಟ್ಟಗಳಲ್ಲಿ ಸಮಿತಿ ರಚಿಸಿ ೬ ತಿಂಗಳ ಒಳಗಾಗಿ ವಿತರಿಸಬೇಕು.

ಸಮ್ರಗ ವಸತಿ ಹಕ್ಕು ಕಾಯಿದೆ ಜಾರಿಗೊಳಿಸುವ ಮೂಲಕ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಭೂಮಿ ಮೀಸಲಿಡುವ ಲ್ಯಾಂಡ್‌ಬ್ಯಾಂಕ್ ಘೋಷಿಸಬೇಕು. ೨೦೧೬ರ ಸ್ಲಂ ನೀತಿ ಅನ್ವಯ ಜಿಲ್ಲಾ ಮಟ್ಟದ ಸಮಿತಿಗಳ ರಚನೆಗೆ ವಸತಿ ಇಲಾಖೆಯಿಂದ ಸುತ್ತೋಲೆ ಹೊರಡಿಸಬೇಕೆಂದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವರು, ಸಂಘಟನೆಯೊಂದಿಗೆ ಸಭೆ ಕರೆಯುವುದಾಗಿ ಹೇಳಿದರು.

ವಿಭಾಗೀಯ ಸಂಚಾಲಕರಾದ ಚಂದ್ರಮ್ಮ, ಜನಾರ್ಧನ್ ಹಳ್ಳಿಬೆಂಚಿ, ಇಮ್ತಿಯಾಜ್ ಆರ್ ಮಾನ್ವಿ, ರೇಣುಕಾ ಸರಡಗಿ, ಮಂಜಣ್ಣ ಕೆ, ರೇಣುಕಾ ಯಲ್ಲಮ್ಮ, ಶೇಖರ್ ಬಾಬು, ಅಲ್ಲಮಪ್ರಭು ನಿಂಬರ್ಗಾ ಕೆಂಪರಾಜ ವಿ. ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here